ಕರ್ನಾಟಕ

karnataka

ETV Bharat / state

ಕಾಲೇಜು ಶುಲ್ಕ ಕಟ್ಟಲು ಬಂದ ಯುವತಿ ಮೇಲೆ ಅತ್ಯಾಚಾರ: ಕೊಲೆ - bangalore rape and murder news

ಹೊರ ರಾಜ್ಯದಿಂದ ವಿದ್ಯಾಭ್ಯಾಸಕ್ಕಾಗಿ ಬಂದಿದ್ದ ಯುವತಿ ಖಾಸಗಿ ಕಾಲೇಜ್​ವೊಂದರಲ್ಲಿ ಪ್ರವೇಶ ಪಡೆದಿದ್ದರು. ಒಂದು ಕಂತಿನ ಕಾಲೇಜು ಶುಲ್ಕ ಕಟ್ಟಲು ಬಾಕಿ ಇರುವ ಕಾರಣ ನಗರಕ್ಕೆ ಬಂದಿದ್ದರು. ಈ ವೇಳೆ, ಆಕೆ ತನಗೆ ಪರಿಚಯವಿದ್ದ ವ್ಯಕ್ತಿ ಮನೆಗೆ ಹೋದಾಗ, ಆತ ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಯುವತಿ ಮೇಲೆ ಅತ್ಯಾಚಾರ, ಕೊಲೆ
ಯುವತಿ ಮೇಲೆ ಅತ್ಯಾಚಾರ, ಕೊಲೆ

By

Published : Dec 16, 2020, 5:51 PM IST

Updated : Dec 16, 2020, 6:48 PM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಯುವತಿಯನ್ನ ಅತ್ಯಾಚಾರ ಮಾಡಿ, ಕೊಲೆ ಮಾಡಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೊರ ರಾಜ್ಯದಿಂದ ವಿದ್ಯಾಭ್ಯಾಸಕ್ಕಾಗಿ ಬಂದಿದ್ದ ಯುವತಿ ಖಾಸಗಿ ಕಾಲೇಜುವೊಂದರಲ್ಲಿ ಪ್ರವೇಶ ಪಡೆದಿದ್ದರು. ಒಂದು ಕಂತಿನ ಕಾಲೇಜು ಶುಲ್ಕ ಕಟ್ಟಲು ಬಾಕಿ ಇರುವ ಕಾರಣ ನಗರಕ್ಕೆ ಬಂದಿದ್ದರು. ಈ ವೇಳೆ, ತನಗೆ ಪರಿಚಯವಿದ್ದ ಆರೋಪಿಗೆ ಯುವತಿ ಕರೆ ಮಾಡಿದ್ದಾಳೆ. ಈ ವೇಳೆ, ‌ಯುವತಿಗೆ ಆರೋಪಿ ವಿಜಯನಗರದ ತನ್ನ ರೂಂಗೆ ಬರುವಂತೆ ಸೂಚಿಸಿದ್ದಾನೆ. ಬಳಿಕ ರೂಂಗೆ ಹೋದ ವಿದ್ಯಾರ್ಥಿನಿ ಮೇಲೆ ಆರೋಪಿ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದಾನೆ.

ಓದಿ:ನಾಪತ್ತೆಯಾಗಿದ್ದ ತಾಯಿ - ಮಗಳು ಶವವಾಗಿ ಪತ್ತೆ

ಬಳಿಕ ಅದೇ ಬಿಲ್ಡಿಂಗ್​​ನ ಕೆಳ ಮಹಡಿಗೆ ಬಂದು ತನ್ನ ಸ್ನೇಹಿತೆ ಪ್ರಜ್ಞೆ ಕಳೆದುಕೊಂಡಿದ್ದಾಳೆ ಎಂದು ಹೇಳಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಅಷ್ಟರಲ್ಲೇ ವಿದ್ಯಾರ್ಥಿನಿ ಮೃತಪಟ್ಟಿದ್ದು, ಅನುಮಾನಗೊಂಡ ಆಸ್ಪತ್ರೆಯವರು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಸದ್ಯ ಆರೋಪಿಯನ್ನ ವಶಕ್ಕೆ ಪಡೆದ ಬ್ಯಾಡರಹಳ್ಳಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Last Updated : Dec 16, 2020, 6:48 PM IST

ABOUT THE AUTHOR

...view details