ಬೆಂಗಳೂರು :ಕೊರೊನಾದ ಈ ಕಾಲಘಟ್ಟದಲ್ಲಿ 60 ವರ್ಷ ದಾಟಿದ ಹಿರಿಯ ನಾಗರಿಕರು ಹೊರಗೆ ಬರದೇ ಮನೆಯಲ್ಲೇ ಬೆಚ್ಚಗೆ ವಿಶಾಂತ್ರಿ ಪಡೆಯುತ್ತಿದ್ದಾರೆ. ಟಿವಿ ನೋಡ್ತಾ ಮನೆಯಲ್ಲೇ ಇರುವ ಮಕ್ಕಳು-ಮೊಮ್ಮಕ್ಕಳೊಂದಿಗೆ ಆಟವಾಡ್ತಾ ಟೈಂ ಪಾಸ್ ಮಾಡ್ತಿದ್ದಾರೆ. ಆದರೆ, ಇಲ್ಲೊಬ್ಬರು 64 ವರ್ಷ ವಯಸ್ಸಿನ ವ್ಯಕ್ತಿ ತಮ್ಮ ಗುರಿ ಏನೇ ಇದ್ದರೂ ಸಾಧನೆ ಮಾಡೋ ಕಡೆ ಅಂತಾ ಮುನ್ನುಗ್ಗುತ್ತಿದ್ದಾರೆ.
64ರ ಹರೆಯದಲ್ಲಿ ವಿಶ್ವದಾಖಲೆ ಮಾಡಿದ ಪ್ರೊ. ರಮೇಶ್ ಬಾಬು ಇವರ ಹೆಸರು ಪ್ರೊ. ರಮೇಶ್ ಬಾಬು, ಬೆಂಗಳೂರು ನಿವಾಸಿ. ಟಾಟಾ ಇನ್ಸ್‌ಟಿಟ್ಯೂಟ್‌ನಲ್ಲಿ ಕೆಲಸ ಮಾಡುತ್ತಿದ್ದವರು ಸದ್ಯ ನಿವೃತ್ತಿ ಹೊಂದಿದ್ದಾರೆ. ಉದ್ಯೋಗಕ್ಕೆ ನಿವೃತ್ತಿ ಕೊಟ್ಟಿದ್ದರೂ ಅವರ ಸಾಧನೆಗೆ ಮಾತ್ರ ರೆಸ್ಟ್ ಕೊಡದೇ ದಾಖಲೆಯ ಮೇಲೆ ದಾಖಲೆ ಮಾಡುತ್ತಿದ್ದಾರೆ.
ಈಗಾಗಲೇ, ವಿವಿಧ ಕ್ಷೇತ್ರಗಳಲ್ಲಿ ದಾಖಲೆಗಳನ್ನು ಮಾಡಿದ್ದಾರೆ ರಮೇಶ್ ಬಾಬು. ಕೊರೊನಾ ಸಮಯದಲ್ಲೂ 3 ವಿಶ್ವ ದಾಖಲೆ ಮಾಡಿದ್ದಾರೆ. ಒಟ್ಟಾರೆ 94 ರೆಕಾರ್ಡ್ಸ್ ಇವರ ಹೆಸರಲ್ಲಿವೆ.
ವಿಶ್ವ ದಾಖಲೆಗಾಗಿ 1 ನಿಮಿಷದಲ್ಲಿ ವೇಗವಾಗಿ 90 ಡಿಗ್ರಿಯಲ್ಲಿ 108 ಬಾರಿ ಹಿಪ್ ರೋಟೇಶನ್, ಗಿನ್ನಿಸ್ ದಾಖಲೆಗಾಗಿ 1 ನಿಮಿಷದಲ್ಲಿ 88 ಸ್ಕಂದಾಸನ ಯೋಗಾಸನ, 1 ನಿಮಿಷದಲ್ಲಿ ವೇಗವಾಗಿ 120 ಡಿಗ್ರಿಯಲ್ಲಿ 91 ಹೈಕಿಕ್ ದಾಖಲೆ ಮಾಡಿದ್ದಾರೆ. 91 ದಾಖಲೆಗಳಲ್ಲಿ ವ್ಯಾಯಾಮ ಹಾಗೂ ಯೋಗಾಸನ ಕ್ಷೇತ್ರದಲ್ಲಿ ತಲಾ 6 ವಿಶ್ವ ದಾಖಲೆ ಮಾಡಿದ್ದಾರೆ.
60ವರ್ಷ ದಾಟಿದ್ರೆ ಸಾಕು ರಾಮಕೃಷ್ಣ ಅಂತಾ ಕೂರುವವರ ಮುಂದೆ ರಮೇಶ್‌ಬಾಬು ಅವರು, ಸಾಧನೆಗಳನ್ನು ಮಾಡುತ್ತಿದ್ದಾರೆ. ಈ ಸಾಧನೆ ಹೀಗೆ ಮುಂದುವರೆಯಲಿ. ಎಲ್ಲರಿಗೂ ಪ್ರೇರಣೆ ಆಗಲಿ..