ಬೆಂಗಳೂರು:ಡಿ.ಜೆ.ಹಳ್ಳಿ ಗಲಭೆ ಕುರಿತು ಮಾತನಾಡದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಾಗಿ, ಗಲಭೆ ಪ್ರಕರಣದ ಬಗ್ಗೆ ಮಾತನಾಡಬೇಕೋ, ಬೇಡವೋ ಎಂದು ಗೊಂದಲಕ್ಕೆ ಸಿಲುಕಿದ್ದೇನೆ. ಕಂದಾಯ ಸಚಿವರಿಗೆ ಡಿ.ಜೆ.ಹಳ್ಳಿಯಲ್ಲೇನು ಕೆಲಸ? ಎನ್ನುವ ಸಿದ್ದರಾಮಯ್ಯ ಟ್ವೀಟ್ಗೆ ಸಚಿವ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.
ಡಿ.ಜೆ.ಹಳ್ಳಿ ಗಲಭೆ ಪ್ರಕರಣ: ಸಿದ್ದು ಟ್ವೀಟ್ಗೆ ಅಶೋಕ್ ಪ್ರತ್ಯುತ್ತರ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
'ನನ್ನ ಪ್ರಕಾರ ಬೆಂಗಳೂರಿನ ಆಸ್ತಿಪಾಸ್ತಿ ಹಾನಿ ಮಾಡಿರುವ ಎಸ್ಡಿಪಿಐ ಸಂಘಟನೆ ನಿಷೇಧ ಆಗಬೇಕು'- ಸಚಿವ ಆರ್.ಅಶೋಕ್
![ಡಿ.ಜೆ.ಹಳ್ಳಿ ಗಲಭೆ ಪ್ರಕರಣ: ಸಿದ್ದು ಟ್ವೀಟ್ಗೆ ಅಶೋಕ್ ಪ್ರತ್ಯುತ್ತರ R.Ashok](https://etvbharatimages.akamaized.net/etvbharat/prod-images/768-512-8495776-978-8495776-1597935023389.jpg)
ಅಶೋಕ್
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಅಪಾರ ಹಾನಿಗೆ ಕಾರಣವಾದ ಸಂಘಟನೆ ಇರಬೇಕಾ ಎಂದು ನನ್ನ ಆತ್ಮಸಾಕ್ಷಿ ಕೇಳುತ್ತಿದೆ ಎಂದಿದ್ದಾರೆ.