ಕರ್ನಾಟಕ

karnataka

ETV Bharat / state

ಆ್ಯಂಬಿಡೆಂಟ್ ಬಹುಕೋಟಿ ವಂಚನೆ ಕೇಸ್​: ಹೈಕೋರ್ಟ್​ನಲ್ಲಿ ವಿಚಾರಣೆ - ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಅಧ್ಯಕ್ಷ

ಆ್ಯಂಬಿಡೆಂಟ್ ಕಂಪನಿಯಿಂದ ಹೂಡಿಕೆದಾರರಿಗೆ ಬಹುಕೋಟಿ ವಂಚನೆ ಕೇಸ್ ಕುರಿತು ಸಿಬಿಐ ತನಿಖೆ ಕೋರಿ ರವಿ ಕೃಷ್ಣಾ ರೆಡ್ಡಿ ಸಲ್ಲಿಸಿದ್ದ ಪಿಐಎಲ್ ಇಂದು ಹೈಕೋರ್ಟ್​​ನಲ್ಲಿ ವಿಚಾರಣೆ ನಡೆಸಲಾಯಿತು.

ಹೈಕೋರ್ಟ್

By

Published : Oct 18, 2019, 10:47 PM IST

ಬೆಂಗಳೂರು:ಆ್ಯಂಬಿಡೆಂಟ್ ಕಂಪನಿಯಿಂದ ಹೂಡಿಕೆದಾರರಿಗೆ ಬಹುಕೋಟಿ ವಂಚನೆ ಕೇಸ್ ಕುರಿತು ಸಿಬಿಐ ತನಿಖೆ ಕೋರಿ ರವಿ ಕೃಷ್ಣಾ ರೆಡ್ಡಿ ಸಲ್ಲಿಸಿದ್ದ ಪಿಐಎಲ್ ಇಂದು ಹೈಕೋರ್ಟ್​​ನಲ್ಲಿ ವಿಚಾರಣೆ ನಡೆಸಲಾಯಿತು.

ರವಿಕೃಷ್ಣಾರೆಡ್ಡಿ, ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಅಧ್ಯಕ್ಷರಾಗಿದ್ದು, ಆ್ಯಂಬಿಡೆಂಟ್ ವಿಚಾರವಾಗಿ ಹೂಡಿಕೆದಾರರ ಪರವಾಗಿ ಅನೇಕ ಹೋರಾಟಗಳನ್ನು ಮಾಡಿ, ಈಗ ಕಾನೂನಿನ ಅಡಿಯಲ್ಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಹೈಕೋರ್ಟ್

ಅರ್ಜಿದಾರರ ಪರ ವಾದ ಮಾಡಿದ ವಕೀಲರು ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೂ ಮೊದಲೇ‌ ಕೆಲ ಬಹುಕೋಟಿ ವಂಚನೆ ಪ್ರಕರಣಗಳು‌‌ ಬೆಳಕಿಗೆ ಬಂದಿವೆ. ಆ್ಯಂಬಿಡೆಂಟ್‌ ಪ್ರಕರಣದ ಪ್ರಮುಖ ಆರೋಪಿ ಫರೀದ್ ಅಹ್ಮದ್ ಹಾಲಿ‌ ಹಾಗೂ ಮಾಜಿ ಸಚಿವರಿಗೆ ಲಂಚ‌ ನೀಡಿರುವುದಾಗಿ ಮಾಹಿತಿ‌ ನೀಡಿದ್ದಾರೆ.

ಆದರೆ ಅಷ್ಟರಲ್ಲಿ ತನಿಖಾಧಿಕಾರಿಯನ್ನು ಎತ್ತಂಗಡಿ ಮಾಡಲಾಗಿತ್ತು. ಈ ವೇಳೆ ತನಿಖಾಧಿಕಾರಿಯಾಗಿದ್ದ ವೆಂಕಟೇಶ್ ಪ್ರಸನ್ನ‌ ಡಿಜಿ ಐಜಿಪಿಗೆ‌ ಪತ್ರ ಬರೆದು ಪ್ರಕರಣದ ಇಂಚಿಚು ಮಾಹಿತಿ ಬಹಿರಂಗ ಪಡಿಸಿದ್ದಾರೆ. ಪತ್ರದಲ್ಲಿರುವ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ರವಿಕೃಷ್ಣರೆಡ್ಡಿ ಚಳುವಳಿ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ನಂತರ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ವಿಚಾರಣೆ ಮಾಡಲಾಯಿತು. ತನಿಖಾ ವರದಿ ಸಲ್ಲಿಸುವಂತೆ ಸಿಸಿಬಿಗೆ ಹೈಕೋರ್ಟ್ ‌ಸೂಚನೆ ನೀಡಿದ್ದು. ಹೈಕೋರ್ಟ್ ವಿಚಾರಣೆಯನ್ನು ಅಕ್ಟೋಬರ್ 31 ಕ್ಕೆ ಮುಂದೂಡಿಕೆ ಮಾಡಲಾಗಿದೆ.

ABOUT THE AUTHOR

...view details