ಕರ್ನಾಟಕ

karnataka

ETV Bharat / state

ಸ್ವಾತಂತ್ರ್ಯಕ್ಕೋಸ್ಕರ ಹೋರಾಡದವರ ಕೈಯಲ್ಲಿ ದೇಶದ ಅಧಿಕಾರ : ರಾಮಲಿಂಗಾರೆಡ್ಡಿ ಕಿಡಿ - ಸ್ವಾತಂತ್ರ್ಯ ಹೋರಾಟದ ಕುರಿತು ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ

ಸರದಾರ್ ವಲ್ಲಭಾಯಿ ಪಟೇಲರ ಬೃಹತ್ ಕಂಚಿನ ಪ್ರತಿಮೆ ಮಾಡಿದ ಇದೇ ಬಿಜೆಪಿಯವರು ಅವರ ಹೆಸರಿನಲ್ಲಿರುವ ಕ್ರಿಕೆಟ್ ಸ್ಟೇಡಿಯಂಗೆ ಮೋದಿ ಹೆಸರನ್ನು ಇಡುತ್ತಾರೆ. ಇವರು ದೊಡ್ಡ ಕ್ರಿಕೆಟ್ ಪಟು. ರಾಜೀವ್ ಗಾಂಧಿ ಹೆಸರಿನಲ್ಲಿದ್ದ ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ಬದಲಿಸಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಹೆಸರನ್ನು ಹೇಳುತ್ತಾರೆ..

ramalingareddy-statement-on-bjp-government
ರಾಮಲಿಂಗಾರೆಡ್ಡಿ

By

Published : Aug 14, 2021, 7:55 PM IST

ಬೆಂಗಳೂರು :ಯಾರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರೋ ಅವರೆಲ್ಲ ಮೂಲೆ ಗುಂಪಾಗಿದ್ದಾರೆ. ಭಾಗವಹಿಸದವರ ಕೈಗೆ ದೇಶದ ಅಧಿಕಾರ ಲಭಿಸಿದೆ ಎಂದು ಮಾಜಿ ಗೃಹ ಸಚಿವ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

ನಾಳೆ ನಡೆಯುವ 75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಯುವ ಕಾಂಗ್ರೆಸ್ ನಾಯಕರು ಬೆಂಗಳೂರಿನ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬಿಜೆಪಿ ಪಕ್ಷವೇ ಇರಲಿಲ್ಲ. ಜನಸಂಘ 1951ರಲ್ಲಿ ಆರಂಭವಾಗಿದೆ.

ಸ್ವಾತಂತ್ರ್ಯ ಹೋರಾಟ, ಕ್ವಿಟ್ ಇಂಡಿಯಾ ಚಳವಳಿ ಸಂದರ್ಭಗಳಲ್ಲಿ ಹೋರಾಟವನ್ನೇ ಮಾಡದ ನಾಯಕರು ಇಂದು ಬಿಜೆಪಿ ದೃಷ್ಟಿಯಲ್ಲಿ ದೊಡ್ಡಮಟ್ಟದ ನಾಯಕರಾಗಿದ್ದಾರೆ ಎಂದು ಕಿಡಿಕಾರಿದರು.

ಸ್ವಾತಂತ್ರ್ಯಕ್ಕೋಸ್ಕರ ಹೋರಾಡದವರ ಕೈಯಲ್ಲಿ ದೇಶದ ಅಧಿಕಾರ..

ಬ್ರಿಟಿಷರಿಗೆ ಮುಚ್ಚಳಿಕೆ ಪತ್ರ ಬರೆದುಕೊಟ್ಟು ಜೈಲಿನಿಂದ ಹೊರ ಬಂದರು :ದೇಶಕ್ಕಾಗಿ ನಡೆದ ಹೋರಾಟದ ಸಂದರ್ಭದಲ್ಲಿ ಬಂಧನಕ್ಕೊಳಗಾಗಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ವೀರ್ ಸಾವರ್ಕರ್ ತಾವು ಮುಂದೆ ಚಳವಳಿಗಳಲ್ಲಿ ಭಾಗವಹಿಸುವುದಿಲ್ಲ ಎಂದು ಬ್ರಿಟಿಷರಿಗೆ ಮುಚ್ಚಳಿಕೆ ಬರೆದು ಜೈಲಿನಿಂದ ಆಚೆ ಬಂದಿದ್ದರು.

