ಬೆಂಗಳೂರು:ಭೂಗತಲೋಕದ ಡಾನ್ ರವಿ ಪೂಜಾರಿಯನ್ನು ಮಡಿವಾಳದ ವಿಧಿವಿಜ್ಞಾನ ಪ್ರಯೋಗಾಲಯದಲ್ಲೇ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ.
ಸಾಮಾನ್ಯವಾಗಿ ಯಾವುದೇ ಆರೋಪಿಗಳನ್ನ ಬಂಧಿಸಿದಾಗ ಮೊದಲು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೊಳಡಿಸುವುದು ಸಾಮಾನ್ಯ ಪ್ರಕ್ರಿಯೆ. ಆದರೆ, ರವಿ ಪೂಜಾರಿ ಕೇಸ್ ವ್ಯತಿರಿಕ್ತವಾಗಿದೆ.
ಎಫ್ಎಸ್ಎಲ್ ಇಂಟಾರಗೇಷನ್ ಕಚೇರಿಯಲ್ಲೇ ರವಿಪೂಜಾರಿಗೆ ವೈದ್ಯಕೀಯ ಪರೀಕ್ಷೆ ಈತನ ಮೇಲೆ 50ಕ್ಕಿಂತಲೂ ಹೆಚ್ಚು ಕೇಸ್ ದಾಖಲಾಗಿವೆ. ಹಾಗಾಗಿ ರವಿ ಪೂಜಾರಿಯನ್ನು ಪೊಲೀಸ್ ಭದ್ರತೆಯಲ್ಲೇ ವಿಧಿವಿಜ್ಞಾನ ಪ್ರಯೋಗಾಲಯದೊಳಗೆ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. ಆಸ್ಪತ್ರೆಗೆ ತೆರಳಿ ವೈದ್ಯಕೀಯ ಪರೀಕ್ಷೆ ಮಾಡಿಸುವ ಸಾಹಸಕ್ಕೆ ಕೈಹಾಕದೆ, ಎಫ್ಎಸ್ಎಲ್ ಕೇಂದ್ರದ ಇಂಟಾರಗೇಷನ್ನಲ್ಲಿ ವೈದ್ಯರನ್ನು ಪೊಲೀಸರು ಕರೆಯಿಸಿಕೊಂಡಿದ್ದಾರೆ.
ಎಫ್ಎಸ್ಎಲ್ ಇಂಟಾರಗೇಷನ್ ಕಚೇರಿಯಲ್ಲೇ ರವಿಪೂಜಾರಿಗೆ ವೈದ್ಯಕೀಯ ಪರೀಕ್ಷೆ ವೈದ್ಯರು ರವಿಪೂಜಾರಿ ಆರೋಗ್ಯ ತಪಾಸಣೆ ನಡೆಸಿ ಪೊಲೀಸರಿಗೆ ವರದಿ ನೀಡಲಿದ್ದಾರೆ. ಇದಾದ ಬಳಿಕ ಸುಮಾರು 13.30 ರ ವೇಳೆ 1 ನೇ ಎಸಿಎಂಎಂ ನ್ಯಾಯಾಲಯಕ್ಕೆ ರವಿಪೂಜಾರಿಯನ್ನು ಹಾಜರುಪಡಿಸಲಿದ್ದಾರೆ. ಈಗಾಗಲೇ ಎಸಿಎಂಎಂ ಕೋರ್ಟ್ ಬಳಿ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ.