ಕರ್ನಾಟಕ

karnataka

ETV Bharat / state

ರವಿ ಪೂಜಾರಿಗೆ ಅನಾರೋಗ್ಯ: ಜೈಲಿನ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ! - ಬೆಂಗಳೂರು ಪೊಲೀಸ್ ಲೇಟೆಸ್ಟ್ ಸುದ್ದಿ

ಅನಾರೋಗ್ಯದ ಹಿನ್ನೆಲೆಯಲ್ಲಿ ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರವಿ ಪೂಜಾರಿಗೆ ಈಗ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ravi poojari
ರವಿ ಪೂಜಾರಿ

By

Published : Dec 28, 2020, 11:56 PM IST

Updated : Dec 29, 2020, 12:10 AM IST

ಬೆಂಗಳೂರು: ಪೊಲೀಸರಿಗೆ ಸೆರೆ ಸಿಕ್ಕಿರುವ ಭೂಗತ ಪಾತಕಿ ರವಿಪೂಜಾರಿ ಅನಾರೋಗ್ಯ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾನೆ.

ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಎರಡು ದಶಕಗಳ ಕಾಲ ತಲೆಮರೆಸಿಕೊಂಡಿದ್ದ ರವಿ ಪೂಜಾರಿಯನ್ನು ಕಳೆದ ಫೆಬ್ರವರಿಯಲ್ಲಿ ನಗರ ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದರು.

ಇದನ್ನೂ ಓದಿ:'ನನಗೆ ಜೀವ ಭಯ ಇದೆ, ಮುಂಬೈಗೆ ಕಳುಹಿಸಬೇಡಿ'.. ಹೈಕೋರ್ಟ್​ಗೆ ಡಾನ್ ರವಿ ಪೂಜಾರಿ ಮೇಲ್ಮನವಿ

ಇತ್ತೀಚೆಗೆ ರವಿಪೂಜಾರಿಯಲ್ಲಿ‌ ಆರೋಗ್ಯ ಸಮಸ್ಯೆ‌ ಕಾಣಿಸಿಕೊಂಡಿದ್ದರಿಂದ ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ತಪಾಸಣೆ ನಡೆಸಿದ ವೈದ್ಯರು ರವಿಪೂಜಾರಿಗೆ ಹಾರ್ನಿಯಾ ಸಮಸ್ಯೆಯಿದ್ದು, ಹೆಚ್ಚಿನ ಚಿಕಿತ್ಸೆ ಅವಶ್ಯಕತೆಯಿದೆ ಎಂದು ಕಾರಾಗೃಹದ ಅಧಿಕಾರಿಗಳಿಗೆ ವರದಿ ನೀಡಿದ್ದರು.

ವೈದ್ಯರ ಸೂಚನೆ ಮೇರೆಗೆ ಸೋಮವಾರ ಮಧ್ಯಾಹ್ನ ಪೊಲೀಸ್ ಬಂದೋಬಸ್ತ್​​ನೊಂದಿಗೆ ರವಿ ಪೂಜಾರಿ ವಿಕ್ಟೋರಿಯಾ ಆಸ್ಪತ್ರೆ ದಾಖಲಾಗಿದ್ದಾನೆ.

Last Updated : Dec 29, 2020, 12:10 AM IST

ABOUT THE AUTHOR

...view details