ಕರ್ನಾಟಕ

karnataka

ETV Bharat / state

ಕಿಡಿಗೇಡಿ ಕೃತ್ಯ ಖಂಡನೀಯ: ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿ: ಟಿಕಾಯತ್​ ಒತ್ತಾಯ - ಬೆಂಗಳೂರಲ್ಲಿ ರೈತ ಮುಖಂಡ ರಾಖೇಶ್ ಟಿಕಾಯತ್

ಇಂತಹ ಕಿಡಿಗೇಡಿ ಕೃತ್ಯದ ವಿರುದ್ಧ ಕ್ರಮ ಆಗಬೇಕು. ರಾಷ್ಟ್ರೀಯ ವಿಚಾರಗಳ ಮೇಲೆ ನಾವು ಹೋರಾಟ ನಡೆಸುತ್ತಿರುತ್ತೇವೆ. ಕೋಡಿಹಳ್ಳಿ ಚಂದ್ರಶೇಖರ್ ಸಹ ನನಗೆ ಹಲವು ವರ್ಷಗಳಿಂದ ಪರಿಚಿತರು. ಇಂತಹ ಒಂದು ಘಟನೆ ಅನಿರೀಕ್ಷಿತ. ಉದ್ದೇಶಪೂರ್ವಕವಾಗಿ ಕೃತ್ಯ ನಡೆದಿದ್ದು, ಕಿಡಿಗೇಡಿಗಳ ವಿರುದ್ಧ ಸೂಕ್ತಕ್ರಮ ಆಗಲೇಬೇಕು ಎಂದು ಟಿಕಾಯತ್​ ಆಗ್ರಹ ಮಾಡಿದರು.

ಕಿಡಿಗೇಡಿ ಕೃತ್ಯ ಖಂಡನೀಯ; ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿ: ಟಿಕಾಯತ್
ಕಿಡಿಗೇಡಿ ಕೃತ್ಯ ಖಂಡನೀಯ; ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿ: ಟಿಕಾಯತ್

By

Published : May 30, 2022, 4:09 PM IST

Updated : May 30, 2022, 5:20 PM IST

ಬೆಂಗಳೂರು: ನಾವು ದೇಶದೆಲ್ಲೆಡೆ ಓಡಾಡುತ್ತೇವೆ. ಇಂತಹ ಘಟನೆ‌ ಖಂಡನೀಯ ಎಂದು ರೈತ ಮುಖಂಡ ರಾಖೇಶ್ ಟಿಕಾಯತ್ ತಿಳಿಸಿದ್ದಾರೆ. ಬೆಂಗಳೂರಿನ ಗಾಂಧಿಭವನದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು.

ಇಂತಹ ಕಿಡಿಗೇಡಿ ಕೃತ್ಯದ ವಿರುದ್ಧ ಕ್ರಮ ಆಗಬೇಕು. ರಾಷ್ಟ್ರೀಯ ವಿಚಾರಗಳ ಮೇಲೆ ನಾವು ಹೋರಾಟ ನಡೆಸುತ್ತಿರುತ್ತೇವೆ. ಕೋಡಿಹಳ್ಳಿ ಚಂದ್ರಶೇಖರ್ ಸಹ ನನಗೆ ಹಲವು ವರ್ಷಗಳಿಂದ ಪರಿಚಿತರು. ಇಂತಹ ಒಂದು ಘಟನೆ ಅನಿರೀಕ್ಷಿತ. ಉದ್ದೇಶಪೂರ್ವಕವಾಗಿ ಕೃತ್ಯ ನಡೆದಿದ್ದು, ಕಿಡಿಗೇಡಿಗಳ ವಿರುದ್ಧ ಸೂಕ್ತಕ್ರಮ ಆಗಲೇಬೇಕು. ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಸರ್ಕಾರವನ್ನು ನಾನು ತೀವ್ರವಾಗಿ ಒತ್ತಾಯಿಸುತ್ತೇನೆ ಎಂದರು.

ಬಂಧಿತ ಕಿಡಿಗೇಡಿಗಳಿಗೆ ಎಲ್ಲ ಮಾಹಿತಿ ಇದ್ದು, ಅವರ ಸಮರ್ಪಕ ಕ್ರಮ ಆಗಬೇಕ.ಕಿಡಿಗೇಡಿಗಳ ಗುರಿ ನಾನಾಗಿದ್ದೆ. ಉದ್ದೇಶಪೂರ್ವಕವಾಗಿಯೇ ನನ್ನ ಮುಖಕ್ಕೆ ಮಸಿ ಬಳಿಯಲಾಗಿದೆ. ಘಟನೆ ವಿಚಾರವಾಗಿ ನಾನು ಯಾವುದೇ ಸಂಘಟನೆ ಅಥವಾ ವ್ಯಕ್ತಿಗಳ ಬಗ್ಗೆ ಪಕ್ಷದ ಬಗ್ಗೆ ಆರೋಪ ಮಾಡುವುದಿಲ್ಲ. ಸರ್ಕಾರವೇ ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ಆರೋಪಿಗಳು ಯಾರು ಎಂಬುದನ್ನು ಪತ್ತೆ ಮಾಡಲಿ. ನನ್ನ ಮೇಲೆ ಹಲ್ಲೆ ಸಹ ನಡೆದಿದೆ ಎಂದು ವಿವರಿಸಿದರು.

