ಬೆಂಗಳೂರು:ಕೊರೊನಾ ವಾರಿಯರ್ಸ್ಗೆ ಸಹಕಾರ ನೀಡದ ಶಾಸಕ ಜಮೀರ್ ಅಹ್ಮದ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಡಿಯಲ್ಲಿ ಬಂಧಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆಗ್ರಹಿಸಿದ್ದಾರೆ.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅತ್ಯಂತ ಮೃಗೀಯವಾಗಿ, ಮಾನವೀಯತೆಯನ್ನು ಮರೆತು ಕೊರೊನಾ ವೈರಸ್ ವಿರುದ್ಧ ಕಾರ್ಯನಿರತರಾಗಿದ್ದ ವೈದ್ಯರು, ನರ್ಸ್‌ಗಳು, ಆಶಾ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳ ಮೇಲೆ ಗೂಂಡಾಗಿರಿ ನಡೆಸಲು ಪರೋಕ್ಷವಾಗಿ ಸಹಕಾರ ನೀಡಿರುವ ಶಾಸಕ ಜಮೀರ್ ಅವರನ್ನು ಕೂಡಲೇ ಬಂಧಿಸಬೇಕು ಎಂದರು.
ಜಮೀರ್ ಅವರು ಕೊರೊನಾ ವೈರಸ್ ಮಿತ್ರನಾಗಿ ಕೆಲಸ ಮಾಡುತ್ತಿದ್ದಾರೆ. ಈ ಘಟನೆಯ ಹಿಂದೆ ಪರೋಕ್ಷವಾಗಿ ಜಮೀರ್ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು. ಜನಪ್ರತಿನಿಧಿ ಅಂತ ಹೇಳಿಕೊಳ್ಳೋಕೆ ಜಮೀರ್ಗೆ ನಾಚಿಕೆ ಆಗಬೇಕು. ಕೂಡಲೇ ಅವರನ್ನು ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅವರು ಪಕ್ಷದಿಂದ ಉಚ್ಛಾಟನೆ ಮಾಡಲಿ ಎಂದು ಒತ್ತಾಯಿಸಿದರು.
ಬಿಜೆಪಿಯಿಂದ ಆಹಾರ ಸಾಮಗ್ರಿ ವಿತರಣೆ:
ಇನ್ನು ಭಾರತೀಯ ಜನತಾ ಪಾರ್ಟಿ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ ಸೇವಾ ಕಾರ್ಯವನ್ನು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಬಿಜೆಪಿ ಸಂಘಟನಾತ್ಮಕ 37 ಜಿಲ್ಲೆಗಳಲ್ಲಿ ದಿನಾಂಕ ಮಾರ್ಚ್ 24ರಿಂದ ತನ್ನ ಸೇವಾ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ. ರಾಜ್ಯದ 58 ಸಾವಿರ ಬೂತ್‌ಗಳಲ್ಲಿ, 311 ಮಂಡಲಗಳಲ್ಲಿ ಇದುವರೆಗೆ 82,23,048 ಆಹಾರ ಪೊಟ್ಟಣಗಳನ್ನು ವಿತರಿಸಿದೆ ಎಂದು ರವಿಕುಮಾರ್ ಮಾಹಿತಿ ನೀಡಿದರು.
- 22,13,672 ಆಹಾರ ಧಾನ್ಯಗಳ ಕಿಟ್‌ಗಳನ್ನು ವಿತರಣೆ.
- 34,35,902 ಮಾಸ್ಕ್ (ಮುಖ ಗವಸು)ಗಳನ್ನು ವಿತರಣೆ.
- 7,41,406 ಜನರು ಪ್ರಧಾನ ಮಂತ್ರಿ ಸಹಾಯ ನಿಧಿ (ಪಿಎಂ. ಕೇರ್)ಗೆ ಹಣ ನೀಡಿದ್ದಾರೆ.
ಬಿಜೆಪಿಯ ಸಹಾಯವಾಣಿಗೆ ಕರೆ ಮಾಡಿ ಸುಮಾರು 3,45,213 ಜನ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದು, ಅದರಲ್ಲಿ ಸುಮಾರು 3,32,860 ಜನರಿಗೆ ಪರಿಹಾರಗಳನ್ನು ಒದಗಿಸಲಾಗಿದೆ. (ಔಷಧಿ, ರೇಷನ್ ಕಿಟ್, ಆಹಾರ ಪೊಟ್ಟಣ, ಮಾಸ್ಕ್ ಇತ್ಯಾದಿಗಳನ್ನು ವಿತರಿಸಿದೆ) ರಾಜ್ಯದಲ್ಲಿ ಈವರೆಗೆ 6,85,813 ಕಾರ್ಯಕರ್ತರು ಈ ಸೇವಾ ಕಾರ್ಯದಲ್ಲಿ ಭಾಗವಹಿಸಿದ್ದಾರೆ ಎಂದು ರವಿಕುಮಾರ್ ವಿವರಿಸಿದರು.