ಕರ್ನಾಟಕ

karnataka

ETV Bharat / state

'ಆ ದೃಶ್ಯ' ಚಿತ್ರಕ್ಕೂ 'ದೃಶ್ಯ' ಚಿತ್ರಕ್ಕೂ ಏನು ಸಂಬಂಧ..? ಕ್ರೇಜಿಸ್ಟಾರ್ ಹೇಳ್ತಾರೆ ಕೇಳಿ.. - ಬೆಂಗಳೂರು ಸಿನಿಮಾ ಸುದ್ದಿ

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಆ ದೃಶ್ಯ ಕಳೆದವಾರ ರಾಜ್ಯಾದ್ಯಂತ ಸುಮಾರು 180 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಂಡು ಯಶಸ್ವಿಯಾಗಿ ಎರಡನೇ ವಾರಕ್ಕೆ ಕಾಲಿಟ್ಟಿದೆ.

ಪ್ರೆಸ್ ಮೀಟ್

By

Published : Nov 14, 2019, 4:27 AM IST

ಬೆಂಗಳೂರು:ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಮಂಜು ನಿರ್ಮಾಣದ'ಆ ದೃಶ್ಯ' ಸಿನಿಮಾ ಕಳೆದವಾರ ಬಿಡುಗಡೆ ಆಗಿದ್ದು, ರಾಜ್ಯಾದ್ಯಂತ ಸುಮಾರು 180ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಂಡು ಯಶಸ್ವಿಯಾಗಿ ಎರಡನೇ ವಾರಕ್ಕೆ ಕಾಲಿಟ್ಟಿದೆ.

'ಆ ದೃಶ್ಯ' ಸಿನಿಮಾ ತಂಡದ ಸುದ್ದಿಗೋಷ್ಟಿ

ಎರಡನೇ ವಾರವೂ ಸುಮಾರು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ'ಆ ದೃಶ್ಯ' ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಕನ್ನಡ ಸಿನಿ ಪ್ರಿಯರು 'ಕನಸುಗಾರ'ನ ಹೊಸ ಅವತಾರವನ್ನು ಮೆಚ್ಚಿಕೊಂಡು 'ಆ ದೃಶ್ಯ' ಚಿತ್ರಕ್ಕೆ ಹಾರೈಸುತ್ತಿದ್ದಾರೆ. ಇನ್ನು ಚಿತ್ರದ ಯಶಸ್ವಿ ಪ್ರದರ್ಶನದಿಂದ ಚಿತ್ರತಂಡ ಫುಲ್ ಖುಷಿ ಆಗಿದ್ದು, ಇಂದು ರವಿಚಂದ್ರನ್ ಅವರು'ಆ ದೃಶ್ಯ' ಚಿತ್ರತಂಡದೊಂದಿಗೆ ಪ್ರೆಸ್ ಮೀಟ್ ನಡೆಸಿ, ಮಾಧ್ಯಮಗಳ ಜೊತೆ ಸಂತಸ ಹಂಚಿಕೊಂಡಿದ್ದಾರೆ.

ಸಿನಿಮಾ ಚೆನ್ನಾಗಿದೆ ಎಂಬ ಅಭಿಪ್ರಾಯ ಎಲ್ಲಾ ಕಡೆಯಿಂದ ಬರುತ್ತಿದೆ. ಮೊದಲ ಬಾರಿಗೆ ರವಿಚಂದ್ರನ್ ಅವರನ್ನು ವಿಭಿನ್ನವಾದ ಪಾತ್ರದಲ್ಲಿ ನೋಡುತ್ತಿದ್ದಾರೆ. ನೋಡುವ ಪ್ರವೃತ್ತಿ ಬದಲಾದರೆ ಸಿನಿಮಾ ಇನ್ನು ಚೆನ್ನಾಗಿ ಕಾಣಿಸುತ್ತೆ ಎನ್ನುವುದ ನನ್ನ ಅಭಿಪ್ರಾಯ. 'ಆ ದೃಶ್ಯ' ಸಿನಿಮಾಗೂ ಮತ್ತು'ದೃಶ್ಯ' ಸಿನಿಮಾಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎಂದರು.

ನಂತರ ಮಾತನಾಡಿದ ನಿರ್ಮಾಪಕ ಕೆ.ಮಂಜು, ನಮ್ಮ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದು ಖುಷಿಯಾಗುವ ವಿಚಾರವಾಗಿದ್ದು, ನಮ್ಮ ಸಿನಿಮಾ ಕಂಟೆಂಟ್ ಸಿನಿಮಾ ಆದ್ದರಿಂದ ಎಲ್ಲರಿಗೂ ಇಷ್ಟವಾಗುತ್ತೆ ಎಂದು ಸಂತಸ ವ್ಯಕ್ತಪಡಿಸಿದರು.

ABOUT THE AUTHOR

...view details