ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮನೆ ಸೇರಿದಂತೆ ಒಟ್ಟು 14 ಕಡೆಗಳಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಶೋಧ ಮುಂದುವರೆಸಿದ್ದಾರೆ. ಡಿಕೆಶಿ ಇಂಧನ ಸಚಿವರಾಗಿದ್ದ ಸಂದರ್ಭದಲ್ಲಿ ಸೋಲಾರ್ ಟೆಂಡರ್ ಮತ್ತು ಎನರ್ಜಿ ಕಾಂಟ್ರ್ಯಾಕ್ಟರ್ಗಳಿಂದ ಕಿಕ್‌ಬ್ಯಾಕ್ ಹಣವನ್ನ ಪಡೆದು ಸಾರ್ವಜನಿಕ ಹಣವನ್ನ ದುರುಪಯೋಗ ಮಾಡಿದ್ದಾರೆ ಎಂಬ ಆರೋಪ ಹಿನ್ನೆಲೆ ಸಿಬಿಐ ಇಂದು ದಿಢೀರ್ ದಾಳಿ ನಡೆಸಿದೆ.
ಸಾರ್ವಜನಿಕರ ಹಣದಿಂದಲೇ ಡಿ ಕೆ ಶಿ ಬಹುಕೋಟಿ ಆಸ್ತಿ ಗಳಿಸಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಪಟ್ಟಂತಹ ಸಾಕ್ಷಿಗಳನ್ನ ಐಟಿ ಹಾಗೂ ಇಡಿ ಅಧಿಕಾರಿಗಳು ಕಲೆ ಹಾಕಿದ್ದರು ಎನ್ನಲಾಗ್ತಿದೆ.