ಬೆಂಗಳೂರು:ಭೂಗತ ಪಾತಕಿ ರವಿ ಪೂಜಾರಿ ಜೊತೆ ಪ್ರಕರಣವೊಂದರಲ್ಲಿ ಸಂಪರ್ಕ ಹೊಂದಿದ್ದ ಮಂಗಳೂರು ಮೂಲದ ಗುಲಾಮ ಎನ್ನುವ ಆರೋಪಿಯನ್ನ ಸಿಸಿಬಿ ಬಂಧನ ಮಾಡಿದ ನಂತರ ಹಲವಾರು ರೋಚಕ ಸಂಗತಿಗಳು ಬಯಲಾಗಿವೆ. ಹೀಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರವಿ ಪೂಜಾರಿಯನ್ನ ಮತ್ತೆ ವಶಕ್ಕೆ ಪಡೆಯಲು ಸಿಸಿಬಿ ನಿರ್ಧರಿಸಿದೆ.
ಆದರೆ, ಕೊರೊನಾ ಇರುವ ಕಾರಣ ಒಮ್ಮೆ ಜೈಲಿಗೆ ಕಳುಹಿಸಿದ ಆರೋಪಿಯನ್ನ ಮತ್ತೆ ವಶಕ್ಕೆ ಪಡೆದು ವಿಚಾರಣೆ ಮಾಡುವುದು ಕಷ್ಟಕರ. ಯಾಕಂದ್ರೆ ಈಗಾಗಲೇ ಸಿಸಿಬಿಯಲ್ಲಿ ಕೊರೊನಾ ಒಕ್ಕರಿಸಿದೆ. ಆದರೆ, ರವಿ ಪೂಜಾರಿಯನ್ನ ವಶಕ್ಕೆ ಪಡೆದು ತನಿಖೆ ಮಾಡೋದು ಅನಿವಾರ್ಯವಾಗಿದೆ. ಇಲ್ಲದಿದ್ದರೆ ರವಿ ಪೂಜಾರಿ ಬೇರೆ ಪೊಲೀಸರ ಪಾಲಾಗ್ತಾನೆ. ಈತ ಮುಂಬೈ ಹಾಗೂ ಇನ್ನಿತರ ರಾಜ್ಯಗಳ ಪೊಲೀಸರಿಗೂ ಬೇಕಾಗಿದ್ದಾನೆ.
ಶೇ. 60/ಶೇ. 40 ಷೇರ್ ಲೆಕ್ಕದಲ್ಲಿ ಡೀಲಿಂಗ್ :
ಮಂಗಳೂರು ಮೂಲದ ಗುಲಾಮ ಖಾಲಿ ಜವಾನನಾಗಿದ್ದ. ನಂತರ ರವಿ ಪೂಜಾರಿ ಜೊತೆ ಸೇರಿಕೊಂಡು ಮಂಗಳೂರು, ಬೇರೆ ಬೇರೆ ಕಡೆಯ ಬ್ಯುಸಿನೆಸ್ ಮ್ಯಾನ್, ಚಿತ್ರನಟರು , ರಾಜಕಾರಣಿಗಳು, ಬಿಲ್ಡರ್ಸ್ಗಳನ್ನ ಟಾರ್ಗೆಟ್ ಮಾಡಿ ಅವರಿಗೆ ಬೇದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದರು. ರವಿ ಪೂಜಾರಿ ಹೆಸರು ಹೇಳಿಕೊಂಡು ಬೆದರಿಕೆ ಹಾಕುತ್ತಿದ್ದ. ಬಂದ ಹಣದಲ್ಲಿ ರವಿ ಪೂಜಾರಿಗೆ ಶೇ. 60 ಗುಲಾಮನಿಗೆ ಶೇ. 40 ರಷ್ಟು ಪಾಲುದಾರಿಕೆ ಇತ್ತು. ಹೀಗಾಗಿ ಮುರುಕಲು ಮನೆಯಲ್ಲಿದ್ದ ಗುಲಾಮ ಸದ್ಯ 8 ಕೋಟಿ ಒಡೆಯನಾಗಿ ರವಿ ಪೂಜಾರಿಯ ಹಾಗೆ ಆಸ್ತಿ , ಸೈಟ್ ಹೊಂದಿದ್ದಾನೆ.
ರವಿ ಪೂಜಾರಿ ಜೊತೆಗಿನ ನಂಟು ಬಿಚ್ಚಿಟ್ಟ ಗುಲಾಮ: