ಕರ್ನಾಟಕ

karnataka

ETV Bharat / state

ಸಿಎಂ-ರಮೇಶ್‌ ಜಾರಕಿಹೊಳಿ ಭೇಟಿ.. ಸಿಡಿ ಸುಳಿಯಿಂದ ಹೊರ ಬಂದು ಸಚಿವಗಿರಿ ಗಿಟ್ಟಿಸಲು ಸಾಹುಕಾರ್ ಸರ್ಕಸ್!? - ಇಂದಿ ಪ್ರಮುಖ ಸದ್ದಿಗಳು

ಆದಷ್ಟು ಬೇಗ ಪ್ರಕರಣ ಇತ್ಯರ್ಥಕ್ಕೆ ಸಹಕಾರ ನೀಡಬೇಕು, ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎನ್ನುವ ವಿಷಯಗಳನ್ನಿಟ್ಟುಕೊಂಡು ರಾಜಕೀಯ ಚರ್ಚೆ ನಡೆಸಿದರು ಎನ್ನಲಾಗಿದೆ..

ramesh-jarakiholi-met-cm-basavaraj-bommai
ರಮೇಶ್ ಜಾರಕಿಹೊಳಿ‌ ಬಸವರಾಜ ಬೊಮ್ಮಾಯಿ

By

Published : Oct 19, 2021, 5:06 PM IST

ಬೆಂಗಳೂರು : ಸಿಡಿ ಕೇಸ್‌ನಿಂದ ಹೊರ ಬಂದು ಸಚಿವ ಸಂಪುಟ ಸೇರ್ಪಡೆಯಾಗಲು ಪ್ರಯತ್ನಿಸುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಆರ್‌ಟಿನಗರದಲ್ಲಿರುವ ಸಿಎಂ ಖಾಸಗಿ ನಿವಾಸಕ್ಕೆ ಬೆಳಗ್ಗೆ ಭೇಟಿ ನೀಡಿದ ರಮೇಶ್ ಜಾರಕಿಹೊಳಿ‌, ತಮ್ಮ ರಾಜಕೀಯ ಭವಿಷ್ಯದ ಕುರಿತು ಮಾತುಕತೆ ನಡೆಸಿದರು. ಸಿಡಿ ಪ್ರಕರಣದಿಂದಾಗಿ ಅಧಿಕಾರ ಕಳೆದುಕೊಂಡಿದ್ದು, ಮತ್ತೆ ಅಧಿಕಾರ ಪಡೆಯುವ ಕುರಿತು ಸಮಾಲೋಚನೆ ನಡೆಸಿದರು.

ಆದಷ್ಟು ಬೇಗ ಪ್ರಕರಣ ಇತ್ಯರ್ಥಕ್ಕೆ ಸಹಕಾರ ನೀಡಬೇಕು, ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎನ್ನುವ ವಿಷಯಗಳನ್ನಿಟ್ಟುಕೊಂಡು ರಾಜಕೀಯ ಚರ್ಚೆ ನಡೆಸಿದರು ಎನ್ನಲಾಗಿದೆ. ಸಿಎಂ ಭೇಟಿ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ರಮೇಶ್ ಜಾರಕಿಹೊಳಿ‌ ನಿರಾಕರಿಸಿದರು. ಮಾಧ್ಯಮಗಳ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸುತ್ತಾ ನಿರ್ಗಮಿಸಿದರು‌.

ABOUT THE AUTHOR

...view details