ಕರ್ನಾಟಕ

karnataka

ETV Bharat / state

ರಾಸುಗಳ ಜೊತೆ ರ್‍ಯಾಂಪ್ ವಾಕ್‌ ಮಾಡಿದ ರಷ್ಯನ್ ಮಾಡೆಲ್​ಗಳು! - mtb nagaraju

ಹೊಸಕೋಟೆ ಪಟ್ಟಣದ ಬಿಜೆಪಿ ಅಧ್ಯಕ್ಷ ಜಯರಾಜ್ ರವರು ಕಳೆದ 26 ವರ್ಷಗಳಿಂದ ಗೋ ಸೇವೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದು. ಈ ಕಾರ್ಯಕ್ರಮಕ್ಕೆ ಸಚಿವ ಎಂಟಿಬಿ ನಾಗರಾಜ್ ಚಾಲನೆ ನೀಡಿ ವಿಜೇತ ರಾಸುಗಳಿಗೆ ಹಾಗೂ ಮಾಲಿಕರಿಗೆ ಸನ್ಮಾನ ಮಾಡಿ ಬಹುಮಾನ ವಿತರಿಸಿದರು.

Ramp walk for cattle in hoskote
ರಾಸುಗಳ ಜೊತೆ ರ್‍ಯಾಂಪ್ ವಾಕ್‌ ಮಾಡಿದ ರಷ್ಯನ್ ಮಾಡೆಲ್​ಗಳು!

By

Published : Jan 16, 2021, 4:52 AM IST

ಹೊಸಕೋಟೆ: ನಾವು ಅದೆಷ್ಟೋ ಪ್ಯಾಷನ್ ಶೊಗಳನ್ನು ನೋಡಿರುತ್ತೇವೆ. ಆದರೆ, ಈ ಪ್ಯಾಷನ್ ಶೋ ಮಾತ್ರ ತುಂಬಾನೆ ವಿಭಿನ್ನ. ಇಲ್ಲಿ ಮಾಡೆಲ್​ಗಳು ಇದ್ದರು ರ್‍ಯಾಂಪ್ ವಾಕ್‌ ನಲ್ಲಿ ಹೈಲೆಟ್ ಆಗಿದ್ದು ರಾಸುಗಳುಗಳು ಮಾತ್ರ. ಈ ರಾಸುಗಳಿಗೆ ಬಹುಮಾನ ನೀಡಲು ನೂತನವಾಗಿ ಪ್ರಮಾಣವಚನ ಸ್ವೀಕರಿಸಿದ ಸಚಿವರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದು ಮತ್ತೊಂದು ವಿಶೇಷ.‌

ಹೌದು, ರಾಸುಗಳ ಜೊತೆ ದೇಶಿಯ ಉಡುಪನ್ನು ತೊಟ್ಟು ರ್‍ಯಾಂಪ್ ಮೇಲೆ ಹೆಜ್ಜೆ ಹಾಕುತ್ತಿರುವ ರಷ್ಯನ್ ಮಾಡೆಲ್​ಗಳು, ಮತ್ತೊಂದೆಡೆ ಸಾವಿರಾರು ರಾಸುಗಳ ಪ್ರದರ್ಶನ, ವಿಜೇತ ರಾಸುಗಳಿಗೆ ಬಹುಮಾನ ವಿತರಿಸಿ ಕಾರ್ಯಕ್ರಮಕ್ಕೆ ಮೆರುಗು ತಂದ ನೂತನ ಸಚಿವ ಎಂಟಿಬಿ ನಾಗರಾಜ್.

ರಾಸುಗಳ ಜೊತೆ ರ್‍ಯಾಂಪ್ ವಾಕ್‌ ಮಾಡಿದ ರಷ್ಯನ್ ಮಾಡೆಲ್​ಗಳು!

ಈ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪಟ್ಟದ ಕ್ರೀಡಾಂಗಣದಲ್ಲಿ. ಹೊಸಕೋಟೆ ಪಟ್ಟಣದ ಬಿಜೆಪಿ ಅಧ್ಯಕ್ಷ ಜಯರಾಜ್ ರವರು ಕಳೆದ 26 ವರ್ಷಗಳಿಂದ ಗೋ ಸೇವೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದು. ಈ ಕಾರ್ಯಕ್ರಮಕ್ಕೆ ಸಚಿವ ಎಂಟಿಬಿ ನಾಗರಾಜ್ ಚಾಲನೆ ನೀಡಿ ವಿಜೇತ ರಾಸುಗಳಿಗೆ ಹಾಗೂ ಮಾಲಿಕರಿಗೆ ಸನ್ಮಾನ ಮಾಡಿ ಬಹುಮಾನ ವಿತರಿಸಿದರು.

ಕಾರ್ಯಕ್ರಮದಲ್ಲಿ ಎರಡು ಸಾವಿರಕ್ಕೂ ಹೆಚ್ಚು ರಾಸುಗಳು ಭಾಗವಹಿಸಿದ್ದು, ಎಲ್ಲಾ ರಾಸುಗಳಿಗೂ ಕಬ್ಬು, ಬೂಸ ವಿತರಿಸಿದ್ದು, ತಮ್ಮ ತಾಯಿಯ ನೆನಪಿನಾರ್ಥವಾಗಿ ಈ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದು, ಪ್ರತಿ ವರ್ಷದಿಂದ ವರ್ಷಕ್ಕೆ ನಮ್ಮ ಗೋ ಸೇವೆ ಕಾರ್ಯಕ್ರಮಕ್ಕೆ ಬರುವ ರಾಸುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಎಲ್ಲಾ ರಾಸುಗಳಿಗು ಹಿಂಡಿ-ಬೂಸ ವಿತರಣೆ ಮಾಡಿ, ಉತ್ತಮ ರಾಸುಗಳ ಬಹುಮಾನಗಳನ್ನು ವಿತರಿಸುವ ಮೂಲಕ ರಾಸುಗಳ ಸಂತತಿ ಉಳಿಸಿ ಬೆಳಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ ಎಂದು ಕಾರ್ಯಕ್ರಮ ಆಯೋಜಕರಾದ ಜಯರಾಜ್ ತಿಳಿಸಿದ್ದಾರೆ.

ABOUT THE AUTHOR

...view details