ಕರ್ನಾಟಕ

karnataka

ಕೊರೊನಾ ವಿರುದ್ಧ ಕ್ಷೇತ್ರದಲ್ಲಿ ಜಾಗೃತಿಗಿಳಿದ ರಾಮಲಿಂಗಾರೆಡ್ಡಿ, ಸೌಮ್ಯರೆಡ್ಡಿ

ಬಿಟಿಎಂ ಲೇಔಟ್ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕಿ ಸೌಮ್ಯ ರೆಡ್ಡಿ ಜನರಿಗೆ ಕೊರೊನಾ ಕುರಿತು ಜಾಗೃತಿ ಮೂಡಿಸಿದರು.

By

Published : Mar 28, 2020, 11:38 AM IST

Published : Mar 28, 2020, 11:38 AM IST

ಬೆಂಗಳೂರು: ನಗರದ ಬಿಟಿಎಂ ಲೇಔಟ್ ಹಾಗೂ ಜಯನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಥಳೀಯ ಶಾಸಕರು ಕೊರೊನಾ ಸೋಂಕಿನ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯ ಮಾಡಿದರು.

ಬಿಟಿಎಂ ಲೇಔಟ್ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ರಾಮಲಿಂಗಾರೆಡ್ಡಿ ಮತ್ತು ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕಿ ಸೌಮ್ಯ ರೆಡ್ಡಿ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕೊರೊನಾ ಕುರಿತು ಜನಜಾಗೃತಿ ಮೂಡಿಸುತ್ತಿದ್ದಾರೆ. ನಿನ್ನೆ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿವಿಧ ವಾರ್ಡ್​​​ಗಳಲ್ಲಿ ಜಾಗೃತಿ ಕಾರ್ಯ ನಡೆಯಿತು.

ಉಭಯ ಕ್ಷೇತ್ರಗಳ ಬಿಬಿಎಂಪಿ ವಾರ್ಡ್ ಸದಸ್ಯರು, ಸ್ಥಳೀಯ ಅಧಿಕಾರಿಗಳು ಹಾಗೂ ಕಾಂಗ್ರೆಸ್ ಮುಖಂಡರು ಈ ಸಂದರ್ಭ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ರಾಮಲಿಂಗರೆಡ್ಡಿ ಖುದ್ದು ಕ್ಷೇತ್ರದ ವಿವಿಧ ಭಾಗಗಳಲ್ಲಿ ಕೊರೊನಾ ನಿಯಂತ್ರಕ ದ್ರಾವಣ ಸಿಂಪಡಣೆ ಮಾಡಿದರು.

ಇನ್ನು ಜಯನಗರ ಶಾಸಕಿ ಸೌಮ್ಯರೆಡ್ಡಿ ಕ್ಷೇತ್ರದ ಜನರಿಗೆ ಕೊರೊನಾ ಬಗೆಗ ಜಾಗೃತಿ ಮೂಡಿಸುವ ಜೊತೆಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆಗೆ ಒತ್ತು ಕೊಡುವಂತೆ ಸಲಹೆ ನೀಡಿದರು. ಇದೇ ಸಂದರ್ಭ ಕೋರಮಂಗಲದ 8 ನೇ ಬ್ಲಾಕ್​​ನ ಕಾರ್ಪೊರೇಷನ್ ಬ್ಯಾಂಕ್ ಸಮೀಪದಿಂದ ಆರಂಭಿಸಿ ಜಯನಗರ 7, 8 ನೇ ಬ್ಲಾಕ್, ಮಲ್ಲಪ್ಪ ರೆಡ್ಡಿ ಲೇಔಟ್, ರಾಜೇಂದ್ರ ನಗರ, ಸಿಎಆರ್ ಕ್ವಾರ್ಟರ್ಸ್, ಬಾಳಪ್ಪ ಲೇಔಟ್, ಆಡುಗೋಡಿಯಲ್ಲಿ ಕೊರೊನಾ ನಿಯಂತ್ರಕ ದ್ರಾವಣವನ್ನು ಸಿಂಪಡಣೆ ಮಾಡಲಾಯಿತು.

ರಾಮಲಿಂಗರೆಡ್ಡಿ ಹಾಗೂ ಸೌಮ್ಯ ರೆಡ್ಡಿ ಅವರೊಂದಿಗೆ ಸ್ಥಳೀಯ ಕಾರ್ಪೊರೇಟರ್ ಮಂಜುಳಾ ಸಂಪತ್, ಕೋರಮಂಗಲ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಗೋವರ್ಧನ್ ರೆಡ್ಡಿ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.

ABOUT THE AUTHOR

...view details