ವಾಸ್ತವತೆ ಅರ್ಥ ಮಾಡಿಕೊಂಡು ಸಿಎಂ ರಾಜೀನಾಮೆ ಕೊಡಲಿ: ಸುರೇಶ್ ಕುಮಾರ್ - undefined
ರಾಮಲಿಂಗಾರೆಡ್ಡಿ ವಿಶ್ವನಾಥ್ ಅವರಂಥ ಹಿರಿಯರೇ ರಾಜೀನಾಮೆ ಕೊಡುತ್ತಾರೆ ಎಂದರೆ, ಮೈತ್ರಿ ಪಕ್ಷದೊಳಗಿನ ಒಳಬೇಗುದಿ ಯಾವ ಮಟ್ಟದಲ್ಲಿ ಸ್ಪೋಟಗೊಂಡಿದೆ ಎಂಬುದು ಗೊತ್ತಾಗುತ್ತದೆ. ಈ ಸರ್ಕಾರ ಆಡಳಿತ ನಡೆಸುವಷ್ಟು ಶಾಸಕರನ್ನು ಕಳ್ಕೊಂಡಿದೆ, ಮೈತ್ರಿ ಸರ್ಕಾರಕ್ಕೆ ಬಹುಮತ ಇಲ್ಲ ಕೂಡಲೇ ರಾಜಿನಾಮೆ ನೀಡಬೇಕು ಎಂದರು.
ಸುರೇಶ್ ಕುಮಾರ್
ಬೆಂಗಳೂರು: ಇಂದು ಇನ್ನೂ ಮೂವರು ರಾಜೀನಾಮೆ ನೀಡಿದ್ದಾರೆ ಅಂದರೆ ಇದು ಗೋಡೆಯ ಮೇಲಿನ ಬರಹದಷ್ಟೇ ಸ್ಪಷ್ಟ.ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದೆ.ಇನ್ನಾದರೂ ಸಿಎಂ ಕುನಾರಸ್ವಾಮಿ ವಾಸ್ತವತೆಯನ್ನು ಅರ್ಥ ಮಾಡಿಕೊಂಡು ರಾಜೀನಾಮೆ ಕೊಡಬೇಕು ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಆಗ್ರಹಿಸಿದ್ದಾರೆ.