ಕರ್ನಾಟಕ

karnataka

ETV Bharat / state

ಮೈಶುಗರ್ಸ್ ಹಾಗೂ ಪಿಎಸ್​ಎಸ್​ಕೆ ಕಾರ್ಖಾನೆ ಪುನಾರಂಭಿಸಿ: ಸಿಎಂಗೆ ಎಸ್ಎಂಕೆ ಪತ್ರ

ಮಂಡ್ಯದ ಮೈಶುಗರ್ಸ್ ಹಾಗೂ ಪಿಎಸ್​​ಎಸ್​ಕೆ ಕಾರ್ಖಾನೆಗಳು ಮುಚ್ಚಿದ ಹಿನ್ನಲೆಯಲ್ಲಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಜಿಲ್ಲೆಯಲ್ಲಿರುವ ಮೂರು ಖಾಸಗಿ ಕಾರ್ಖಾನೆಗಳಿಂದ ಕಬ್ಬು ಅರೆಯಲು ಸಾಧ್ಯವಿಲ್ಲ ಆದ್ದರಿಂದ ಪುನಃ ಈ ಎರಡು ಕಾರ್ಖಾನೆಗಳನ್ನು ಪುನಾರಂಭಿಸಿ ಎಂದು ಮಾಜಿ ಮುಖ್ಯಮಂತ್ರಿ ಎಸ್​.ಎಂ.ಕೃಷ್ಣ ಹಾಲಿ ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಸಿಎಂಗೆ ಎಸ್ಎಂಕೆ ಪತ್ರ

By

Published : Sep 5, 2019, 6:26 AM IST

ಬೆಂಗಳೂರು:ಮಂಡ್ಯ ಜಿಲ್ಲೆಯ ಮೈಶುಗರ್ಸ್ ಹಾಗೂ ಪಿಎಸ್​ಎಸ್​ಕೆ ಕಾರ್ಖಾನೆಗಳನ್ನು ಪುನಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮಾಜಿ ಸಿಎಂ ಎಸ್ಎಂ ಕೃಷ್ಣ ಪತ್ರ ಬರೆದಿದ್ದಾರೆ.

ಸಿಎಂಗೆ ಎಸ್ಎಂಕೆ ಪತ್ರ

ಮಂಡ್ಯ ಜಿಲ್ಲೆಯಲ್ಲಿ ಕಬ್ಬು ಪ್ರಮುಖ ಬೆಳೆಯಾಗಿದ್ದು, ಪ್ರತಿ ವರ್ಷ 40 ರಿಂದ 50 ಲಕ್ಷ ಟನ್​ ಕಬ್ಬನ್ನು ಬೆಳೆಯುತ್ತಾನೆ. ಜಿಲ್ಲೆಯಲ್ಲಿ ಪ್ರಸ್ತುತ ಕೇವಲ ಮೂರು ಖಾಸಗಿ ಕಾರ್ಖಾನೆಗಳಿವೆ. ಈ ಮೂರು ಖಾಸಗಿ ಕಾರ್ಖಾನೆಗಳಿಗೆ ಮಂಡ್ಯದ ಎಲ್ಲ ಕಬ್ಬು ಅರೆಯುವ ಸಾಮರ್ಥ್ಯ ಇಲ್ಲ. ಹೀಗಾಗಿ ಸ್ಥಗಿತಗೊಂಡಿರುವ ಮೈ ಶುಗರ್ಸ್ ಹಾಗೂ ಪಿಎಸ್​​ಎಸ್​ಕೆ ಕಾರ್ಖಾನೆಗಳನ್ನು ಪುನರಾರಂಭಿಸುವ ಮೂಲಕ ಸಂಕಷ್ಟದಲ್ಲಿರುವ ಕಬ್ಬು ಬೆಳೆಗಾರರು, ರೈತರನ್ನು ರಕ್ಷಿಸಿ ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.

ABOUT THE AUTHOR

...view details