ಕರ್ನಾಟಕ

karnataka

ETV Bharat / state

ರಾಂಪುರ ಮಠದ ಸ್ವಾಮೀಜಿ ಕೋವಿಡ್​​ನಿಂದ ನಿಧನ.. ಟ್ವೀಟ್​ ಮೂಲಕ ಸುಧಾಕರ್ ಸಂತಾಪ - Rampur Math Swamiji died by Kovid

ಹೊನ್ನಾಳಿ ತಾಲೂಕಿನ ರಾಂಪುರದ ಮಠದ ಶಿವಯೋಗಿ ಹಾಲಸ್ವಾಮಿ ಬೃಹನ್ಮಠದ ಶ್ರೀ ವಿಶ್ವೇಶ್ವರ ಹಾಲಸ್ವಾಮಿಗಳು ಲಿಂಗೈಕ್ಯರಾಗಿರುವುದು ತಿಳಿದು ನನಗೆ ತೀವ್ರ ದುಃಖವಾಗಿದೆ..

ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್
ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್

By

Published : Jul 15, 2020, 9:55 PM IST

ಬೆಂಗಳೂರು:ಕೋವಿಡ್-19ನಿಂದ ರಾಂಪುರ ಹಾಗೂ ಬಸವಾಪಟ್ಟಣ ಮಠದ ಪೀಠಾಧ್ಯಕ್ಷರಾದ ವಿಶ್ವೇಶ್ವರ ಶಿವಾಚಾರ್ಯ ಸ್ವಾಮೀಜಿ ನಿಧನರಾಗಿರುವುದಕ್ಕೆ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಸಂತಾಪ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ರಾಂಪುರದ ಮಠದ ಶಿವಯೋಗಿ ಹಾಲಸ್ವಾಮಿ ಬೃಹನ್ಮಠದ ಶ್ರೀ ವಿಶ್ವೇಶ್ವರ ಹಾಲಸ್ವಾಮಿಗಳು ಲಿಂಗೈಕ್ಯರಾಗಿರುವುದು ತಿಳಿದು ನನಗೆ ತೀವ್ರ ದುಃಖವಾಗಿದೆ. ಅವರು ಕೊರೊನಾ ಸೋಂಕಿನಿಂದ ಮೆಗ್ಗಾನ್ ಆಸ್ಪತ್ರೆ ಕೋವಿಡ್‌ ಆರೈಕೆ ಕೇಂದ್ರದಲ್ಲಿ ಮೃತಪಟ್ಟಿದ್ದಾರೆ. ಭಗವಂತನು ಅವರಿಗೆ ಸ್ವರ್ಗ ಕರುಣಿಸಲಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

ಜ್ವರ ಹಾಗೂ ಉಸಿರಾಟದ ಸಮಸ್ಯೆಯಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀಗಳಿಗೆ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಬಳಿಕ ವರದಿಯಲ್ಲಿ ಪಾಸಿಟಿವ್ ಬಂದಿತ್ತು. ಕೊರೊನಾ ಮಾರ್ಗಸೂಚಿಯಂತೆ ಚಿಕಿತ್ಸೆ ಕೊಡಲಾಗುತ್ತಿದ್ದಾದರೂ ಇಂದು ಚಿಕಿತ್ಸೆ ಫಲಿಸದೆ ಲಿಂಗೈಕ್ಯರಾಗಿದ್ದಾರೆ.

ABOUT THE AUTHOR

...view details