ಬೆಂಗಳೂರು :ಮಹದಾಯಿ ಅಧಿಸೂಚನೆ ಪ್ರಕಟಗೊಂಡ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಯೋಜನೆ ಅನುಷ್ಠಾನಕ್ಕೆ ಮುಂದಾಗುವ ಸಂಬಂಧ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಜೊತೆಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮಾತುಕತೆ ನಡೆಸಿದರು.
ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸ ಧವಳಗಿರಿಗೆ ಸಚಿವ ರಮೇಶ್ ಜಾರಕಿಹೊಳಿ ಭೇಟಿ ನೀಡಿ, ನೋಟಿಫಿಕೇಷನ್ ಹೊರಡಿಸಿರುವ ಕುರಿತು ಸಿಎಂ ಜೊತೆ ಸಮಾಲೋಚಿಸಿದರು. ಸದ್ಯ ಯೋಜನೆ ಅನುಷ್ಠಾನ, ನೀರಿನ ಸಂಪೂರ್ಣ ಬಳಕೆಗೆ ರಾಜ್ಯ ಸರ್ಕಾರ ಯಾವ ರೀತಿ ಮುಂದುವರೆಯಬೇಕು, ಇದರಲ್ಲಿನ ಸಮಸ್ಯೆಗಳು ಮತ್ತು ಸವಾಲುಗಳ ಕುರಿತು ಚರ್ಚೆ ನಡೆಸಿದರು.
ಸರ್ಕಾರದ ಮುಂದಿರುವ ಮಹದಾಯಿ ಯೋಜನೆ ಸವಾಲುಗಳಿವು..
1.ಮೊದಲು ಕೇಂದ್ರ ಸರ್ಕಾರ ಮಹದಾಯಿ ಜಲ ನಿರ್ವಹಣಾ ಪ್ರಾಧಿಕಾರ ರಚಿಸಬೇಕು.
2.ಬಳಿಕ ರಾಜ್ಯ ಸರ್ಕಾರ ಮಹದಾಯಿ ಯೋಜನೆಯ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಬೇಕು.