ಕರ್ನಾಟಕ

karnataka

ETV Bharat / state

45 ವರ್ಷದೊಳಗಿನವರಿಗೂ ಕೋವಿಡ್ ಲಸಿಕೆ ನೀಡಲು ಸಿದ್ಧತೆ ನಡೆದಿದೆ: ಸದಾನಂದ ಗೌಡ - Sadananda Gowda take 2nd dose of covid vaccine

ಮೊದಲ ಡೋಸ್ ತೆಗೆದುಕೊಂಡ ಸುಮಾರು 40 ದಿನಗಳ ನಂತರ ನಾನು ಈಗ ಎರಡನೇ ಡೋಸ್ ತೆಗೆದುಕೊಂಡಿದ್ದೇನೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ತಿಳಿಸಿದ್ದಾರೆ.

sadananda-gowda
ಸದಾನಂದ ಗೌಡ

By

Published : Apr 14, 2021, 9:16 PM IST

ಬೆಂಗಳೂರು: ಕೇಂದ್ರ ಸರ್ಕಾರವು ಸದ್ಯ 45 ವರ್ಷ ಮೇಲ್ಪಟ್ಟವರಿಗಷ್ಟೇ ಉಚಿತ ಲಸಿಕೆ ಒದಗಿಸುತ್ತದೆ. ಕೋವಿಡ್ ಲಸಿಕೆ ನೀಡಿಕೆಯನ್ನು 45 ವರ್ಷದ ಒಳಗಿನವರಿಗೂ ಆರಂಭಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ತಿಳಿಸಿದ್ದಾರೆ.

ನಗರದ ಕೆ. ಸಿ. ಜನರಲ್ ಆಸ್ಪತ್ರೆಯಲ್ಲಿ ಇಂದು ಕೋವಿಡ್ 19 ಲಸಿಕೆಯ 2ನೇ 'ಡೋಸ್' ತೆಗೆದುಕೊಂಡ ಸಚಿವರು ಮಾಧ್ಯಮದೊಂದಿಗೆ ಮಾತನಾಡಿ, 45 ವರ್ಷ ಮೇಲ್ಪಟ್ಟವರೆಲ್ಲರೂ ಲಸಿಕೆ ಹಾಕಿಸಿಕೊಳ್ಳುವಂತೆ ಕರೆ ನೀಡಿದರು. ಕೇಂದ್ರ ಸರ್ಕಾರವು 45 ವರ್ಷದೊಳಗಿನವರಿಗೂ ಲಸಿಕೆ ನೀಡುವ ಬಗ್ಗೆ ತಯಾರಿ ಮಾಡಿಕೊಳ್ಳುತ್ತಿದೆ ಎಂದರು.

ಡಿ ವಿ ಸದಾನಂದ ಗೌಡ ಮಾತನಾಡಿದರು

ದೇಶದಲ್ಲಿ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್​ ಲಸಿಕೆಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿವೆ. ಇದುವರೆಗೆ ಸುಮಾರು 22 ಕೋಟಿ ಡೋಸ್ ಉತ್ಪಾದನೆ ಮಾಡಲಾಗಿದೆ. ಈಗಾಗಲೇ 11ರಿಂದ 12 ಕೋಟಿ ಜನರಿಗೆ ಲಸಿಕೆ ಹಾಕಲಾಗಿದೆ. ಕೊರೊನಾ ನಿಯಂತ್ರಿಸಲು ಭಾರತದ ನೆರವು ಕೇಳಿದ 90 ದೇಶಗಳಿಗೆ 6 ಕೋಟಿ ಡೋಸ್ ಒದಗಿಸಲಾಗಿದೆ. ಈಗ ರಷ್ಯಾದಿಂದ ಸ್ಪುಟ್ನಿಕ್ - ವಿ ಲಸಿಕೆ ಆಮದುಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಇದರಿಂದ ಮುಂಬರುವ ದಿನಗಳಲ್ಲಿ ಲಸಿಕಾ ಅಭಿಯಾನವನ್ನು ಇನ್ನೂ ವೇಗವಾಗಿ ಮತ್ತು ವಿಸ್ತೃತವಾಗಿ ಕೈಗೊಳ್ಳಲು ನೆರವಾಗಲಿದೆ ಎಂದು ತಿಳಿಸಿದರು.

ಕೊರೊನಾ ಚಿಕಿತ್ಸೆಯಲ್ಲಿ ಬಳಸುವ ರೆಮ್ಡೆಸಿವಿರ್ ಚುಚ್ಚುಮದ್ದಿನ ಕೊರತೆಯಾಗಬಾರದು ಎಂಬ ಉದ್ದೇಶದಿಂದ ಅದರ ರಫ್ತು ನಿಷೇಧಿಸಲಾಗಿದೆ. ದೇಶದ ಏಳು ಫಾರ್ಮಾ ಕಂಪನಿಗಳು ಇದರ ಉತ್ಪಾದನೆಯ ಲೈಸನ್ಸ್ ಹೊಂದಿವೆ. ರೆಮ್ಡೆಸಿವಿರ್ ಚುಚ್ಚುಮದ್ದನ್ನು ಹೆಚ್ಚು ದಿನ ಸಂಗ್ರಹಿಸಿಡಲು ಆಗುವುದಿಲ್ಲ. ಮೂರು ತಿಂಗಳೊಳಗೆ ಅದರ ಬಳಕೆಯಾಗಬೇಕು. ದೇಶೀಯವಾಗಿ ಬೇಡಿಕೆ ಕಡಿಮೆಯಾಗಿದ್ದರಿಂದ ತಮ್ಮಲ್ಲಿರುವ ದಾಸ್ತಾನನ್ನು ಈ ಕಂಪನಿಗಳು ರಫ್ತು ಮಾಡುತ್ತಿದ್ದವು. ಉತ್ಪಾದನೆಯನ್ನೂ ಕಡಿತಗೊಳಿಸಿದ್ದವು. ಆದರೆ, ಈಗ ಸೋಂಕು ಹೆಚ್ಚಾಗುತ್ತಿರುವುದರಿಂದ ಉತ್ಪಾದನೆ ಹೆಚ್ಚಿಸುವಂತೆ ಈ ಕಂಪನಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ಲಸಿಕಾ ಅಭಿಯಾನ ಅತ್ಯಂತ ಚೆನ್ನಾಗಿಯೇ ನಡೆದಿದೆ. ಹೆಚ್ಚೆಚ್ಚು ಜನರಿಗೆ ಲಸಿಕೆ ನೀಡುವುದಷ್ಟೇ ಇದರ ಉದ್ದೇಶ ಅಲ್ಲ. ಇದರ ಬಗ್ಗೆ ಅಪನಂಬಿಕೆ ವ್ಯಕ್ತಪಡಿಸುವಂತಹ ಕೆಲಸಗಳು ಆಗಬಾರದು. ಮೊದಲ ಡೋಸ್ ತೆಗೆದುಕೊಂಡ ಸುಮಾರು 40 ದಿನಗಳ ನಂತರ ನಾನು ಈಗ ಎರಡನೇ ಡೋಸ್ ತೆಗೆದುಕೊಂಡಿದ್ದೇನೆ. ಯಾವುದೇ ಅಡ್ಡ ಪರಿಣಾಮವಾಗಿಲ್ಲ ಎಂದ ಸಚಿವರು ಸುಮಾರು 11 ಸಾವಿರ ಜನರಿಗೆ ಯಶಸ್ವಿಯಾಗಿ ಲಸಿಕೆ ಹಾಕಿದ ಕೆ ಸಿ ಜನರಲ್ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಅಭಿನಂದಿಸಿದರು.

ಓದಿ:ಮುಷ್ಕರ ಹೂಡಿದ್ರೆ ಈವರೆಗಿನ ಯಾವ ಸರ್ಕಾರವೂ ಇಷ್ಟು ಕಟುವಾಗಿರಲಿಲ್ಲ.. ಆದರೆ, ಯಡಿಯೂರಪ್ಪ..

ABOUT THE AUTHOR

...view details