ಕರ್ನಾಟಕ

karnataka

ETV Bharat / state

ಡಿಕೆಶಿಗೆ ಇಡಿ ನೋಟಿಸ್​; ಬಿಜೆಪಿಯಿಂದ ಹೇಡಿತನದ ಕೃತ್ಯ ಎಂದ ಸುರ್ಜೇವಾಲಾ - Directorate Enforcement

ಭಾರತ್ ಜೋಡೋ ಯಾತ್ರೆಗೆ ಅಗಾಧವಾದ ಸಾರ್ವಜನಿಕ ಬೆಂಬಲ, ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಕರ್ನಾಟಕದಲ್ಲಿ ಯಾತ್ರೆಯ ತಯಾರಿಯಲ್ಲಿರುವ ಕಾಂಗ್ರೆಸ್‌ಗೆ ಮೋದಿ ಸರ್ಕಾರವು ಇಡಿಯನ್ನು ಛೂ ಬಿಟ್ಟಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.

randeep-surjewala-tweet-on-ed-notice-to-dk-shivakumar
ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ

By

Published : Sep 15, 2022, 10:43 PM IST

ಬೆಂಗಳೂರು:ಸೆಪ್ಟೆಂಬರ್ 19ರಂದು ವಿಚಾರಣೆಗೆ ಹಾಜರಾಗುವಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​​ಗೆ ನೋಟಿಸ್ ನೀಡಿರುವ ಜಾರಿ ನಿರ್ದೇಶನಾಲಯದ ಕ್ರಮಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಬೇಸರ ವ್ಯಕ್ತಪಡಿಸಿದ್ದಾರೆ.

ಇಡಿ ನೋಟಿಸ್ ನೀಡಿರುವುದನ್ನ ಖಂಡಿಸಿ ರಣದೀಪ್ ಸಿಂಗ್ ಸುರ್ಜೇವಾಲ ಟ್ವೀಟ್ ಮಾಡಿ ಬೇಸರ ಹೊರಹಾಕಿದ್ದು, ಆಗಸ್ಟ್ 3ರ ಮೇಕೆದಾಟು ಯಾತ್ರೆ, ಆಗಸ್ಟ್ 15ರಂದು ನಡೆಸಿದ ಅದರ ಫ್ರೀಡಂ ಮಾರ್ಚ್, ಶೇ 40ರಷ್ಟು ಕಮಿಷನ್, ಸರ್ಕಾರಿ ಉದ್ಯೋಗದ ನೇಮಕಾತಿ ಹಗರಣಗಳು, ಬೆಂಗಳೂರು ಪ್ರವಾಹ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ ಮೋದಿ ಸರ್ಕಾರವನ್ನು ತಲ್ಲಣಗೊಳಿಸಿದೆ. ಬೊಮ್ಮಾಯಿ ಸರ್ಕಾರ ಲೂಟಿ ಮಾಡುತ್ತಿದೆ. ಕರ್ನಾಟಕವನ್ನು 'ದಿನಕ್ಕೆ ಒಂದು ಹಗರಣ' ಎಂಬ ಕುಖ್ಯಾತಿ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಭಾರತ್ ಜೋಡೋ ಯಾತ್ರೆಗೆ ಅಗಾಧವಾದ ಸಾರ್ವಜನಿಕ ಬೆಂಬಲ, ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಕರ್ನಾಟಕದಲ್ಲಿ ಯಾತ್ರೆಯ ತಯಾರಿಯಲ್ಲಿರುವ ಕಾಂಗ್ರೆಸ್‌ಗೆ ಮೋದಿ ಸರ್ಕಾರವು ಇಡಿ ತಂದಿದೆ. ಡಿಕೆ ಶಿವಕುಮಾರ್ ಅವರನ್ನ ಟಾರ್ಗೆಟ್ ಮಾಡಲು ಬಿಜೆಪಿ ಇಂತಹ ಹೇಡಿತನದ ಕೃತ್ಯಕ್ಕೆ ಮುಂದಾಗಿದೆ. ಇದು ಭ್ರಷ್ಟ ಬೊಮ್ಮಾಯಿ ಸರ್ಕಾರವನ್ನು ನಿರ್ನಾಮ ಮಾಡುವ ನಮ್ಮ ಸಂಕಲ್ಪವನ್ನು ಬಲಪಡಿಸುತ್ತದೆ ಎಂದಿದ್ದಾರೆ.

ಇಡಿ ಸಮನ್ಸ್ ಬಗ್ಗೆ ಟ್ವೀಟ್​​ ಮೂಲಕ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಭಾರತ್ ಜೋಡೋ ಯಾತ್ರೆ ಹಾಗೂ ವಿಧಾನಸಭೆ ಅಧಿವೇಶನ ನಡೆಯುತ್ತಿದೆ. ಈ ಸಂದರ್ಭದಲ್ಲಿ ನನಗೆ ಮತ್ತೊಮ್ಮೆ ಇಡಿ ಸಮನ್ಸ್‌ ಕೊಟ್ಟಿದೆ. ತನಿಖೆಗೆ ಸಹಕರಿಸಲು ಸಿದ್ಧನಿದ್ದೇನೆ. ಆದರೆ ಮೇಲಿಂದ ಮೇಲೆ ಕಿರುಕುಳ ನೀಡಲಾಗುತ್ತಿದೆ. ಇದರಿಂದ ನನ್ನ ಸಾಂವಿಧಾನಿಕ ರಾಜಕೀಯ ಕರ್ತವ್ಯಗಳನ್ನು ನಿರ್ವಹಿಸಲು ತೊಂದರೆಯಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಡಿಕೆಶಿಗೆ ಇಡಿ ಸಮನ್ಸ್​.. ಭಾರತ್​ ಜೋಡೋ ತಡೆಯಲು ಕಿರುಕುಳ: ಕೆಪಿಸಿಸಿ ಅಧ್ಯಕ್ಷರು ಗರಂ

ABOUT THE AUTHOR

...view details