ಕರ್ನಾಟಕ

karnataka

ETV Bharat / state

ರವಿಶಂಕರ್ ವಿದ್ಯಾಮಂದಿರ ಕಟ್ಟಡ ಉದ್ಘಾಟಿಸಿದ ರವಿಶಂಕರ್ ಗುರೂಜಿ - ಲಿಂಬಾವಳಿ - ಅರಣ್ಯ, ಕನ್ನಡ ಸಾಹಿತ್ಯ ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ

ರವಿಶಂಕರ್ ವಿದ್ಯಾಮಂದಿರದ ಶಾಲಾ ಕಟ್ಟಡ ಪ್ರಾರಂಭೋತ್ಸವಕ್ಕೆ ರವಿಶಂಕರ್ ಗುರೂಜಿ ಮತ್ತು ಸಚಿವ ಅರವಿಂದ ಲಿಂಬಾವಳಿ ಚಾಲನೆ ನೀಡಿದರು.

Ravishankar school building
ಕಟ್ಟಡ ಉದ್ಘಾಟಿಸಿದ ರವಿಶಂಕರ್ ಗುರೂಜಿ-ಲಿಂಬಾವಳಿ

By

Published : Mar 2, 2021, 9:11 AM IST

ಮಹದೇವಪುರ: ಕಾಚಮಾರನಹಳ್ಳಿ ಶ್ರೀರವಿಶಂಕರ್ ವಿದ್ಯಾಮಂದಿರದ ಶಾಲಾ ಕಟ್ಟಡ ಪ್ರಾರಂಭೋತ್ಸವಕ್ಕೆ ಆರ್ಟ್ ಆಫ್ ಲಿವಿಂಗ್​ನ ರವಿಶಂಕರ್ ಗುರೂಜಿ ಮತ್ತು ಅರಣ್ಯ, ಕನ್ನಡ ಸಾಹಿತ್ಯ ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಚಾಲನೆ ನೀಡಿದರು.

ಕಾರ್ಯಕ್ರಮದ ನಂತರ ರವಿಶಂಕರ್ ಗುರೂಜಿ ಮಾತನಾಡಿ, ಒಂದು ಕಟ್ಟಡ ನಿರ್ಮಾಣವಾದ ಮೇಲೆ ಯಾವ ಚಟುವಟಿಕೆಗಳು ನಡೆಯುತ್ತವೆ. ಅದರ ಮೇಲೆ ಆ ಕಟ್ಟಡಕ್ಕೆ ಗೌರವ ಬರುತ್ತದೆ. ಅದೇ ರೀತಿ, ಇಂದು ಈ ವಿದ್ಯಾಲಯಕ್ಕೆ ಒಂದು ಸ್ಥಾನಮಾನ ಸಿಕ್ಕಿದೆ. ಶಾಲೆಯ ಹೆಸರು ಆಂಗ್ಲ ಭಾಷೆಯಲ್ಲಿ ಇದೆ. ಅದನ್ನು ಕನ್ನಡ ಭಾಷೆಯಲ್ಲಿಯೂ ಬರೆಯಬೇಕು. ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದರು.

ಮುಂದಿನ ದಿನಗಳಲ್ಲಿ ಸಂಜೆ ವೇಳೆ ಕೋಚಿಂಗ್ ಸೆಂಟರ್ ತೆರೆಯಬೇಕು. ಎಷ್ಟೋ ಜನ ಬಡವರು ಐಎಎಸ್, ಯುಐಪಿಎಸ್ ಅಧಿಕಾರಿ ಆಗಬೇಕು ಅಂತ ಕನಸು ಕಾಣುತ್ತಿರುತ್ತಾರೆ. ಅಂತವರಿಗೆ ಈ ನಮ್ಮ ಶಾಲೆಯಿಂದ ಕೋಚಿಂಗ್ ನೀಡಬೇಕು. ಮುಂದಿನ ದಿನಗಳಲ್ಲಿ ಇದನ್ನು ಮಾಡುತ್ತೇವೆ ಎಂದರು.

ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ನಮ್ಮ ಕ್ಷೇತ್ರದಲ್ಲಿ ಇಂತಹ ದೊಡ್ಡ ವಿದ್ಯಾಲಯ ಇರುವುದು ನನ್ನ ಭಾಗ್ಯ ಹಾಗೂ ನಮ್ಮ ಕ್ಷೇತ್ರದ ಜನರಿಗೂ ಭಾಗ್ಯ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಗುರೂಜಿ ಅವರು ಹೇಳಿದಂತೆ ಕನ್ನಡಕ್ಕೆ ಆದ್ಯತೆ ನೀಡಬೇಕು. ಸಾಧ್ಯವಾದಷ್ಟು ಕನ್ನಡವನ್ನು ಬೆಳೆಸಿ ಮತ್ತು ಕನ್ನಡದಲ್ಲಿ ನಾಮಫಲಕ ಹಾಕಬೇಕೆಂದು ಮನವಿ ಮಾಡಿದರು.

ನಮ್ಮದು ಐಟಿಬಿಪಿ ಕ್ಷೇತ್ರವಾದ್ದರಿಂದ ಇಲ್ಲಿ ಕನ್ನಡಿಗರಿಗಿಂತ ಬೇರೆ ರಾಜ್ಯದವರು ಹೆಚ್ಚಾಗಿ ನೆಲೆಸಿದ್ದಾರೆ. ಸಾಧ್ಯವಾದರೆ ಸಂಜೆ ವೇಳೆ ಕನ್ನಡ ತರಬೇತಿ ಕೇಂದ್ರ ಪ್ರಾರಂಭಿಸಿ, ಕನ್ನಡ ಮಾತನಾಡಲು ಬಾರದ ಅನ್ಯಭಾಷೆಯ ಜನರಿಗೆ ಕನ್ನಡವನ್ನು ಕಲಿಸುವ ಮೂಲಕ ಕನ್ನಡವನ್ನು ಬೆಳೆಸಲು ಸಹಾಯ ಆಗುತ್ತದೆ. ಇದಕ್ಕೆ ನನ್ನಿಂದ ಯಾವುದೇ ಸಹಾಯ ಬೇಕಾದರೂ ಕೇಳಿ ಎಂದರು.

ಶಾಲೆಗೆ ಮೂಲ ಸೌಕರ್ಯಗಳ ನೆರವು ನಿರಂತರವಾಗಿ ನೀಡುತ್ತೇನೆ. ಶಾಲೆಯ ಪಕ್ಕದಲ್ಲಿ ಅರಣ್ಯವಿದ್ದು ಇಲ್ಲಿ ಮಂಗಗಳ ಕಾಟವಿದೆ. ಈಗಾಗಲೇ ಅಧಿಕಾರಿಗಳಿಗೆ ನಿಯಂತ್ರಣ ಮಾಡಲು ಸೂಚಿಸಲಾಗಿದೆ. ಬಲಭಾಗದಲ್ಲಿ ರಸ್ತೆ ಹದಗೆಟ್ಟಿದ್ದು, ಅದನ್ನು ಸರಿಪಡಿಸಲು ಹೇಳಲಾಗಿದೆ. ಇನ್ನೂ ಯಾವುದೇ ರೀತಿಯ ನೆರವು ಬೇಕಾದಲ್ಲಿ ನನ್ನ ಗಮನಕ್ಕೆ ಅಥವಾ ನಮ್ಮ ಅಧಿಕಾರಿಗಳ ಗಮನಕ್ಕೆ ತಿಳಿಸಿ ಎಂದರು.

ABOUT THE AUTHOR

...view details