ಬೆಂಗಳೂರು:ಉಂಡು ಹೋದ ಕೊಂಡು ಹೋದ ಎಂಬ ಮಾತಿನಂತೆ ಇಲ್ಲೊಬ್ಬ ಆಸಾಮಿ ವಿಧವೆಯರನ್ನೇ ಟಾರ್ಗೆಟ್ ಮಾಡಿ ಹಣ ಹಾಗೂ ಫ್ಲ್ಯಾಟ್ ಕೊಡಿಸುವುದಾಗಿ ನಂಬಿಸಿ ಅತ್ಯಾಚಾರ ಮಾಡಿರುವುದಾಗಿ ನೊಂದ ಮಹಿಳೆ ಸಂಪಂಗಿ ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ವಿಧವೆಯರೇ ಟಾರ್ಗೆಟ್... ಹಣ-ಫ್ಲ್ಯಾಟ್ ಕೊಡಿಸುವುದಾಗಿ ನಂಬಿಸಿ ಅತ್ಯಾಚಾರ
ವೆಂಕಟೇಶ್ ಎಂಬಾತ ವಿಧವೆಯರನ್ನು ಪರಿಚಯ ಮಾಡಿಕೊಂಡು ಸಲಿಗೆಯಿಂದ ಇದ್ದು, ಬೇರೆಯವರ ಫ್ಲ್ಯಾಟ್ಗಳನ್ನು ನನ್ನದೇ ಎಂದು ತೋರಿಸಿ ನಂಬಿಸುತ್ತಿದ್ದ. ಜೊತೆಗೆ ಮೊದಲೇ ನೊಂದಿರುವ ಮಹಿಳೆಯರಿಗೆ ಆಮಿಷ ಒಡ್ಡಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಎನ್ನುವ ಆರೋಪ ಕೇಳಿ ಬಂದಿದೆ.
ಆರೋಪಿ ವೆಂಕಟೇಶ್
ಆರೋಪಿ ವೆಂಕಟೇಶ್ ವಿಧವೆಯರನ್ನು ಪರಿಚಯ ಮಾಡಿಕೊಂಡು ಸಲಿಗೆಯಿಂದ ಇದ್ದು, ಬೇರೆಯವರ ಫ್ಲ್ಯಾಟ್ಗಳನ್ನು ನನ್ನದೇ ಎಂದು ತೋರಿಸಿ ನಂಬಿಸುತ್ತಿದ್ದನಂತೆ. ಜೊತೆಗೆ ಮೊದಲೇ ನೊಂದಿರುವ ಮಹಿಳೆಯರಿಗೆ ಆಮಿಷ ಒಡ್ಡಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಎನ್ನಲಾಗಿದೆ.
ಬಳಿಕ ಪ್ಲಾಟ್ ನಿನ್ನ ಹೆಸರಿಗೆ ಬರೆಯುವುದಾಗಿ ಮಹಿಳೆಯಿಂದ ಸುಮಾರು 70 ಲಕ್ಷ ಹಣ ಪಡೆದು ಮಹಿಳೆ ಜೊತೆಗಿದ್ದ ತನ್ನ ಸಂಬಂಧವನ್ನು ಕಡಿತಗೊಳಿಸಿ ಹಣ, ಚಿನ್ನಾಭರಣದೊಂದಿಗೆ ವೆಂಕಟೇಶ್ ಎಸ್ಕೇಪ್ ಆಗಿದ್ದಾನೆ. ಸಂಪಂಗಿ ರಾಮನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.