ಬೆಂಗಳೂರು:ಬಿಡಿಎ ನಿರ್ಮಿಸಿರುವ ಶಿವರಾಮ ಕಾರಂತ ಬಡಾವಣೆಯ ಸೈಟ್‌ಗಳ ದರ ನಿಗದಿ ಮಾಡಲಾಗಿದೆ. ಆದರೆ ಅನುಷ್ಠಾನಕ್ಕೆ ಸರ್ಕಾರದ ಅನುಮೋದನೆಗಾಗಿ ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಕಾಯುತ್ತಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಒಟ್ಟು 34 ಸಾವಿರ ಸೈಟ್ಗಳು ಇಲ್ಲಿ ಹಂಚಿಕೆಗೆ ತಯಾರಿವೆ. ಆರ್ಥಿಕವಾಗಿ ಹಿಂದುಳಿದವರಿಗಾಗಿ 20×30 ಅಡಿ ಅಳತೆಯ ನಿವೇಶನಗಳಿಗೆ 3,850 ರೂ ದರ ನಿಗದಿಪಡಿಸಲು ಉದ್ದೇಶಿಸಲಾಗಿದೆ. ಉಳಿದಂತೆ ಬಡಾವಣೆಯಲ್ಲಿನ 30×40 ಅಡಿ ಮತ್ತು ಅದಕ್ಕಿಂತ ಹೆಚ್ಚಿನ ವಿಸ್ತಿರಣದ ನಿವೇಶನಗಳಿಗೆ ಪ್ರತಿ ಚದರ ಅಡಿಗೆ 4,900 ರೂ. ನಿಗದಿಪಡಿಸಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲಿಗೆ 30×40 ಅಳತೆಯ ನಿವೇಶನವು 59 ಲಕ್ಷ ರೂ. ಆಗಲಿದ್ದು, ಒಟ್ಟು 17 ಸಾವಿರ ನಿವೇಶನಗಳನ್ನು ಮಾರುಕಟ್ಟೆ ದರದಲ್ಲಿ ಮಾರಾಟ ಮಾಡಿದಂತಾಗುತ್ತದೆ.