ಕರ್ನಾಟಕ

karnataka

ETV Bharat / state

ಅತೃಪ್ತ ಶಾಸಕರಿಗೆ ಅನರ್ಹತೆ ಭೀತಿ: ಕೈ ನಾಯಕರಿಗೆ ಕರೆ ಮಾಡಲು ಯತ್ನ!

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಸೇರಿರುವ ಅತೃಪ್ತ ಶಾಸಕರು ಅನರ್ಹತೆ ಭೀತಿಯಲ್ಲಿದ್ದು, ಕಾಂಗ್ರೆಸ್​ ನಾಯಕರಿಗೆ ಕರೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಅತೃಪ್ತ ಶಾಸಕರು

By

Published : Jul 27, 2019, 7:22 PM IST

ಬೆಂಗಳೂರು: ಮುಂಬೈನಲ್ಲಿರುವ ಅತೃಪ್ತ ಶಾಸಕರು ಅನರ್ಹತೆ ಭೀತಿಯಿಂದ ಕಾಂಗ್ರೆಸ್​ ನಾಯಕರಿಗೆ ದೂರವಾಣಿ ಕರೆ ಮಾಡಿ ಮಾತನಾಡುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ.

ಇಬ್ಬರು ಅತೃಪ್ತರು ಕರೆ ಮಾಡಿರುವ ಬಗ್ಗೆ ಸಿದ್ದರಾಮಯ್ಯ ಈಗಾಗಲೇ ಒಪ್ಪಿಕೊಂಡಿದ್ದಾರೆ. ಅತೃಪ್ತರಾದ ಭೈರತಿ ಬಸವರಾಜು, ಎಂಟಿಬಿ ನಾಗರಾಜ್ ಕರೆ ಮಾಡಿ ದೂರವಾಣಿ ಮೂಲಕ ಅನರ್ಹತೆ ಸಂಬಂಧ ಮಾತನಾಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಸ್ಪೀಕರ್ ಮೂವರನ್ನು ಅನರ್ಹಗೊಳಿಸಿರುವ ಹಿನ್ನೆಲೆಯಲ್ಲಿ ಎಲ್ಲಿ ನಮ್ಮನ್ನೂ ಶಾಸಕ ಸ್ಥಾನದಿಂದ ಅನರ್ಹ ಮಾಡುತ್ತಾರೆಂಬ ಭೀತಿ ಕೆಲ ಅತೃಪ್ತರಲ್ಲಿ ಕಾಡುತ್ತಿದೆ.‌ ಹೀಗಾಗಿ ಬೆಳಗ್ಗೆ ಸಿದ್ದರಾಮಯ್ಯಗೆ ಅತೃಪ್ತ ಶಾಸಕರು ಕರೆ ಮಾಡಿದ್ದಾರೆ. ಆದರೆ, ಶಾಸಕರ ಕರೆಯನ್ನು ಸಿದ್ದರಾಮಯ್ಯ ಸ್ವೀಕರಿಸಿಲ್ಲ ಎನ್ನಲಾಗಿದೆ.

ಇನ್ನು ಮಾಜಿ ಡಿಸಿಎಂ ಪರಮೇಶ್ವರ್​ಗೂ ಮತ್ತೊಬ್ಬ ಅತೃಪ್ತ ಶಾಸಕ ಎಸ್.ಟಿ‌.ಸೋಮಶೇಖರ್ ಅನರ್ಹಗೊಳಿಸುವ ಭಯದಿಂದ ಕರೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ABOUT THE AUTHOR

...view details