ಬೆಂಗಳೂರು:ಪಾದರಾಯಪುರದಲ್ಲಿ ಸುಮಾರು 54 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ರ್ಯಾಂಡಮ್ ಪರೀಕ್ಷೆ ನಡೆಸಲು ಆರೋಗ್ಯಾಧಿಕಾರಿಗಳು ಮುಂದಾಗಿದ್ದು, ಎರಡು ಮೂರು ದಿನ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಮುಂದಿನ ದಿನಗಳಲ್ಲಿ ಜನರು ಪರೀಕ್ಷೆಗೆ ಬರುವುದು ಅನುಮಾನ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಪಾದರಾಯನಪುರದಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಸಂಬಂಧ ಅಲ್ಲಿನ ಜನರ ಪರೀಕ್ಷೆ ನಡೆಸಲಾಗುತ್ತಿದೆ. ಜನರು ಬಂದು ಪರೀಕ್ಷೆ ಮಾಡಿಸಿಕೊಂಡು ಹೋಗುತ್ತಿದ್ದಾರೆ. ಆದರೆ ಬರುವ ಭಾನುವಾರ ರಂಜಾನ್ ಇದ್ದು, ಜನರು ಪರೀಕ್ಷೆಗೆ ಬರುವುದು ಅನುಮಾನವಾಗಿದೆ. ನಿನ್ನೆ ಜಾಗರಣ್ ಹಬ್ಬ ಇದ್ದ ಕಾರಣ ಕೇವಲ 39 ಜನರು ಮಾತ್ರ ಬಂದಿದ್ದರು. ಇನ್ನುಳಿದ ನಾಲ್ಕು ದಿನವೂ ಆರೋಗ್ಯ ಪರೀಕ್ಷೆಗೆ ಬರೋದು ಅನುಮಾನವಾಗಿದೆ.
ಯಾರನ್ನೂ ಒತ್ತಾಯಪೂರ್ವಕವಾಗಿ ಕರೆಸಿಕೊಳ್ಳಲು ಸಾಧ್ಯವಿಲ್ಲ. ಅವರೇ ಸ್ವಯಂಪ್ರೇರಿತರಾಗಿ ಬಂದರೆ ಅಷ್ಟೇ ಬೇಗ ಬೇಗ ಪರೀಕ್ಷೆ ನಡೆಸಲು ಸಾಧ್ಯ. ಮನವೊಲಿಸಿ ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದು ಆರೋಗ್ಯಾಧಿಕಾರಿ ಡಾ. ಮನೋರಂಜನ್ ಹೆಗಡೆ ಮಾಹಿತಿ ನೀಡಿದರು.
ಈ ಹಿಂದೆ ಕ್ವಾರಂಟೈನ್ ಮಾಡಲು ಮುಂದಾದ ವೇಳೆ ಜನರು ಗಲಭೆ ನಡೆಸಿದ ಕಹಿ ಘಟನೆ ಇರುವಾಗ ಆರೋಗ್ಯ ಪರೀಕ್ಷೆಗೆ ಒತ್ತಾಯ ಮಾಡಲು ಆರೋಗ್ಯ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಪ್ರತಿದಿನ ನಡೆದ ಆರೋಗ್ಯ ಪರೀಕ್ಷೆಯ ಅಂಕಿ-ಅಂಶ ಹೀಗಿದೆ.