ಕರ್ನಾಟಕ

karnataka

ETV Bharat / state

ಜಾರಕಿಹೊಳಿ ಸಿಡಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು: ಸಂಕೇತ್​ ಏಣಗಿ - Ramesh Jarakiholi

ರಮೇಶ್‌ ಜಾರಕಿಹೊಳಿ ಪ್ರಭಾವಿ ರಾಜಕಾರಣಿ. ಇವರಿಗೆ ಸರ್ಕಾರವನ್ನು ಬೀಳಿಸುವ ಶಕ್ತಿಯಿದೆ, ಸರ್ಕಾರವನ್ನ ರಚಿಸುವ ಶಕ್ತಿಯೂ ಇದೆ ಎಂದು ಸುಪ್ರೀಂಕೋರ್ಟ್​ ನ್ಯಾಯವಾದಿ ಸಂಕೇತ್ ಏಣಗಿ ತಿಳಿಸಿದ್ದಾರೆ. ಅಲ್ಲದೆ, ಸಿಡಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

sankesth-enagi
ಸಂಕೇತ್ ಏಣಗಿ

By

Published : Mar 3, 2021, 4:30 PM IST

Updated : Mar 3, 2021, 4:47 PM IST

ಬೆಂಗಳೂರು:ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಸುಪ್ರೀಂ ಕೋರ್ಟ್​ ವಕೀಲ ಸಂಕೇತ್ ಏಣಗಿ ಒತ್ತಾಯಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಅವರೊಂದಿಗೆ ಜಂಟಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿ ಅವರನ್ನು ಒಳಗೊಂಡ ಸಮಿತಿಗೆ ತನಿಖೆಯ ಜವಾಬ್ದಾರಿ ವಹಿಸಬೇಕು. ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿ ಇರುವುದರಿಂದ ಪೊಲೀಸ್ ತನಿಖೆಗೆ ಒಪ್ಪಿಸಿದರೆ ನ್ಯಾಯ ಸಿಗುವುದು ಅನುಮಾನ. ಇದು ಕೇವಲ ನಮ್ಮ ಒತ್ತಾಯ ಮಾತ್ರವಲ್ಲ, ಕಾಂಗ್ರೆಸ್ ಪಕ್ಷದ ಒತ್ತಾಯ ಕೂಡ ಆಗಿದೆ ಎಂದರು.

ಕ್ರಿಮಿನಲ್ ಕಾಯ್ದೆಯಲ್ಲಿ ಬಹಳ ಸ್ಪಷ್ಟವಾಗಿರುವಂತೆ, ಸಂತ್ರಸ್ತೆಯೇ ಕೇಸ್ ದಾಖಲಿಸಬೇಕಿಲ್ಲ. ಅವರ ಪರವಾಗಿ ಬೇರೆಯವರು ದಾಖಲಿಸಲು ಅವಕಾಶವಿದೆ. ದಿನೇಶ್ ಕಲ್ಲಹಳ್ಳಿ ದಾಖಲಿಸಿರುವುದು ನ್ಯಾಯಸಮ್ಮತವಾಗಿದೆ. ಈ ಪ್ರಕರಣವನ್ನ ತುರ್ತು ಕೈಗೆತ್ತಿಕೊಳ್ಳಬೇಕು. ರಾಮದಾಸ್ ಶ್ರೀನಿವಾಸ್ ನಾಯಕ್ ಪ್ರಕರಣ, ಮನ್ಸೂರ್ ಅಲಿಖಾನ್ ಪ್ರಕರಣ, ರತನ್ ಲಾಲ್ ಪ್ರಕರಣದಲ್ಲೂ ಸುಪ್ರೀಂ ಸ್ಪಷ್ಟವಾಗಿ ತಿಳಿಸಿದೆ ಎಂದರು.

