ಕರ್ನಾಟಕ

karnataka

ETV Bharat / state

ರಾಜ್ಯೋತ್ಸವ ಪ್ರಶಸ್ತಿ ಪದಕದಲ್ಲಿ ಪುರಸ್ಕೃತರ ಹೆಸರು ಮುದ್ರಿಸಲು ಚಿಂತನೆ - ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಭೆ ಬೆಂಗಳೂರು

ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪದಕದಲ್ಲಿ‌ ಪುರಸ್ಕೃತರ ಹೆಸರನ್ನು ಮುದ್ರಿಸುವ ಕುರಿತು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಸಿಎಂ ಯಡಿಯೂರಪ್ಪ

By

Published : Oct 26, 2019, 1:09 AM IST

ಬೆಂಗಳೂರು: ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪದಕದಲ್ಲಿ‌ ಪುರಸ್ಕೃತರ ಹೆಸರನ್ನು ಮುದ್ರಿಸುವ ಕುರಿತು ರಾಜ್ಯ ಸರ್ಕಾರ‌ ಚಿಂತನೆ ನಡೆಸಿದೆ.

ರೇಸ್ ಕೋರ್ಸ್ ರಸ್ತೆಯಲ್ಲಿರುವ ಶಕ್ತಿ ಭವನದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕುರಿತು ಸಭೆ ನಡೆಯಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ ರವಿ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಕನ್ನಡ ಸಾಹಿತ್ಯ ಪರಿಷತ್ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

64 ನೇ ಕನ್ನಡ ರಾಜ್ಯೋತ್ಸವ ಸಮಾರಂಭದ ದಿನ ಹೈಕೋರ್ಟ್ ಸೂಚನೆಯಂತೆ ರೂಪಿಸಲಾಗಿರುವ ನಿಯಮಾವಳಿಗಳ ಪ್ರಕಾರ ಆಯ್ಕೆ ಸಮಿತಿ ಸೂಚಿಸಿರುವ ಹೆಸರುಗಳ ಕುರಿತು ಸಮಾಲೋಚನೆ ಮಾಡಲಾಯಿತು.

ಈ ಬಾರಿಯ ಕನ್ನಡ ರಾಜ್ಯೋತ್ಸವದಲ್ಲಿ ಯಾರಿಗೆಲ್ಲ ಪ್ರಶಸ್ತಿ ನೀಡಬೇಕು ಎಂದು ಚರ್ಚೆ ನಡೆಯಿತು. ಜೊತೆಗೆ ಈ ಬಾರಿ ಪ್ರಶಸ್ತಿಯಲ್ಲಿ ಹೊಸತನ ತರಲು ಚಿಂತನೆ ನಡೆಸಲಾಯಿತು. ಪ್ರಶಸ್ತಿ ಪುರಸ್ಕೃತರ ಹೆಸರನ್ನ ಪದಕದಲ್ಲಿ ಮುದ್ರಿಸುವ ಬಗ್ಗೆ ಚರ್ಚೆ ನಡೆದಿದೆ.

ABOUT THE AUTHOR

...view details