ಕಿಡಿಗೇಡಿ ಕೃತ್ಯ ಖಂಡನೀಯ: ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿ: ಟಿಕಾಯತ್​ ಒತ್ತಾಯ

ಕ್ರಮದ ವಿಶ್ವಾಸ ಇದೆ: ರೈತ ನಾಯಕ ಯದುವೀರ್ ಸಿಂಗ್ ಮಾತನಾಡಿ, ಹಂತಹಂತವಾಗಿ ರಾಜ್ಯದಲ್ಲಿ ಪ್ರಜಾಪ್ರಭುತ್ವ ನಾಶವಾಗುತ್ತಿದೆ. ಹೋರಾಟವನ್ನ ವ್ಯಕ್ತಪಡಿಸುವ ರೀತಿ ಇದಲ್ಲ. ಹೋರಾಟದ ಹೆಸರಿನಲ್ಲಿ ಈ ರೀತಿಯ ಗೂಂಡಾಗಿರಿ ಮಾಡುವುದು ಸರಿಯಲ್ಲ. ಕಿಡಿಗೇಡಿ ಕೃತ್ಯ ನಡೆಸಿದವರು ಮೋದಿಗೆ ಜಿಂದಾಬಾದ್ ಹೇಳುತ್ತಿದ್ದರು ಮತ್ತು ಅವರ ಪೋಸ್ಟರ್​​ ಪ್ರದರ್ಶಿಸಿದ್ದರು. ರಾಜ್ಯ ಬಿಜೆಪಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರ ಅರ್ಥ ಏನು? ಎಂದು ಪ್ರಶ್ನಿಸಿದರು.

ಬಸವರಾಜ್ ಬೊಮ್ಮಾಯಿ ಅವರ ಕಣ್ಣಮುಂದೆ ಕೃತ್ಯ ನಡೆದಿದ್ದು ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸ ಇದೆ. ಸರ್ಕಾರ ಈ ವಿಚಾರದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಲಿದೆ ಎಂಬ ನಂಬಿಕೆ ಇದೆ. ರಾಕೇಶ್ ಟಿಕಾಯತ್ ರೈತರ ಪ್ರತಿನಿಧಿಯಾಗಿ ಆಗಮಿಸಿದ್ದರು. ಇಂತಹ ಸಂದರ್ಭದಲ್ಲಿ ಕಿಡಿಗೇಡಿ ಶಕ್ತಿಗಳು ನಡೆಸಿದ ಕೃತ್ಯ ಅಕ್ಷಮ್ಯ. ಸರ್ಕಾರದ ಹೆಸರನ್ನು ಬಳಸಿ ಕಿಡಿಗೇಡಿ ಕೃತ್ಯ ನಡೆಸಿದ್ದು, ಸರ್ಕಾರ ಇದಕ್ಕೆ ಸೂಕ್ತ ಕ್ರಮದ ಮೂಲಕ ಉತ್ತರ ನೀಡಬೇಕು ಎಂದು ಸೂಚಿಸಿದರು.

ಯಾರು ಈ ಕೃತ್ಯ ಎಸಗಿದ್ದಾರೆ ಎಂಬುದನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕು. ನಾಳೆ ರಾಜ್ಯಾದ್ಯಂತ ಈ ಕಿಡಿಗೇಡಿ ಕೃತ್ಯ ಖಂಡಿಸಿ ಹೋರಾಟ ನಡೆಸುತ್ತೇವೆ. ಇದು ನಮ್ಮ ರೈತ ಚಳವಳಿ ಮೇಲೆ ಆದ ಅವಮಾನ, ರಾಜ್ಯದಲ್ಲಿ ಇದು ಆಗಬಾರದಿತ್ತು. ಕೃತ್ಯ ಎಸಗಿದವರ ವಿರುದ್ಧ ಕ್ರಮ ಆಗಬೇಕು. ಸರಿಯಾದ ಶಿಕ್ಷೆ ಆಗಬೇಕು ಎಂದು ಆಗ್ರಹ ಮಾಡಿದರು.

ಇದನ್ನೂ ಓದಿ: ರಾಷ್ಟ್ರೀಯ ರೈತ ಮುಖಂಡರ ಮೇಲೆ ಮಸಿ ಬಳಿದ ಪ್ರಕರಣ : ಮೂವರನ್ನು ವಶಕ್ಕೆ ಪಡೆದ ಪೊಲೀಸರು

Last Updated : May 30, 2022, 5:20 PM IST

For All Latest Updates

TAGGED:

ABOUT THE AUTHOR

...view details