ಬಿಜೆಪಿಯವರ ದೃಷ್ಟಿಯಲ್ಲಿ ಇಂಥವರು ಈಗ ಹೋರಾಟಗಾರರು. ಬಿಜೆಪಿಯವರು ಆರ್​ಎಸ್​​ಎಸ್​​ ಹಾಗೂ ವಿಶ್ವ ಹಿಂದೂ ಪರಿಷತ್​ನವರು ಯಾವುದೇ ಹೋರಾಟದಲ್ಲಿ ಭಾಗವಹಿಸಿಲ್ಲ ಎಂದರು.

ಸ್ವಾತಂತ್ರ್ಯ ಹೋರಾಟವನ್ನು ಹತ್ತಿರದಿಂದ ನೋಡಿದ್ದವರಿಗೆ ಸನ್ಮಾನ

ನಿಜವಾಗಿ ಸ್ವಾತಂತ್ರ್ಯಕ್ಕೆ ಹೋರಾಡಿದರು ಕಾಂಗ್ರೆಸ್ಸಿಗರು : ಇಂದು ದೇಶ ಎಂತವರ ಕೈಯಲ್ಲಿ ಸಿಲುಕಿದೆ. ಬಿಜೆಪಿ ನಾಯಕರ ಹೆಸರನ್ನು ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಇಡಲಾಗುತ್ತಿದೆ. ಯಲಹಂಕ ಮೇಲು ರಸ್ತೆಗೆ ಇಡಲಾಗಿದೆ. ನಿಜವಾಗಿ ದೇಶಕ್ಕಾಗಿ ಹೋರಾಡಿದ ಹಾಗೂ ತ್ಯಾಗ ಮಾಡಿದ ನೆಹರೂ, ಇಂದಿರಾಗಾಂಧಿ ಹಾಗೂ ಕಾಂಗ್ರೆಸ್ಸಿಗರ ಬಗ್ಗೆ ಲಘುವಾಗಿ ಮಾತನಾಡುತ್ತಾರೆ.

ನಿಜವಾಗಿ ದೇಶಕ್ಕಾಗಿ ಹೋರಾಡಿದವರು ಕಾಂಗ್ರೆಸ್ಸಿಗರು. ಬಿಜೆಪಿಯವರು ಕೇವಲ ಅಧಿಕಾರಕ್ಕೋಸ್ಕರ ರಾಜಕಾರಣ ಮಾಡುತ್ತಿದ್ದಾರೆ ಅಷ್ಟೇ.. ಜಾತಿಗಳನ್ನು ಒಡೆದು, ವರ್ಗಗಳ ನಡುವೆ ಭೇದ ತಂದು, ನೆಹರೂ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಅಪಪ್ರಚಾರ ಮಾಡುತ್ತಾ ಜನಪ್ರಿಯತೆ ಗಳಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಸ್ವಾತಂತ್ರ್ಯ ಹೋರಾಟವನ್ನು ಹತ್ತಿರದಿಂದ ನೋಡಿದ್ದವರಿಗೆ ಸನ್ಮಾನ

ಮೋದಿ ಏನು​ 200 ಕ್ಯಾಚ್​,​​​ ನೂರು ಸೆಂಚುರಿ ಹೊಡೆದಿದ್ರಾ?: ಸರದಾರ್ ವಲ್ಲಭಾಯಿ ಪಟೇಲರ ಬೃಹತ್ ಕಂಚಿನ ಪ್ರತಿಮೆ ಮಾಡಿದ ಇದೇ ಬಿಜೆಪಿಯವರು ಅವರ ಹೆಸರಿನಲ್ಲಿರುವ ಕ್ರಿಕೆಟ್ ಸ್ಟೇಡಿಯಂಗೆ ಮೋದಿ ಹೆಸರನ್ನು ಇಡುತ್ತಾರೆ. ಇವರು ದೊಡ್ಡ ಕ್ರಿಕೆಟ್ ಪಟು. ರಾಜೀವ್ ಗಾಂಧಿ ಹೆಸರಿನಲ್ಲಿದ್ದ ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ಬದಲಿಸಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಹೆಸರನ್ನು ಹೇಳುತ್ತಾರೆ.

