ಬೆಂಗಳೂರು: ಭಾರತದ ಯಾವ ಪ್ರದೇಶದಲ್ಲೂ ಚಂದ್ರನ ದರ್ಶನವಾಗದ ಹಿನ್ನೆಲೆಯಲ್ಲಿ ಮೇ 14ರ ಶುಕ್ರವಾರದಂದು ಪವಿತ್ರ ರಂಜಾನ್ ಆಚರಣೆ ಮಾಡುವುದಾಗಿ ಕರ್ನಾಟಕದ ಮರ್ಕಜ್ ರುಯಾತ್-ಇ-ಹಿಲಾಲ್ ಸಂಘಟನಾ ಸದಸ್ಯರು ತಿಳಿಸಿದ್ದಾರೆ.
ಭಾರತದಲ್ಲೆಲ್ಲೂ ಗೋಚರಿಸದ ಚಂದ್ರ; ಮೇ 14ರಂದು ರಂಜಾನ್ ಆಚರಣೆಗೆ ಮನವಿ - ಪವಿತ್ರ ರಂಜಾನ್ ಉಪವಾಸ
ಕೊರೊನಾ ಹಿನ್ನೆಲೆ ಮನೆಯಲ್ಲಿ ರಂಜಾನ್ ಆಚರಣೆ ಮಾಡುವಂತೆ ಮರ್ಕಜ್ ರುಯಾತ್-ಇ-ಹಿಲಾಲ್ ಸಂಘಟನಾ ಸಮಿತಿಯ ಅಧ್ಯಕ್ಷ ಮೌಲಾನಾ ಸಗೀರ್ ಅಮೀದ್ ಖಾನ್ ರಷಿದ್ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
![ಭಾರತದಲ್ಲೆಲ್ಲೂ ಗೋಚರಿಸದ ಚಂದ್ರ; ಮೇ 14ರಂದು ರಂಜಾನ್ ಆಚರಣೆಗೆ ಮನವಿ Ramadan celebration on Friday, May 14th](https://etvbharatimages.akamaized.net/etvbharat/prod-images/768-512-11738598-572-11738598-1620837078747.jpg)
ಸಂಗ್ರಹ ಚಿತ್ರ
ಮೇ 13 ಗುರುವಾರ ರಂಜಾನ್ ಆಚರಣೆಗೆ ಹಲವು ಮುಸ್ಲಿಂ ಧಾರ್ಮಿಕ ಸಂಘಟನೆಗಳು ತೀರ್ಮಾನಿಸಿದ್ದವು. ಆದರೆ, ಭಾರತದ ಯಾವ ಭಾಗದಲ್ಲೂ ಚಂದ್ರನ ದರ್ಶನವಾಗದ ಹಿನ್ನೆಲೆ ಇಂದು ಸಭೆ ಸೇರಿದ ಮರ್ಕಜ್ ರುಯಾತ್-ಇ-ಹಿಲಾಲ್ ಸಂಘಟನಾ ಸದಸ್ಯರು ಮೇ 14ರ ಶುಕ್ರವಾರ ರಂಜಾನ್ ಆಚರಣೆ ಮಾಡುವುದಾಗಿ ತಿಳಿಸಿದ್ದಾರೆ.