ಕರ್ನಾಟಕ

karnataka

ETV Bharat / state

ಸುಪ್ರೀಂ ತೀರ್ಪಿನಿಂದ ಸ್ಪೀಕರ್ ಆದೇಶಕ್ಕೆ ಹಿನ್ನಡೆ: ರವಿಕುಮಾರ್ - Ravikumar, General Secretary of BJP

ಇಂದು ಸ್ಪೀಕರ್​ ತೀರ್ಮಾನದಂತೆ ಅನರ್ಹಗೊಂಡಿದ್ದ ಶಾಸಕರ ಪ್ರಕರಣಕ್ಕೆ ಸುಪ್ರೀಂ‌ ಕೋರ್ಟ್ ತೀರ್ಪು ನೀಡಿದ್ದು, ಅನರ್ಹ ಶಾಸಕರ ಸ್ಪರ್ಧೆಗೆ ಅವಕಾಶ ಕಲ್ಪಿಸಿದೆ. ಈ ಹಿನ್ನೆಲೆ ಸ್ಪೀಕರ್ ಆದೇಶಕ್ಕೆ ಹಿನ್ನಡೆಯಾದಂತಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್​ ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್

By

Published : Nov 13, 2019, 12:45 PM IST

Updated : Nov 13, 2019, 12:52 PM IST

ಬೆಂಗಳೂರು: 17 ಶಾಸಕರನ್ನು ಪ್ರಸಕ್ತ ವಿಧಾನಸಭೆಯಿಂದ ಅನರ್ಹಗೊಳಿಸಿದ್ದ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ಅವರಿಗೆ ನ್ಯಾಯಾಲಯ ಹಿನ್ನಡೆಯನ್ನುಂಟು ಮಾಡಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತೀರ್ಪಿನ ಕುರಿತು ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಸುಪ್ರೀಂ‌ ಕೋರ್ಟ್ ತೀರ್ಪು ನೀಡಿದ್ದು ಅನರ್ಹ ಶಾಸಕರ ಸ್ಪರ್ಧೆಗೆ ಅವಕಾಶ ಕಲ್ಪಿಸಿದೆ. ವಿಧಾನಸಭೆಯಿಂದ ಸ್ಪರ್ಧಿಸುವಂತೆ ಅನರ್ಹಗೊಳಿಸಿದ್ದ ಸ್ಪೀಕರ್ ಆದೇಶಕ್ಕೆ ಹಿನ್ನಡೆಯಾದಂತಾಗಿದೆ ಎಂದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್

ಇಂದು 3 ಗಂಟೆಗೆ ಬಿಜೆಪಿ ಕೋರ್ ಕಮಿಟಿ‌ಸಭೆ ಇದೆ. ಅನರ್ಹ‌ ಶಾಸಕರ ನಡೆ ನೋಡಿಕೊಂಡು ಯಾರು ಅಭ್ಯರ್ಥಿ‌ ಏನು‌ ಅನ್ನುವುದು ನಿರ್ಧಾರ ಆಗುತ್ತದೆ. ನಂತರ ಹೈಕಮಾಂಡ್ ಜೊತೆ ಮುಂದಿನ ದಿನಗಳ ಸಮನ್ವಯತೆ ಬಗ್ಗೆಯೂ ಚರ್ಚೆ ಮಾಡಲಾಗುತ್ತದೆ ಎಂದು ರವಿಕುಮಾರ್​ ಮಾಹಿತಿ ನೀಡಿದ್ರು.

Last Updated : Nov 13, 2019, 12:52 PM IST

For All Latest Updates

ABOUT THE AUTHOR

...view details