ಕರ್ನಾಟಕ

karnataka

ETV Bharat / state

ಮತ್ತು ಬರಿಸುವ ಜ್ಯೂಸ್ ಕುಡಿಸಿ ಮಾಡೆಲ್ ಮೇಲೆ ಅತ್ಯಾಚಾರ: ಪ್ರಿಯತಮ ಸೇರಿ ಇಬ್ಬರಿಂದ ದುಷ್ಕೃತ್ಯ - ಬೆಂಗಳೂರಿನಲ್ಲಿ ಅತ್ಯಾಚಾರ

ಪ್ರಿಯತಮ ಮತ್ತು ಆತನ ಸ್ನೇಹಿತೆ ಮಾಡಲ್ ಮೇಲೆ ಅತ್ಯಾಚಾರವೆಸಗಿ ಬ್ಲಾಕ್​ ಮೇಲ್​ ಮಾಡಿದ ಪ್ರಕರಣ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

Rape on the Model in Benglauru
ಬೆಂಗಳೂರಿನಲ್ಲಿ ಮಾಡೆಲ್ ಮೇಲೆ ಅತ್ಯಾಚಾರ

By

Published : Apr 10, 2021, 7:02 PM IST

Updated : Apr 10, 2021, 7:16 PM IST

ಬೆಂಗಳೂರು: ಮತ್ತು ಬರುವ ಜ್ಯೂಸ್ ಕುಡಿಸಿ ಮಾಡೆಲ್ ಒಬ್ಬಳನ್ನು ಪ್ರಿಯತಮ ಮತ್ತು ಆತನ ಸ್ನೇಹಿತ ಅತ್ಯಾಚಾರ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಯುವತಿ ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದು, ಪ್ರಮೋದ್ ಎಂಬಾತ ಆಕೆಯನ್ನು ಹಿಂಬಾಲಿಸಿ ಪ್ರೀತಿಸುವುದಾಗಿ ಪೀಡಿಸುತ್ತಿದ್ದ. ಫೇಸ್​ಬುಕ್​ ಮೂಲಕ ಸಂಪರ್ಕಿಸಿ ಯುವತಿಯ ನಂಬರ್ ಪಡೆದು ನಿರಂತರವಾಗಿ ಮಾತನಾಡುತ್ತಿದ್ದ. ಹೀಗಾಗಿ, ಇಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು.

ಒಂದು ದಿನ ನಿನ್ನೊಂದಿಗೆ ಮಾತನಾಡಬೇಕು ಎಂದು ಪ್ರಮೋದ್ ಯುವತಿಯನ್ನು ಯಶವಂತಪುರದ ಲಾಡ್ಜ್‌ಗೆ ಕರೆಸಿಕೊಂಡಿದ್ದಾನೆ. ಬಳಿಕ ಜ್ಯೂಸ್‌ನಲ್ಲಿ ಮತ್ತು ಬರುವ ಪುಡಿ ಸೇರಿಸಿ ಕೊಟ್ಟಿದ್ದಾನೆ. ನಂತರ ಪ್ರಮೋದ್ ಹಾಗೂ ಆತನ ಸ್ನೇಹಿತ ಧನಂಜಯ್ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಅತ್ಯಾಚಾರ ನಡೆಸಿದ ಆರೋಪಿಗಳು ಯುವತಿ ಜೊತೆಗಿನ ಖಾಸಗಿ ಫೋಟೋ ಹಾಗೂ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾರೆ. ಬಳಿಕ ಸಂತ್ರಸ್ತ ಯುವತಿಗೆ ಕರೆ ಮಾಡಿ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿ ಕರೆಸಿಕೊಂಡು 18 ಬಾರಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.

ನೊಂದ ಯುವತಿ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಗಳಾದ ಪ್ರಮೋದ್ ಹಾಗೂ ಧನಂಜಯ್​ ಬಂಧನಕ್ಕೆ ಪೊಲೀಸರು ಈಗ ಬಲೆ ಬೀಸಿದ್ದಾರೆ.

Last Updated : Apr 10, 2021, 7:16 PM IST

ABOUT THE AUTHOR

...view details