ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ವಶಕ್ಕೆ ಪಡೆಯಲು ಕೇರಳ ಕ್ರೈಂ ಬ್ರಾಂಚ್ ಪೊಲೀಸರ ತುದಿಗಾಲಲ್ಲಿ ನಿಂತಿದ್ದಾರೆ.
ರವಿ ಪೂಜಾರಿ ಬಂಧನ ಪ್ರಕರಣ: ಬಾಡಿ ವಾರೆಂಟ್ ಪಡೆಯಲು ಕೇರಳ ಪೊಲೀಸರ ಆಗಮನ - ರವಿ ಪೂಜಾರಿ ಬಂಧನ ಪ್ರಕರಣ
ಭೂಗತ ಪಾತಕಿ ರವಿ ಪೂಜಾರಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ವಶಕ್ಕೆ ಪಡೆಯಲು ಕೇರಳ ಕ್ರೈಂ ಬ್ರಾಂಚ್ ಪೊಲೀಸರ ತುದಿಗಾಲಲ್ಲಿ ನಿಂತಿದ್ದಾರೆ.
![ರವಿ ಪೂಜಾರಿ ಬಂಧನ ಪ್ರಕರಣ: ಬಾಡಿ ವಾರೆಂಟ್ ಪಡೆಯಲು ಕೇರಳ ಪೊಲೀಸರ ಆಗಮನ Ravi Pujari](https://etvbharatimages.akamaized.net/etvbharat/prod-images/768-512-6270286-thumbnail-3x2-cghiko.jpg)
ರವಿ ಪೂಜಾರಿ
2018 ರಲ್ಲಿ ಮಲಯಾಳಂ ನಟಿ ಲೀನಾ ಮಾರಿಯಾ ಪಾಲ್ಗೆ ರವಿ ಪೂಜಾರಿ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟು ಬ್ಲಾಕ್ ಮೇಲ್ ಮಾಡಿದ್ದನು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕೇರಳ ಸಿಐಡಿ ಕ್ರೈಂ ಪೊಲೀಸರು ನಿನ್ನೆ ಬೆಂಗಳೂರಿಗೆ ಆಗಮಿಸಿದ್ದು, ಸಿಸಿಬಿ ಅಧಿಕಾರಿಗಳು ಜೊತೆ ಕೇರಳ ಪೊಲೀಸರು ಮಾತುಕತೆ ನಡೆಸಿದ್ದಾರೆ.
ಮಾರ್ಚ್ 7 ರಂದು ರವಿ ಪೂಜಾರಿ ಪೊಲೀಸ್ ಕಸ್ಟಡಿ ಅಂತ್ಯವಾಗಲಿದ್ದು, ಈ ಹಿನ್ನಲೆ ಆತನನ್ನು ವಶಕ್ಕೆ ಪಡೆಯಲು ಮುಂಬೈ ಮತ್ತು ಕೇರಳ ಪೊಲೀಸರು ಪೈಪೋಟಿ ನಡೆಸುತ್ತಿದ್ದಾರೆ. ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆಯಲು ಸಿದ್ಧತೆ ನಡೆಸುತ್ತಿದ್ದಾರೆ.