ಆದರೆ, ಇಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಮೋದಿ ಹೆಸರನ್ನು ಇಡುತ್ತಾರೆ. ಇವರು ನೂರು ಸೆಂಚುರಿ ಹೊಡೆದವರು. 200 ಕ್ಯಾಚ್ ಹಿಡಿದಿದ್ದಾರೆ. 300 ವಿಕೆಟ್ ಪಡೆದಿದ್ದಾರೆ. ಇದೇ ರೀತಿ ಅರುಣ್ ಜೇಟ್ಲಿ ಸಹ ಎಪ್ಪತ್ತು-ಎಂಬತ್ತು ಸೆಂಚುರಿ ಹೊಡೆದಿರಬೇಕು. ಅದಕ್ಕೆ ಫಿರೋಜ್ ಷಾ ಕೋಟ್ಲಾ ಮೈದಾನಕ್ಕೆ ಅವರ ಹೆಸರನ್ನು ಇಡಲಾಗಿದೆ.

ಅಂಡಮಾನ್​ನಿಂದ ಓಡಿ ಹೋದವರ ಹೆಸರಿಡುತ್ತಾರೆ :ಅಷ್ಟು ಕಾಳಜಿ ಇದ್ದರೆ ಸುನಿಲ್ ಗವಾಸ್ಕರ್ ಅವರನ್ನು ಮೈದಾನಕ್ಕೂ ಹಾಗೂ ಮುಂಬೈ ಮೈದಾನಕ್ಕೆ ಸಚಿನ್ ತೆಂಡೂಲ್ಕರ್ ಹೆಸರು ಇಡಬಹುದಿತ್ತು. ಇಂದಿರಾ ಗಾಂಧಿ ಅವರ ಹೆಸರನ್ನು ಕ್ಯಾಂಟೀನ್‌ ಇಟ್ಟರೆ ಅವರಿಗೆ ಹೊಟ್ಟೆ ಉರಿ ಬರುತ್ತದೆ. ಸಾವರ್ಕರ್ ಹೆಸರನ್ನ ಯಲಹಂಕ ಮೇಲು ರಸ್ತೆಗೆ ಇಡಬಹುದು. ಹೋರಾಟ ಮಾಡುವುದಿಲ್ಲ ಎಂದು ಬರೆದುಕೊಟ್ಟು ಅಂಡಮಾನ್‌ನಿಂದ ಓಡಿ ಬಂದವರನ್ನು ಹೀರೊಗಳನ್ನ ಮಾಡಲು ಹೊರಟಿದ್ದಾರೆ. ಇಂಥವರ ಕೈಯಲ್ಲಿ ಇಂದು ದೇಶ ಸಿಲುಕಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ಹೋರಾಟವನ್ನು ಹತ್ತಿರದಿಂದ ನೋಡಿದ್ದವರಿಗೆ ಸನ್ಮಾನ :ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಹತ್ತಿರದಿಂದ ನೋಡಿದ್ದ ಹಾಗೂ ಹೋರಾಟದ ಅರಿವನ್ನು ಹೊಂದಿರುವ ಮೂವರು ಹಿರಿಯರನ್ನು ಇದೇ ಸಂದರ್ಭ ಗೌರವಿಸಲಾಯಿತು. 75ನೇ ಸ್ವಾತಂತ್ರ್ಯೋತ್ಸವವನ್ನು ವರ್ಷವಿಡೀ ಆಚರಿಸುವ ಸಂಕಲ್ಪವನ್ನು ಕಾಂಗ್ರೆಸ್ ಪಕ್ಷ ಹೊಂದಿದೆ.

ಈ ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಭಿತ್ತಿಪತ್ರವನ್ನು ಹಾಗೂ ಬುಕ್ಲೆಟ್ ಅನ್ನ ರಾಮಲಿಂಗಾರೆಡ್ಡಿ ಇದೇ ಸಂದರ್ಭ ಬಿಡುಗಡೆ ಮಾಡಿದರು. ಮುಂಬರುವ ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸಿ ಗೌರವಿಸುವ, ಮೃತಪಟ್ಟಿದ್ದರೆ ಅಂತವರ ಕುಟುಂಬಕ್ಕೆ ಗೌರವ ಸಲ್ಲಿಸುವ ಕಾರ್ಯವನ್ನು ಕಾಂಗ್ರೆಸ್ ನಾಯಕರು ಮಾಡಲಿದ್ದಾರೆ ಎಂದು ತಿಳಿಸಿದರು.

ABOUT THE AUTHOR

...view details