ಕರ್ನಾಟಕ

karnataka

ETV Bharat / state

ನನಗೆ ಕನ್ನಡ ಬರಲ್ಲವೆಂದ ರವಿಪೂಜಾರಿ... ಮಾ. 7ರವರೆಗೆ ಪೊಲೀಸ್​​ ಕಸ್ಟಡಿಗೆ - Ravi pujari in 14 days bangalore police custody,

ಒಂದನೇ ಎಸಿಎಂಎಂ ನ್ಯಾಯಾಲಯ ರವಿಪೂಜಾರಿಯನ್ನು ಮಾರ್ಚ್​ 7ರವರೆಗೆ ಪೊಲೀಸ್​ ಕಸ್ಟಡಿಗೆ ನೀಡಿ ಆದೇಶಿಸಿದೆ.

Ravi pujari in 14 days police custody, Ravi pujari in 14 days bangalore police custody, Ravi pujari police custody news, ರವಿಪೂಜಾರಿ ಪೊಲೀಸ್ ಕಸ್ಟಡಿಗೆ, ರವಿಪೂಜಾರಿ ಬೆಂಗಳೂರು ಪೊಲೀಸ್ ಕಸ್ಟಡಿಗೆ, 14 ದಿನ ರವಿಪೂಜಾರಿ ಬೆಂಗಳೂರು ಪೊಲೀಸ್ ಕಸ್ಟಡಿಗೆ, ರವಿಪೂಜಾರಿ ಪೊಲೀಸ್ ಕಸ್ಟಡಿ ಸುದ್ದಿ,
ನನಗೆ ಕನ್ನಡ ಬರಲ್ಲವೆಂದ ಮೋಸ್ಟ್​ ವಾಂಟೆಡ್

By

Published : Feb 24, 2020, 3:38 PM IST

ಬೆಂಗಳೂರು:ದೇಶದ ಮೋಸ್ಟ್ ವಾಂಟೆಡ್‌ ಗ್ಯಾಂಗ್​ಸ್ಟಾರ್​ ರವಿಪೂಜಾರಿಯನ್ನು ಮಾ. 7ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಒಂದನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ.

ನನಗೆ ಕನ್ನಡ ಬರಲ್ಲವೆಂದ ಮೋಸ್ಟ್​ ವಾಂಟೆಡ್

ಪೊಲೀಸ್ ಬಂದೋಬಸ್ತ್​ನೊಂದಿಗೆ‌ ಸಿಸಿಬಿ ಡಿಸಿಪಿ‌ ಕುಲದೀಪ್ ನೇತೃತ್ವದ ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆರೋಪಿ ವಿರುದ್ಧ ಬೆಂಗಳೂರಿನಲ್ಲಿ 30ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿವೆ. ವಿಚಾರಣೆಗಾಗಿ 14 ದಿನಗಳ ಪೊಲೀಸ್ ಕಸ್ಟಡಿಗೆ ನೀಡುವಂತೆ ಅಭಿಯೋಜಕರು‌ ವಾದ ಮಂಡಿಸಿದ್ದರು.

ರವಿಪೂಜಾರಿಯನ್ನು ನ್ಯಾಯಾಧೀಶರು ನಿನ್ನ ಹೆಸರೇನು?.. ಕನ್ನಡ ಬರುತ್ತಾ?.. ಪೊಲೀಸರು ಕಿರುಕುಳ ಕೊಟ್ರಾ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಆತ, ನನ್ನ ಹೆಸರು ರವಿಪೂಜಾರಿ. ನನಗೆ ಕನ್ನಡ ಬರುವುದಿಲ್ಲ. ಪೊಲೀಸರು ನನಗೆ ಕಿರುಕುಳ ನೀಡಿಲ್ಲ ಎಂದಿದ್ದಾನೆ.

ಆರೋಪಿಯ ವಿಚಾರಣೆ ವೇಳೆ ಆಡಿಯೋ ಹಾಗೂ ವಿಡಿಯೋ ಚಿತ್ರೀಕರಿಸಬೇಕು ಎಂದು ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ. ವಿಚಾರಣೆ ವೇಳೆ ಆರೋಪಿ ಸಹಕರಿಸಬೇಕು ಎಂದು ಹೇಳಿ ಮಾ. 7ರವರೆಗೆ ಪೊಲೀಸ್ ಕಸ್ಟಡಿ‌ಗೆ ನೀಡಿ ನ್ಯಾಯಾಲಯ ಆದೇಶಿಸಿದೆ.

ABOUT THE AUTHOR

...view details