ಬೆಂಗಳೂರು:ದೇಶದಲ್ಲಿ ಅತಿ ವಿರಳವಾಗಿರುವ ಚೈನಾ ತಳಿಯ ನಾಯಿಯೊಂದು ಕಾಣೆಯಾಗಿದ್ದು ಈ ಸಂಬಂಧ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೋಟಿ ಬೆಲೆಬಾಳುವ ಈ ಶ್ವಾನ ಕಾಣೆ: ಪೊಲೀಸ್ ಠಾಣೆಯಲ್ಲಿ ದೂರು ದಾಖಲು - ಸೆಲೆಬ್ರಿಟಿ ಬ್ರೀಡರ್ ಸತೀಶ್ ರವರ ನಾಯಿ ಕಣ್ಮರೆ ಸುದ್ದಿ
ದೇಶದಲ್ಲಿ ಅತಿ ವಿರಳವಾಗಿರುವ ಚೈನಾ ತಳಿಯ ನಾಯಿಯೊಂದು ಕಾಣೆಯಾಗಿದ್ದು ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಹುಕೋಟಿ ಶ್ವಾನ ಮಿಸ್ಸಿಂಗ್
ಅಲಕ್ಸನ್ ಮ್ಯಾಲಮ್ಯೂಟ್ ಎಂಬ ಶ್ವಾನ ಕಾಣೆಯಾಗಿದೆ. ಕೆಂಪು ಮತ್ತು ಬಿಳಿ ಬಣ್ಣದ ಚೈನಾ ತಳಿಯ 3 ವರ್ಷದ ಶ್ವಾನ ಕಾಣೆಯಾಗಿದೆ. 'ಸೆಲೆಬ್ರಿಟಿ ಬ್ರೀಡರ್' ಎಂದೇ ಖ್ಯಾತಿ ಪಡೆದಿರುವ ಸತೀಶ್ ಎಂಬುವವರಿಗೆ ಸೇರಿರುವ ನಾಯಿ ಇದಾಗಿದೆ. ಕಳೆದೊಂದು ತಿಂಗಳ ಹಿಂದೆ ಕಳುವಾಗಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಮಾರುಕಟ್ಟೆಯಲ್ಲಿ ಕೋಟ್ಯಂತರ ಬೆಲೆಬಾಳುವ ಈ ಶ್ವಾನ ಭಾರತದಲ್ಲಿನ ಪ್ರಮುಖ ಮೂರು ತಳಿಯ ಒಂದಾಗಿದೆ. ಒಂದು ರೀತಿಯಲ್ಲಿ ಹಸ್ಕಿ ನಾಯಿಯನ್ನು ಹೋಲುವ ತಳಿ ಇದು.