ಕರ್ನಾಟಕ

karnataka

ETV Bharat / state

ಎಸ್ಐಟಿ ವಿಚಾರಣೆ ವೇಳೆ ರಮೇಶ್ ಜಾರಕಿಹೊಳಿ ಹೇಳಿದ್ದೇನು? - ಮಾಜಿ ಸಚಿವರ ಸಿಡಿ ಪ್ರಕರಣ

ಹಾವು ಸಾಯಬಾರದು ಕೋಲು ‌ಮುರಿಯಬಾರದು ಎಂಬಂತೆ ಯುವತಿ ತಮಗೆ ಗೊತ್ತಿಲ್ಲ. ನಾನು ಯಾರಿಗೂ ಹಣ ನೀಡಿಲ್ಲ. ನಾಲ್ಕು ತಿಂಗಳ ಹಿಂದೆಯೇ ಸಿಡಿ ಬಗ್ಗೆ ಗೊತ್ತಾಗಿತ್ತು ಎಂದು ಹೇಳುತ್ತಾ, ಹಳೆಯ ಮಾತಿನಂತೆ ಅದು ನಕಲಿ ಸಿಡಿ ಎಂದು ಹೇಳಿ ಬಹುತೇಕ ಪ್ರಶ್ನೆಗಳಿಗೆ ಗೊತ್ತಿಲ್ಲ ಎಂದೇ ಉತ್ತರ ಹೇಳಿದ್ದಾರೆ ಎಂದು ತಿಳಿದು ಬಂದಿದೆ‌‌..

ramesh-zarakiholi-during-sit-hearing-case
ಎಸ್ಐಟಿ ವಿಚಾರಣೆ

By

Published : Mar 20, 2021, 5:47 PM IST

ಬೆಂಗಳೂರು :ಮಾಜಿ ಸಚಿವರ ಸಿಡಿ ಪ್ರಕರಣ ಎಸ್​​ಐಟಿ ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದಂತಿದೆ. ಅತ್ತ ಮಾಚಿ ಸಚಿವ ರಮೇಶ್ ಜಾರಕಿಹೊಳಿ ವಿಚಾರಣೆ ವೇಳೆ ಹಾವು ಸಾಯಬಾರದು, ಕೋಲು ಮುರಿಯಬಾರದು ಎಂಬಂತೆ ಉತ್ತರಿಸಿದ್ದಾರೆ. ಹಾಗಾದರೆ, ಇಡೀ ಪ್ರಕರಣದಲ್ಲಿ ಏನಾಗುತ್ತಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ‌.

ಓದಿ: ಸಿಡಿ ಪ್ರಕರಣ ಬೇಧಿಸಲು ಎಸ್​ಐಟಿ ಸೂತ್ರ; ಗೌರಿ ಹತ್ಯೆ ಪ್ರಕರಣದ ತನಿಖಾ ಮಾದರಿಯಲ್ಲೇ ನಡೀತಿದ್ಯಾ ತನಿಖೆ?

ಎಸ್​​ಐಟಿ ರಚನೆಯಾದಾಗಿಂದಲೂ ಸಂತ್ರಸ್ತೆ ಮತ್ತು ಇಬ್ಬರು ಯುವಕರು ನಾಪತ್ತೆಯಾಗಿದ್ದಾರೆ. ಅಜ್ಞಾತ ಸ್ಥಳದಿಂದ ವಿಡಿಯೋ ಹರಿಬಿಟ್ಟು, ತಮ್ಮದೇ ರೀತಿಯ ತಂತ್ರ ಅನುಸರಿಸುತ್ತಿದ್ದಾರೆ. ಈ ಸ್ಟ್ರಾಟಜಿ ಬೇಧಿಸಿ ಯುವತಿ ಮತ್ತು ಇಬ್ಬರು ಯುವಕರನ್ನು ಕರೆ ತರಲು ಎಸ್​​ಐಟಿ ಮತ್ತಷ್ಟು ಅಧಿಕಾರಿಗಳನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ.

ಗೌರಿ ಲಂಕೇಶ್ ಕೇಸ್‌ನಲ್ಲಿ‌ ಅದ್ಭುತ ಕೆಲಸ ಮಾಡಿದ್ದ ಡಿಸಿಪಿ ಅನುಚೇತ್ ಈಗಾಗಲೇ ಎಸ್​​ಐಟಿಯಲ್ಲಿದ್ದಾರೆ. ಇವರ ಜೊತೆಗೆ ಡಿಸಿಪಿ ಹರೀಶ್ ಪಾಂಡೆ ಸೇರಿ 30ಕ್ಕೂ ಹೆಚ್ಚು ಅಧಿಕಾರಿಗಳನ್ನು ಸೇರಿಸಿಕೊಳ್ಳಲಾಗಿದೆ.

ಟೆಕ್ನಿಕಲ್ ಎವಿಡೆನ್ಸ್ ಕಲೆ, ಯುವಕ-ಯುವತಿಯ ಐಟೆಂಟಿಡಿ, ಪಿಕ್ಕಿಂಗ್ ಟೀಂ, ಪೇಪರ್ ವರ್ಕ್ ಮಾಡುವ ಟೀಂ, ಹೀಗೆ ಬೇರೆ ಬೇರೆ ಆಯಾಮದಲ್ಲೂ ಒಂದೊಂದು ಟೀಂ ಕೆಲಸ ಮಾಡಲಿದೆ. ಎಸ್ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ಪ್ರತಿದಿನ ಸಭೆ ಸೇರಿ ಕೇಸ್ ಪ್ರಗತಿ ಮತ್ತು ಮುಂದಿನ ಕಾರ್ಯಾಚರಣೆ ನಿರ್ಧಾರವಾಗಲಿದೆ.

ನಿನ್ನೆ ಸಂಜೆ ಆಡುಗೋಡಿ ಟೆಕ್ನಿಕಲ್ ವಿಂಗ್​​ಗೆ ಸಾಹುಕಾರ್ ರಮೇಶ್ ಜಾರಕಿಹೊಳಿ ವಿಚಾರಣೆಗೆ ಹಾಜರಾಗಿದ್ದರು. ತನಿಖಾಧಿಕಾರಿ ಧರ್ಮೇಂದ್ರ ನೇತೃತ್ವದಲ್ಲಿ ನಡೆದ ವಿಚಾರಣೆಯಲ್ಲಿ 65ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಿದ್ದರು ಎನ್ನಲಾಗಿದೆ‌‌. ಈ ವೇಳೆ ಗಲಿಬಿಲಿಗೊಳಗಾದ ಮಾಚಿ ಸಚಿವರು ಸರಿಯಾದ ಉತ್ತರವನ್ನೇ ನೀಡಿಲ್ಲ ಎನ್ನಲಾಗ್ತಿದೆ.

ಹಾವು ಸಾಯಬಾರದು ಕೋಲು ‌ಮುರಿಯಬಾರದು ಎಂಬಂತೆ ಯುವತಿ ತಮಗೆ ಗೊತ್ತಿಲ್ಲ. ನಾನು ಯಾರಿಗೂ ಹಣ ನೀಡಿಲ್ಲ. ನಾಲ್ಕು ತಿಂಗಳ ಹಿಂದೆಯೇ ಸಿಡಿ ಬಗ್ಗೆ ಗೊತ್ತಾಗಿತ್ತು ಎಂದು ಹೇಳುತ್ತಾ, ಹಳೆಯ ಮಾತಿನಂತೆ ಅದು ನಕಲಿ ಸಿಡಿ ಎಂದು ಹೇಳಿ ಬಹುತೇಕ ಪ್ರಶ್ನೆಗಳಿಗೆ ಗೊತ್ತಿಲ್ಲ ಎಂದೇ ಉತ್ತರ ಹೇಳಿದ್ದಾರೆ ಎಂದು ತಿಳಿದು ಬಂದಿದೆ‌‌. ಇನ್ನು, ಎಸ್​​ಐಟಿ ಈವರೆಗೂ ಯಾವುದೇ ಆರೋಪಿಯನ್ನು ಬಂಧಿಸಿಲ್ಲ. ಯುವಕರು ಮತ್ತು ಯುವತಿ ಸಿಕ್ಕ ಬಳಿಕವೇ ತನಿಖೆ ಮತ್ತಷ್ಟು ವೇಗ ಪಡೆಯಲಿದೆ.

ಬೆಳಗಾವಿಗೆ ಹೊರಟ ಎಸ್ಐಟಿ :ಸಿಡಿಯಲ್ಲಿರುವ ಯುವತಿಯ ಪೋಷಕರ ಹೇಳಿಕೆ ಪಡೆಯಲು ಎಸ್ಐಟಿ ಅಧಿಕಾರಿಗಳು ಬೆಳಗಾವಿಗೆ ತೆರಳಿದ್ದಾರೆ. ಬೆಳಗಾವಿ ಎಪಿಎಂಸಿ ಯಾರ್ಡ್ ಠಾಣೆಯಲ್ಲಿ ಮಗಳನ್ನು ಅಪರಿಚಿತರು ಅಪಹರಿಸಿದ್ದಾರೆ ಎಂದು ಪೋಷಕರು ದೂರು ನೀಡಿದ್ದರು.

ಈ ಸಂಬಂಧ ಪ್ರಕರಣ ಬೆಂಗಳೂರು ಆರ್​ಟಿ ನಗರ ಠಾಣೆಗೆ ವರ್ಗಾವಣೆ ಮತ್ತೆ ಎಸ್ಐಟಿಗೆ ಟ್ರಾನ್ಸ್ ಫರ್ ಆಗಿತ್ತು. ಪ್ರಕರಣ ತನಿಖೆ ನಡೆಸುತ್ತಿರುವ ಎಸ್ಐಟಿ ಎಸಿಪಿ ನೇತೃತ್ವದ ತಂಡವೊಂದ ಬೆಳಗಾವಿಗೆ ತೆರಳಿದೆ‌. ಇಂದು ಸಂಜೆ ಅಥವಾ ನಾಳೆ ಮುಂಜಾನೆ ಆಕೆಯ ಪೋಷಕರ ಸ್ಟೇಟ್ ಮೆಂಟ್ ದಾಖಲಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ‌.

ABOUT THE AUTHOR

...view details