ಕರ್ನಾಟಕ

karnataka

ETV Bharat / state

ಖಿನ್ನತೆಗೊಳಗಾದ ಕೆಪಿಟಿಸಿಎಲ್ ನೌಕರನನ್ನು ಮರುನೇಮಕ ಮಾಡಿಕೊಳ್ಳುವಂತೆ ಹೈಕೋರ್ಟ್ ಆದೇಶ - ​ ETV Bharat Karnataka

ಶಿವಮೊಗ್ಗದ ಕಾರ್ಮಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಕೆಪಿಟಿಸಿಎಲ್ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್​ ವಿಚಾರಣೆ ನಡೆಸಿ, ಮಹತ್ವದ ಆದೇಶ ಹೊರಡಿಸಿತು.

ಹೈಕೋರ್ಟ್
ಹೈಕೋರ್ಟ್

By ETV Bharat Karnataka Team

Published : Nov 3, 2023, 1:04 PM IST

ಬೆಂಗಳೂರು:ಒತ್ತಡವು ಮನುಷ್ಯನ ಆಧುನಿಕ ಜೀವನದ ಭಾಗವಾಗಿದೆ. ಒತ್ತಡದಲ್ಲಿರುವವರನ್ನು ನೌಕರಿಯಿಂದ ತೆಗೆದಲ್ಲಿ ಮಾನಸಿಕ ಖಿನ್ನತೆ ಹೆಚ್ಚಾಗಬಹುದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ವಿವಿಧ ಸಂದರ್ಭಗಳಲ್ಲಿ 632 ದಿನಗಳ ಕಾಲ ಗೈರು ಹಾಜರಾಗಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ(ಕೆಪಿಟಿಸಿಎಲ್) ನೌಕರ ಉದ್ಯೋಗಕ್ಕೆ ಮರು ಸೇರ್ಪಡೆ ಮಾಡಿಕೊಳ್ಳುವುದಕ್ಕೆ ಆದೇಶಿಸಿದೆ.

ಮಾನಸಿಕ ಖಿನ್ನತೆಗೊಳಗಾಗಿ ನೌಕರನೊಬ್ಬ ಕೆಲಸಕ್ಕೆ ಗೈರಾದ ಹಿನ್ನೆಲೆಯಲ್ಲಿ ಉದ್ಯೋಗದಿಂದ ವಜಾಗೊಳಿಸಿದ್ದ ಕ್ರಮವನ್ನು ಪುನರ್‌ಸ್ಥಾಪಿಸುವಂತೆ ಏಕ ಸದಸ್ಯಪೀಠದ ಆದೇಶವನ್ನು ಪ್ರಶ್ನಿಸಿ ಕೆಪಿಟಿಸಿಎಲ್ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ನ್ಯಾಯಪೀಠ ನಡಸಿತು.

ಸಂಕಟ ಮತ್ತು ಖಿನ್ನತೆಗಳು ಆಧುನಿಕ ಜೀವನದ ಉಪ ಉತ್ಪನ್ನಗಳಾಗಿವೆ. ಮನುಷ್ಯನ ಒತ್ತಡವು ಉದ್ಯೋಗದ ಮೇಲೆ ಮಾನಸಿಕ ಪರಿಣಾಮವನ್ನು ಬೀರುತ್ತದೆ. ಹೀಗಾಗಿ ಒತ್ತಡವನ್ನು ನಿಯಂತ್ರಿಸುವುದು ಕಷ್ಟಕರವಾಗಿದ್ದು, ದೈನಂದಿನ ಚಟುವಟುಕೆಗಳ ಮೇಲೆ ಗಂಭೀರ ಪರೀಣಾಮ ಬೀರುವ ಸಾಧ್ಯತೆಯಿರಲಿದೆ. ಅಲ್ಲದೆ, ಕೆಲಸದ ಸ್ಥಳದಲ್ಲಿ ಎದುರಾಗುವ ಒತ್ತಡಗಳು ಔದ್ಯೋಗಿಕ ಸ್ಥಳಗಳ ಮೇಲೆ ಅಸಮರ್ಥತೆಗೆ ಕಾರಣವಾಗಬಹುದು ಎಂದು ಪೀಠ ತಿಳಿಸಿದೆ.

