ರಾಜ್ಯ ಸರ್ಕಾರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ (ಆರ್‌ಡಿಪಿಆರ್) ಜಲ ಜೀವನ ಮಿಷನ್ ಯೋಜನೆಯಡಿ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಇಲಾಖೆಯಲ್ಲಿರುವ ಇಂಟಿಗ್ರೇಡೆಟ್ ಜಲ ಸಂಪನ್ಮೂಲ ನಿರ್ವಹಣಾ ಸಮಾಲೋಚಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಯುನಿಸೆಫ್ ಸಂಸ್ಥೆಯ ವತಿಯಿಂದ ರಾಜ್ಯ ಕಚೇರಿಗೆ ನೇಮಕಾತಿ ನಡೆಯಲಿದ್ದು, ಸಂಪೂರ್ಣ ಗುತ್ತಿಗೆ ಆಧಾರಿತವಾಗಿದೆ. ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ:1 ಇಂಟಿಗ್ರೇಟೆಡ್ ಜಲ ಸಂಪನ್ಮೂಲ ನಿರ್ವಹಣಾ ಸಮಾಲೋಚಕರ ಹುದ್ದೆ.
ಅರ್ಹತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಿವಿಲ್ ಅಥವಾ ಪರಿಸರ ಅಥವಾ ಪಬ್ಲಿಕ್ ಹೆಲ್ತ್ನಲ್ಲಿ ಇಂಜಿನಿಯರಿಂಗ್ ಪದವಿ/ ಪದವಿ ಹೊಂದಿರಬೇಕು. ಗ್ರಾಮೀಣ ನೀರು ಮತ್ತು ನೈರ್ಮಲ್ಯ ಕಾರ್ಯಕ್ರಮದಲ್ಲಿ 5 ವರ್ಷ ಹುದ್ದೆ ನಿಭಾಯಿಸಿರುವ ಅನುಭವ ಹೊಂದಿರಬೇಕು. ಈಗಾಗಲೇ ಜಲ ಸಂಪನ್ಮೂಲ ನಿರ್ವಹಣೆ ಸೇರಿದಂತೆ ಸಂಬಂಧಿತ ಕ್ಷೇತ್ರದಲ್ಲಿ ಹುದ್ದೆ ಅನುಭವ ಹೊಂದಿರಬೇಕು. ಜಲ್ ಜೀವನ್ ಮಿಷನ್ ಯೋಜನೆ ಅಡಿ ಕೆಲಸ ಮಾಡಿದ ಅನುಭವ ಹೊಂದಿರಬೇಕು. ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಸರಾಗವಾಗಿ ಮಾತನಾಡಲು ಬರಬೇಕು. ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ವೇತನ, ಅವಧಿ: ಸಂಪೂರ್ಣವಾಗಿ ತಾತ್ಕಲಿಕವಾಗಿದ್ದು, ಒಂದು ವರ್ಷದ ಗುತ್ತಿಗೆ ಅವಧಿಗೆ ಮಾತ್ರ ನೇಮಕ ಮಾಡಲಾಗುವುದು. ಈ ಅವಧಿಯಲ್ಲಿ ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧಾರದ ಮೇಲೆ ಕಾಲ ಕಾಲಕ್ಕೆ ಹುದ್ದೆಯ ನವೀಕರಣ ಮಾಡಲಾಗುತ್ತದೆ. ಮಾಸಿಕ 60 ಸಾವಿರ ರೂ.ಯಿಂದ 70 ಸಾವಿರ ರೂ ವೇತನ ನಿಗದಿಪಡಿಸಲಾಗಿದೆ. ವಯೋಮಿತಿ ಗರಿಷ್ಠ 45 ವರ್ಷ ಮೀರಿರಬಾರದು. ಶಾರ್ಟ್ಲಿಸ್ಟ್ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ.