ಬೆಂಗಳೂರು :ಕೆಲಸ ಕೊಡಿಸುವ ನೆಪದಲ್ಲಿ ಮತ್ತು ತರಿಸುವ ಕೇಕ್ ತಿನ್ನಿಸಿ ಅತ್ಯಾಚಾರ ಮಾಡಿ ಖಾಸಗಿ ಕ್ಷಣಗಳ ಅಶ್ಲೀಲ ವಿಡಿಯೋ ಚಿತ್ರಿಕರಿಸಿದ್ದ ಆರೋಪಿ ಬಂಧನ ಮಾಡುವಲ್ಲಿ ಚಂದ್ರಲೇಔಟ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಡ್ಯ ಮೂಲದ ಸಾಗರ್ ಗೌಡ ಬಂಧಿತ ಆರೋಪಿ.
ಸಾಗರ್ ಬೆಂಗಳೂರಲ್ಲಿ ಆನ್ಲೈನ್ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಸಂತ್ರಸ್ತೆಯ ಸಂಬಂಧಿಯ ಬರ್ತ್ ಡೇ ಪಾರ್ಟಿಯಲ್ಲಿ ಈತ ಪರಿಚಯನಾಗಿದ್ದ. 2019ರಲ್ಲಿ ಯುವತಿ ಬೆಂಗಳೂರಲ್ಲಿ ಕೆಲಸ ಹುಡುಕುತ್ತಿದ್ದಾಗ ಯುವಕ ರೆಸ್ಯೂಮ್ ತೆಗೆದುಕೊಂಡು ಕೆಲಸ ಕೊಡಿಸುತ್ತೇನೆ ಎಂದು ಸಂಬಂಧಿಕರ ಮನೆಗೆ ಕರೆದೊಯ್ದಿದ್ದ. ಇದೇ ವೇಳೆ ಕೇಕ್ನಲ್ಲಿ ಮತ್ತು ಬರುವ ಪೌಡರ್ ಹಾಕಿ ಕೇಕ್ ತಿನ್ನಿಸಿದ್ದ. ನಂತರ ಯುವತಿಯ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನ ಚಿತ್ರೀಕರಿಸಿ, ಬೆದರಿಕೆ ಹಾಕುತ್ತಿದ್ದ.