ಸಂವಿಧಾನದ 12ನೇ ವಿಧಿಯ ಪ್ರಕಾರ ಕೆಪಿಸಿಟಿಎಲ್ ಸರ್ಕಾರದ ಉದ್ಯಮ ಘಟಕವಾಗಿರುವುದರಿಂದ ಮಾದರಿ ಉದ್ಯೋಗ ಸಂಸ್ಥೆಯಾಗಬೇಕು. ಅದಕ್ಕೆ ಬದಲಾಗಿ ವಸಹಾಹತುಶಾಹಿ ಆಡಳಿತ ಏಜನ್ಸಿಯಂತೆ ವರ್ತಿಸಬಾರದು. ಬದಲಾಗಿ ತನ್ನ ನೌಕರರನ್ನು ನ್ಯಾಯಯುತ ಹಾಗೂ ಸಹಾನುಭೂತಿಯಿಂದ ನಡೆಸಿಕೊಳ್ಳುವ ಮೂಲಕ ಕಲ್ಯಾಣ ರಾಜ್ಯದಂತಿರಬೇಕು. ಕಾರ್ಮಿಕ ಮನಗೆಲ್ಲುವ ಮೂಲಕ ತ್ಪಾದಕತೆಯನ್ನು ಹೆಚ್ಚಳ ಮಾಡಬೇಕು. ಪ್ರಕರಣ ಸಂಬಂಧ ಆಕ್ಷೇಪಣೆ ಸಲ್ಲಿಸಿರುವ ನೌಕರ, ತಾನು ಗಂಭೀರವಾಗಿ ಮಾನಸಿಕ ಯಾತನೆ ಅನುಭವಿಸಿದ್ದೇನೆ. ಪರಿಣಾಮ ಕೆಲಸದಲ್ಲಿ ಉತ್ತಮ ಪ್ರದರ್ಶನ ನೀಡಲಾಗಿಲ್ಲ. ಆದ ಕಾರಣ ಸಂಸ್ಥೆಗೆ ತನ್ನಿಂದ ತೊಂದರೆಯಾಗಬಾರದು ಎಂಬ ಕಾರಣದಿಂದ ಗೈರು ಹಾಜರಾಗಿದ್ದೇನೆ ಎಂದು ವಿವರಿಸಿದ್ದಾರೆ. ಆದ್ದರಿಂದ ಏಕ ಸದಸ್ಯ ಪೀಠದ ಆದೇಶವನ್ನು ಎತ್ತಿ ಹಿಡಿಯುವುದಾಗಿ ಪೀಠ ಹೇಳಿದೆ.

ಡೇವಿಸ್ ವಿರುದ್ಧದ ಮಿಲ್ಸ್‌ನ ಪ್ರಕರಣದಲ್ಲಿ ಅಮೆರಿಕ ನ್ಯಾಯಾಲಯದ 1904ರಲ್ಲಿ ನೀಡಿದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, ಸಂವಿಧಾನಗಳು ಪ್ರಾಯೋಗಿಕ ಮತ್ತು ಗಣನೀಯ ಹಕ್ಕುಗಳನ್ನು ಸಂರಕ್ಷಿಸುವ ಉದ್ದೇಶ ಹೊಂದಿದೆಯೇ ವಿನಹ ಸಿದ್ದಾಂತಗಳನ್ನು ನಿರ್ವಹಿಸಲು ಅಲ್ಲ ಎಂದು ತಿಳಿಸಿ ಮೇಲ್ಮನವಿ ಅರ್ಜಿ ವಜಾಗೊಳಿಸಿತು.

ಪ್ರಕರಣದ ಹಿನ್ನೆಲೆ:ಕೆಪಿಟಿಸಿಎಲ್‌ನ ಸ್ಟೇಷನ್ ಸಹಾಯಕ(ಗ್ರೇಡ್ 2) ಹುದ್ದೆಯಲ್ಲಿದ್ದ ಎಸ್.ಕಿರಣ್ ಎಂಬವರು 632 ದಿನಗಳ ಕಾಲ ಅನಧಿಕೃತವಾಗಿ ಸೇವೆ ಗೈರು ಹಾಜರಾಗಿದ್ದರು. ಇದೇ ಕಾರಣದಿಂದ ಅವರನ್ನು ಕೆಪಿಟಿಸಿಎಲ್ ಸೇವೆಯಿಂದ ವಜಾಗೊಳಿಸಿತ್ತು. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ಶಿವಮೊಗ್ಗದ ಕಾರ್ಮಿಕ ನ್ಯಾಯಾಲಯ ಕಿರಣ್ ಅವರು ಖಿನ್ನತೆಯಿಂದ ಸೇವೆಗೆ ಗೈರಾಗಿದ್ದಾರೆ, ಆದ ಕಾರಣ ಯಾವುದೇ ಹಿಂಬಾಕಿ ನೀಡದೇ ಅವರ ಸೇವೆಯನ್ನು ಮುಂದುವರೆಸಬೇಕು ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಕೆಪಿಟಿಸಿಎಲ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಏಕಸದಸ್ಯ ಪೀಠ ಕಾರ್ಮಿಕ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿತ್ತು. ಈ ಆದೇಶವನ್ನು ಕೆಪಿಟಿಸಿಎಲ್ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.

ಇದನ್ನೂ ಓದಿ:ಅರಣ್ಯ ಪ್ರದೇಶ ಒತ್ತುವರಿ ಆರೋಪ; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ABOUT THE AUTHOR

...view details