ಕರ್ನಾಟಕ

karnataka

ETV Bharat / state

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ 150 ಹುದ್ದೆಗಳಿಗೆ ನೇಮಕಾತಿ; ಇಲ್ಲಿದೆ ಎಲ್ಲ ವಿವರ! - 150 ಹುದ್ದೆಗಳ ಭರ್ತಿಗೆ ಅಧಿಸೂಚನೆ

RDWSD Recruitment: ಎರಡು ವರ್ಷಗಳ ಅವಧಿಗೆ ಈ ಹುದ್ದೆಗಳಿಗೆ ನೇಮಕ ನಡೆಯಲಿದ್ದು, ಅಭ್ಯರ್ಥಿಯ ಕಾರ್ಯಕ್ಷಮತೆ ಆಧಾರದ ಮೇಲೆ ಹುದ್ದೆ ವಿಸ್ತರಣೆಯನ್ನು ವರ್ಷದಿಂದ ವರ್ಷಕ್ಕೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಹುದ್ದೆ ನೇಮಕಾತಿ, ಅರ್ಜಿ ಸಲ್ಲಿಕೆ ಮತ್ತು ವೇತನ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ.

RDWSD Recruitment for 150 post in Karnataka
RDWSD Recruitment for 150 post in Karnataka

By ETV Bharat Karnataka Team

Published : Oct 25, 2023, 1:35 PM IST

ಕರ್ನಾಟಕ ಸರ್ಕಾರದಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಖಾಲಿ ಇರುವ 150 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಗುತ್ತಿಗೆ ಆಧಾರದ ಮೇಲೆ ಈ ಹುದ್ದೆಗಳ ನೇಮಕಾತಿ ನಡೆಯಲಿದೆ. ಎರಡು ವರ್ಷಗಳ ಅವಧಿಗೆ ಈ ಹುದ್ದೆ ನೇಮಕಾತಿ ನಡೆಯಲಿದ್ದು, ಅಭ್ಯರ್ಥಿಯ ಕಾರ್ಯಕ್ಷಮತೆ ಆಧಾರದ ಮೇಲೆ ಹುದ್ದೆ ವಿಸ್ತರಣೆಯನ್ನು ವರ್ಷದಿಂದ ವರ್ಷಕ್ಕೆ ಮಾಡಲಾಗುವುದು. ಈ ಬಗ್ಗೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಅಧಿಸೂಚನೆ

ಹುದ್ದೆ ವಿವರ: ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಈ ಕೆಳಗಂಡ ಹುದ್ದೆಗಳ ಭರ್ತಿ ನಡೆಸಲಾಗುವುದು

  • ಪ್ರೊಕ್ಯೂರ್​ಮೆಂಟ್​ (ಸಂಗ್ರಹಣ) ಸಮಾಲೋಚಕ 31
  • ನಿರ್ವಹಣೆ ಮತ್ತು ಮೌಲ್ಯಮಾಪನ ಸಮಾಲೋಚಕ 31
  • ಪರಿಸರ ಸಮಾಲೋಚಕ -31
  • ಸಾಮಾಜಿಕ ಅಭಿವೃದ್ಧಿ ಸಮಾಲೋಚಕ - 31
  • ಹಣಕಾಸು ಸಮಾಲೋಚಕ -31

ವಿದ್ಯಾರ್ಹತೆ:

  • ಸಂಗ್ರಹಣ ಸಮಾಲೋಚಕ - ಸಿವಿಲ್​ ಇಂಜಿನಿಯರಿಂಗ್​ನಲ್ಲಿ ಬಿಇ, ಬಿಟೆಕ್​ ಪದವಿ
  • ನಿರ್ವಹಣೆ ಮತ್ತು ಮೌಲ್ಯಮಾಪನ ಸಮಾಲೋಚಕ - ಬಿಸಿಎ, ಬಿಇ ಪದವಿ
  • ಪರಿಸರ ಸಮಾಲೋಚಕ - ಎನ್ವರಮೆಂಟಲ್​ ಇಂಜಿನಿಯರಿಂಗ್​ನಲ್ಲಿ ಬಿಇ ಅಥವಾ ಬಿಟೆಕ್​
  • ಸಾಮಾಜಿಕ ಅಭಿವೃದ್ಧಿ ಸಮಾಲೋಚಕ - ಎಂಎಸ್​​ಡಬ್ಲ್ಯೂ, ಸಮಾಜ ಶಾಸ್ತ್ರದಲ್ಲಿ ಎಂಎ, ಗ್ರಾಮೀಣಾಭಿವೃದ್ಧಿಯಲ್ಲಿ ಎಂಬಿಎ-ಎಚ್​ಆರ್​ಎಂ
  • ಹಣಕಾಸು ಸಮಾಲೋಚಕ - ಎಂಬಿಎ, ಎಂಕಾಂ

