ಕರ್ನಾಟಕ

karnataka

ETV Bharat / state

ಚಿನ್ನಸ್ವಾಮಿಯಲ್ಲೂ ಅಣ್ಣಾವ್ರಿಗೆ ಗೌರವ.. ಆರ್​ಸಿಬಿ ವಿನಯತೆಗೆ ಕನ್ನಡಿಗರು ಫಿದಾ.. - undefined

ಡಾ.ರಾಜ್​ ಕುಮಾರ್​ ಹುಟ್ಟುಹಬ್ಬಕ್ಕೆ ಹಲವು ಗಣ್ಯರು ಟೀಟ್​ ಮಾಡಿ ಶುಭಕೋರಿದ್ದಾರೆ. ಈ ಮಧ್ಯೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಕೂಡಾ ನಿನ್ನೆ ನಡೆದ ಪಂದ್ಯದಲ್ಲಿ ಅಣ್ಣಾವ್ರಿಗೆ ವಿಶೇಷ ಗೌರವ ಸಲ್ಲಿಸಿ ಕನ್ನಡಿಗರ ಮನಗೆದ್ದಿದೆ.

ಚಿನ್ನಸ್ವಾಮಿಯಲ್ಲೂ ಅಣ್ಣಾವ್ರಿಗೆ ಗೌರವ

By

Published : Apr 25, 2019, 9:34 AM IST

ಬೆಂಗಳೂರು:ನಿನ್ನೆ ನಡೆದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಕಿಂಗ್ಸ್​ ಇಲೆವೆನ್​​ ಪಂಜಾಬ್​ ನಡುವಿನ ಪಂದ್ಯದಲ್ಲಿ ಅಭಿಮಾನಿಗಳು ಕ್ರಿಕೆಟ್​ ಜೊತೆಯಲ್ಲಿ ವರನಟ ಡಾ. ರಾಜಕುಮಾರ್ ಅವರ ಜಪ ಮಾಡಿದ್ದಾರೆ.

ಚಿನ್ನಸ್ವಾಮಿಯಲ್ಲೂ ಅಣ್ಣಾವ್ರಿಗೆ ಗೌರವ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಐಪಿಎಲ್​ ಪಂದ್ಯವನ್ನ ಆರ್​ಸಿಬಿ ತಂಡ ನಮ್ಮೆಲ್ಲರ ನೆಚ್ಚಿನ ಅಣ್ಣಾವ್ರಿಗೆ ಅರ್ಪಿಸಿದೆ. ಟ್ವೀಟ್​ ಮೂಲಕ ಅಣ್ಣಾವ್ರ ಜನ್ಮದಿನದ ಶುಭಕೋರಿ ಕನ್ನಡಿಗರ ಮನಗೆದ್ದಿದ್ದ ಬೆಂಗಳೂರು ಟೀಂ, ಸ್ಟೇಡಿಯಂನಲ್ಲಿ ರಾಜಕುಮಾರ್ ಅವರಿಗೆ ವಿಶೇಷ ಗೌರವ ಸಲ್ಲಿಸಿತು. ಪಂದ್ಯ ನೋಡಲು ಬಂದಿದ್ದ ಪ್ರತಿಯೊಬ್ಬರೂ ಸ್ಟೇಡಿಯಂನ ಎಲ್ಇಡಿ ಸ್ಕ್ರೀನ್​ಗಳಲ್ಲಿ ಅಣ್ಣಾವ್ರನ್ನ ಕಣ್ತುಂಬಿಕೊಂಡು ಹುಟ್ಟು ಹಬ್ಬದ ಶುಭ ಕೋರಿದರು.

ಇನ್ನು ಈ ಸಂದರ್ಭದಲ್ಲಿ ಅಣ್ಣಾವ್ರ ಮಗ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಪಂದ್ಯಕ್ಕೆ ಸಾಕ್ಷಿಯಾಗಿದ್ದು ವಿಶೇಷವಾಗಿತ್ತು.

ಸ್ಟೇಡಿಯಂಗೆ ಆಗಮಿಸಿ ಪಂದ್ಯ ವೀಕ್ಷಿಸಿದ ಶಿವಣ್ಣ

ಎಬಿ ಡಿ ವಿಲಿಯರ್ಸ್​​ ಉತ್ತಮ ಬ್ಯಾಟಿಂಗ್ ನೆರವಿನಿಂದ ಮತ್ತು ಡೆತ್ ಓವರ್​ನಲ್ಲಿ ಬೌಲರ್​ಗಳು ತೋರಿದ ಅದ್ಭುತ ಪ್ರದರ್ಶನದಿಂದ ಆರ್​ಸಿಬಿ ತಂಡ ಗೆಲವು ದಾಖಲಿಸಿತು. ಇದೇ ವೇಳೆ, ಟ್ವೀಟ್​ ಮಾಡಿರುವ ಆರ್​ಸಿಬಿ ಟೀಂ ಪಂದ್ಯದ ಗೆಲುವನ್ನ ಡಾ.ರಾಜ್​ಗೆ ಅರ್ಪಿಸಿದೆ.

For All Latest Updates

TAGGED:

ABOUT THE AUTHOR

...view details