ಬೆಂಗಳೂರು:ನಗರದಲ್ಲಿ ಕೊರೊನಾ ಸೋಂಕು ನಿಯಂತ್ರಣ ಕಾರ್ಯಕ್ಕೆ ರಾಯಭಾರಿಯನ್ನಾಗಿ ಕನ್ನಡದ ಪ್ರಖ್ಯಾತ ನಟ ರಮೇಶ್ ಅರವಿಂದ್ ಅವರನ್ನು ಆಯ್ಕೆ ಮಾಡಿದ್ದು, ಕೊರೊನಾ ಕುರಿತು ಜನಜಾಗೃತಿ ಮೂಡಿಸಿರುವ ವೀಡಿಯೋ ತುಣುಕನ್ನು ಬಿಬಿಎಂಪಿ ಬಿಡುಗಡೆ ಮಾಡಿದೆ.
ಕೊರೊನಾ ವಿಶ್ವದ ಮೂಲೆಮೂಲೆಯಲ್ಲಿ ಹರಡಿರೋದ್ರಿಂದ ಪ್ಯಾಂಡಮಿಕ್ ಎನ್ನುತ್ತೇವೆ. ಪ್ರತೀ ವರ್ಗದ ಜನರಿಗೆ ಕೊರೊನಾ ಆತಂಕ, ಕಷ್ಟ-ನಷ್ಟ ಉಂಟುಮಾಡಿದೆ.
ಆದ್ರೆ ಕೊರೊನಾ ಸಂಕಷ್ಟದಲ್ಲೂ ಜನರು ಯಾವ ರೀತಿ ನಡೆದುಕೊಳ್ಳಬೇಕು, ಹೇಗೆ ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ರಮೇಶ್ ಅರವಿಂದ್ ವಿವರಿಸಿದ್ದಾರೆ.
ಕೊರೊನಾ ಮಣಿಸಲು ಕೈಜೋಡಿಸೋಣ; ರಮೇಶ್ ಅರವಿಂದ್ - ನಟ ರಮೇಶ್ ಅರವಿಂದ್
ಮಾಸ್ಕ್ ಧರಿಸುವ ಪ್ರಾಮುಖ್ಯತೆ ಏನು, ಸಾಮಾಜಿಕ ಅಂತರದ ಅಗತ್ಯತೆ, ಪಲ್ಸ್ ಆಕ್ಸಿಮೀಟರ್ ಬಳಕೆ ಏನೆಂಬುದನ್ನು ಸರಳವಾಗಿ ರಮೇಶ್ ಅರವಿಂದ್ ವಿವರಿಸಿದ್ದು, ಕೊರೊನಾ ವಿರುದ್ಧ ಹೋರಾಡಲು ಸರ್ಕಾರಕ್ಕೆ ಸಹಕಾರ ನೀಡೋಣ ಎಂದಿದ್ದಾರೆ.
ಕೊರೊನಾ ಮಣಿಸಲು ಕೈಜೋಡಿಸೋಣ ಎಂದ ರಮೇಶ್ ಅರವಿಂದ್
ಮಾಸ್ಕ್ ಧರಿಸುವ ಪ್ರಾಮುಖ್ಯತೆ ಏನು, ಸಾಮಾಜಿಕ ಅಂತರದ ಅಗತ್ಯತೆ, ಪಲ್ಸ್ ಆಕ್ಸಿಮೀಟರ್ ಬಳಕೆ ಏನೆಂಬುದನ್ನು ಸರಳವಾಗಿ ವಿವರಿಸಿದ್ದಾರೆ.
ಅನಗತ್ಯವಾಗಿ ಆಸ್ಪತ್ರೆ ಸೇರಬೇಡಿ, ವಿಪರೀತಿ ಹೆದರುವುದು ಬೇಡ, ಹಾಗೇಯೇ ಲಾಕ್ ಡೌನ್ ತೆರವಾದ್ರೂ ಎಚ್ಚರಿಕೆಯಿಂದ ಕೆಲ ನಿಯಮ ಪಾರು ಮಾಡೋಣ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.
ಅತೀ ಶೀಘ್ರದಲ್ಲಿ ಲಸಿಕೆ ಸಿಗಲಿದೆ. ಅಲ್ಲಿಯವರೆಗೂ ತಮ್ಮ ಕೈಲಾದ , ತಮ್ಮ ಕಂಟ್ರೋಲ್ನಲ್ಲಿರುವ ವಿಧಾನ ಬಳಸಿ, ಸಮಾಜ , ಸರ್ಕಾರಕ್ಕೆ ಸಹಕಾರ ಮಾಡೋಣ ಎಂದಿದ್ದಾರೆ.