ಸುಪ್ರೀಂ ಕೋರ್ಟ್​ ವಕೀಲ ಸಂಕೇತ್ ಏಣಗಿ

ಪ್ರಭಾವಿ ರಾಜಕಾರಣಿ:ರಮೇಶ್‌ ಜಾರಕಿಹೊಳಿ ಪ್ರಭಾವಿ ರಾಜಕಾರಣಿ. ಇವರಿಗೆ ಸರ್ಕಾರವನ್ನು ಬೀಳಿಸುವ ಶಕ್ತಿಯಿದೆ. ಸರ್ಕಾರವನ್ನ ರಚಿಸುವ ಶಕ್ತಿಯೂ ಇದೆ. ಪೊಲೀಸರನ್ನೂ ಇವರು ಯಾಮಾರಿಸಬಹುದು. ಹಾಗಾಗಿ, ಅಧಿಕಾರದಿಂದ ಇವರನ್ನ ಕೆಳಗಿಳಿಸಬೇಕು. ಕೂಡಲೇ ಸಿಎಂ ರಾಜೀನಾಮೆ ಪಡೆದುಕೊಳ್ಳಬೇಕು. ಇಲ್ಲವೇ ನಾವು ರಾಷ್ಟ್ರಪತಿಗಳನ್ನ ಭೇಟಿ ಮಾಡುತ್ತೇವೆ. ರಾಷ್ಟ್ರಪತಿಗೆ ದೂರನ್ನ ಕೊಡುತ್ತೇವೆ, ರಾಜ್ಯಪಾಲರಿಗೂ ದೂರು ಸಲ್ಲಿಸುತ್ತೇವೆ. ಕೂಡಲೇ ನ್ಯಾಯಾಂಗ ತನಿಖೆಗೆ ಕೊಡಬೇಕು ಎಂದು ಒತ್ತಾಯಿಸಿದರು.

ನಾಲ್ಕನೇ ಅಂಗಕ್ಕೆ ಅಪಮಾನ:ಮಾಧ್ಯಮಗಳ ಬಗ್ಗೆ ಅಸಂವಿಧಾನಿಕ ಪದ ಬಳಸಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ, ಬಹಿರಂಗವಾಗಿ ರಮೇಶ್ ಜಾರಕಿಹೊಳಿ ಕ್ಷಮೆ ಕೇಳಬೇಕು. ಮಾಧ್ಯಮಗಳು ಸಂವಿಧಾನದ ನಾಲ್ಕನೇ ಅಂಗ ಅಂತ ಕೂಡ ಕರೆಯುತ್ತೇವೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಆದರೆ, ಇವರು ಕರ್ನಾಟಕದ ಅಖಂಡತೆಯನ್ನೇ ಪ್ರಶ್ನಿಸುತ್ತಾರೆ. ಬೆಳಗಾವಿ ಡಿಫರೆಂಟ್ ಸ್ಟೇಟ್ ಅಂತ ಹೇಳಿಕೆ ನೀಡ್ತಾರೆ. ನಾವೆಲ್ಲ ಅವಿಭಾಜ್ಯ ಅಂಗ ಅಂತ ಹೇಳುತ್ತೇವೆ. ಆದರೆ ಇವರು ಪ್ರತ್ಯೇಕವಾಗಿ ನೋಡುತ್ತಾರೆ. ಇವರ ಇನ್ನಷ್ಟು ವಿಚಾರಗಳು ಇದೆ. ಬಿಡುಗಡೆಯಾಗಿರುವ ಸಿಡಿಯಲ್ಲಿ ಒಬ್ಬಳೇ ಮಹಿಳೆ ನಾ? ಇಲ್ಲ, ಇನ್ನಷ್ಟು ಮಹಿಳೆಯರು ಇದ್ದಾರಾ? ತನಿಖೆಯಾಗಬೇಕು. ಅವರನ್ನ ಗಡಿಪಾರು ಮಾಡಬೇಕು ಎಂದರು.

ಓದಿ:ಆಶಾದಾಯಕ: ರಾಜ್ಯದಲ್ಲಿ ಸಿಸೇರಿಯನ್​ಗಿಂತ​ ಸಾಮಾನ್ಯ ಹೆರಿಗೆ ಪ್ರಮಾಣವೇ ಹೆಚ್ಚು!

ಇಬ್ಬರಲ್ಲಿ ಒಬ್ಬರು ಒಪ್ಪಿಕೊಳ್ಳಲಿ:ಯಡಿಯೂರಪ್ಪ ಭ್ರಷ್ಟ ಅಂತ ವಿಡಿಯೋದಲ್ಲಿ ಹೇಳಿದ್ದಾರೆ. ಆದರೂ ಯಡಿಯೂರಪ್ಪ ಅವರು ಯಾಕೆ ಸುಮ್ಮನಿದ್ದಾರೆ? ಬಹುಶಃ ಅವರು ಭ್ರಷ್ಟರಿರಬೇಕು. ಇಲ್ಲ, ರಮೇಶ್ ಜಾರಕಿಹೊಳಿ ಅನೈತಿಕ ಇರಬೇಕು. ಇಬ್ಬರಲ್ಲಿ ಒಬ್ಬರು ಯಾವುದು ಸತ್ಯ ಅಂತ ಒಪ್ಪಿಕೊಳ್ಳಬೇಕು ಎಂದು ಒತ್ತಾಯಿಸಿದರು.

Last Updated : Mar 3, 2021, 4:47 PM IST

ABOUT THE AUTHOR

...view details