ಅನುಭವ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿಸಿದ ಕ್ಷೇತ್ರದಲ್ಲಿ ಐದು ವರ್ಷ ಹುದ್ದೆ ಕಾರ್ಯ ನಿರ್ವಹಿಸಿದ ಅನುಭವ ಅಥವಾ ರಾಜ್ಯ ಸರ್ಕಾರದಲ್ಲಿ 2 ವರ್ಷಗಳ ಕಾಲ ಸಂಬಂಧಿಸಿದ ಕ್ಷೇತ್ರದಲ್ಲಿ ಹುದ್ದೆ ಅನುಭವ ಹೊಂದಿರಬೇಕು.

ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಗರಿಷ್ಠ ವಯೋಮಿತಿ 45 ವರ್ಷ ಮೀರಿರಬಾರದು.

ವೇತನ: ಮಾಸಿಕ 50,000 ರಿಂದ 75 ಸಾವಿರ ನಿಗದಿ ಮಾಡಲಾಗಿದ್ದು, ಅಭ್ಯರ್ಥಿಗಳ ಅನುಭವದ ಮೇಲೆ ಇದರ ನಿಗದಿ ಆಗಲಿದೆ.

ಅರ್ಜಿ ಸಲ್ಲಿಕೆ ಅಭ್ಯರ್ಥಿಗಳು ಗ್ರಾಮೀಣ ಕುಡಿಯುವ ನೀರು ಮತ್ತು ನೈಮರ್ಲ್ಯ ಇಲಾಖೆಯ (ವಿಶ್ವ ಬ್ಯಾಂಕ್​ ಪ್ರಾಜೆಕ್ಟ್​​)ನ ಪುಟದಲ್ಲಿ ಆನ್​ಲೈನ್​ ಮೂಲಕ ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಜೊತೆಗೆ ಕಾರ್ಯ ನಿರ್ವಹಣೆ ಮಾಡಬೇಕಾದ ಮೂರು ಜಿಲ್ಲೆಗಳ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಅರ್ಜಿ ಸಲ್ಲಿಸುವಾಗ ಈ ಹುದ್ದೆಗೆ ತಾವು ಹೇಗೆ ಸೂಕ್ತರು ಎಂಬ ಕುರಿತು 100 ಪದಗಳಲ್ಲಿ ವಿವರಣೆಯನ್ನು swachhamevajayate.org ಇಲ್ಲಿ ನವೆಂಬರ್​ 4ಕ್ಕೆ ಮುನ್ನ ಸಲ್ಲಿಸಬೇಕಿದೆ. ನೀಡಬೇಕಿದೆ

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಅಭ್ಯರ್ಥಿಗಳನ್ನು ಶಾರ್ಟ್​​ ಲಿಸ್ಟ್​​ ನಡೆಸಿ ದಾಖಲಾತಿ ಪರಿಶೀಲನೆ ಮಾಡಲಾಗುವುದು. ಬಳಿಕ ಸಂದರ್ಶನ ನಡೆಸಲಾಗುವುದು

ಈ ಹುದ್ದೆಗೆ ಅಕ್ಟೋಬರ್​ 19ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ನವೆಂಬರ್​ 4 ಆಗಿದೆ. ಈ ಹುದ್ದೆಗ ಕುರಿತು ಹೆಚ್ಚಿನ ಸ್ಪಷ್ಟೀಕರಣಕ್ಕೆ recruitment.rdwsd@gmail.com ಇಲ್ಲಿಗೆ ಸಂಪರ್ಕಿಸಬಹುದು

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಸೇರಿದಂತೆ ಸಂಪೂರ್ಣ ಮಾಹಿತಿಗೆ https://www.ksrwspdtsuonline.in/ ಇಲ್ಲಿಗೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ: ಧಾರವಾಡ ವಿವಿಯಿಂದ ನೇಮಕಾತಿ: 14 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ABOUT THE AUTHOR

...view details