ಬೆಂಗಳೂರು: ಬಾಂಬೆ ಪೊಲೀಸರ ವಶಕ್ಕೆ ತನ್ನನ್ನು ನೀಡದಂತೆ ಬಂಧನಕ್ಕೊಳಗಾಗಿರುವ ರವಿಪೂಜಾರಿ, ಸಿಸಿಬಿ ಅಧಿಕಾರಿಗಳ ಬಳಿ ಬೇಡಿಕೊಂಡಿದ್ದಾನೆ ಎಂಬ ಮಾಹಿತಿ ತಿಳಿದುಬಂದಿದೆ.
ನಗರದಲ್ಲಿ ನಡೆದ 47 ಪ್ರಕರಣಗಳ ಮಾಹಿತಿಯನ್ನ ಪೊಲೀಸರು ಕಲೆಹಾಕುತ್ತಿದ್ದಾರೆ. ಇನ್ನು ಪೂಜಾರಿಯನ್ನ ಬಾಂಬೆ ಪೊಲೀಸರು ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ. ಹೀಗಾಗಿ ಸಿಸಿಬಿ ಹಿರಿಯ ಅಧಿಕಾರಿಗಳ ಎದುರು ಕಣ್ಣೀರು ಹಾಕಿ, ನಿಮ್ಮ ಕಾಲಿಗೆ ಬೀಳ್ತೀನಿ ನನ್ನನ್ನು ಬಾಂಬೆ ಪೊಲೀಸರಿಗೆ ಕೊಡಬೇಡಿ. ಬಾಂಬೆಗೆ ಕಳಿಸಿದ್ರೆ ಅಲ್ಲಿಯ ಪೊಲೀಸರು ನನ್ನನ್ನು ಬಿಡುವುದಿಲ್ಲ. ಬಾಂಬೆಯಲ್ಲಿ ಸಿಕ್ಕ ಡಾನ್ ದಾವುದ್ ಹುಡುಗರಿಗೆಲ್ಲಾ ಹೊಡೆದಿದ್ದೆ. ಹೀಗಾಗಿ ಅಲ್ಲಿಗೆ ಕರೆದೊಯ್ದರೆ ಅವರು ನನ್ನನ್ನು ಬಿಡುವುದಿಲ್ಲ. ನನಗೆ ಜೀವ ಭಯವಿದೆ. ಜಾಸ್ತಿ ಸೆಕ್ಯುರಿಟಿ ಕೊಡಿ ಪ್ಲೀಸ್ ಎಂದು ಮನವಿ ಮಾಡಿಕೊಂಡಿರುವ ವಿಚಾರ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.