ಬೆಂಗಳೂರು:ಭೂಗತ ಪಾತಕಿ ರವಿ ಪೂಜಾರಿಯ ಪೊಲೀಸ್ ಕಸ್ಟಡಿ ಸದ್ಯದಲ್ಲೇ ಅಂತ್ಯವಾಗಲಿದ್ದು, ಸದ್ಯ ಸಿಸಿಬಿ ಪೊಲೀಸರ ಕಸ್ಟಡಿಯಲ್ಲಿರುವ ಈತನನ್ನು ವಶಕ್ಕೆ ಪಡೆಯಲು ಮುಂಬೈ, ಕೇರಳ ಹಾಗೂ ಬೆಂಗಳೂರು ಪೊಲೀಸರ ನಡುವೆ ಪೈಪೋಟಿ ಆರಂಭವಾಗಿದೆ.
ರವಿ ಪೂಜಾರಿಯನ್ನು ಕಸ್ಟಡಿಗೆ ಪಡೆಯಲು ಮುಂಬೈ, ಕೇರಳ, ಬೆಂಗಳೂರು ಪೊಲೀಸರ ಪೈಪೋಟಿ! - ಪೂಜಾರಿ ಕಸ್ಟಡಿಗೆ ಮುಂಬೈ,ಕೇರಳ,ಬೆಂಗಳೂರು ಪೊಲೀಸರ ಪೈಪೋಟಿ
ಭೂಗತ ಪಾತಕಿ ರವಿ ಪೂಜಾರಿಯ ಪೊಲೀಸ್ ಕಸ್ಟಡಿ ಸದ್ಯದಲ್ಲೇ ಅಂತ್ಯವಾಗಲಿದ್ದು, ಸದ್ಯ ಸಿಸಿಬಿ ಪೊಲೀಸರ ಕಸ್ಟಡಿಯಲ್ಲಿರುವ ಈತನನ್ನು ವಶಕ್ಕೆ ಪಡೆಯಲು ಮುಂಬೈ, ಕೇರಳ ಹಾಗೂ ಬೆಂಗಳೂರು ಪೊಲೀಸರ ನಡುವೆ ಪೈಪೋಟಿ ಆರಂಭವಾಗಿದೆ.
ರವಿ ಪೂಜಾರಿ
ರವಿ ಪೂಜಾರಿಯ ಕಸ್ಟಡಿ ಅಂತ್ಯಗೊಳ್ಳುವ ಹಿನ್ನೆಲೆಯಲ್ಲಿ ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆಯಲು ಮುಂಬೈ ಹಾಗೂ ಕೇರಳ ಪೊಲೀಸರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇತ್ತ ಮತ್ತಷ್ಟು ತನಿಖೆ ನಡೆಸಲು ಅವಕಾಶ ನೀಡುವಂತೆ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ರೆಡಿಯಾಗಿದ್ದಾರೆ.
ಕರ್ನಾಟಕದಲ್ಲಿ ರವಿ ಪೂಜಾರಿ ಮೇಲೆ 47 ಪ್ರಕರಣಗಳಿದ್ದು, ತನಿಖೆ ನಡೆಯಬೇಕಿದೆ. ಹೀಗಾಗಿ ಬೇರೆಯವರ ಕಸ್ಟಡಿಗೆ ಕೊಟ್ಟರೆ ಕಷ್ಟವಾಗುತ್ತೆ ಎಂದು ಮನವಿ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಗೊತ್ತಾಗಿದೆ.