ಕರ್ನಾಟಕ

karnataka

ETV Bharat / state

ಬಿಜೆಪಿ ಅಧಿಕಾರಕ್ಕೆ ತರಲು ನೀಡಿದ ರಾಜೀನಾಮೆಯಿಂದ ಉಪಚುನಾವಣೆ: ಖರ್ಗೆ ಕಿಡಿ - Rajya Sabha member Mallikarjuna Kherge

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಕಾರಣಕ್ಕೆ ಮುನಿರತ್ನ ರಾಜೀನಾಮೆ ನೀಡಿದ್ದಾರೆ. ರಾಜಕೀಯ ಲಾಭ ಮಾಡಿಕೊಳ್ಳುವ ಕಾರಣಕ್ಕೆ ಈ ಕಾರ್ಯ ಮಾಡಿದ್ದಾರೆ ಎಂದು ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.

rajya-sabha-member-mallikarjuna-kherge-talk-about-by-election
ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು ನೀಡಿದ ರಾಜೀನಾಮೆಯಿಂದ ಉಪಚುನಾವಣೆ ಬಂದಿದೆ: ಖರ್ಗೆ ಕಿಡಿ

By

Published : Oct 29, 2020, 10:13 PM IST

ಬೆಂಗಳೂರು:ಬಿಜೆಪಿ ಸರ್ಕಾರಕ್ಕೆ ಅಧಿಕಾರ ನೀಡಲು ಕೆಲ ಶಾಸಕರು ರಾಜೀನಾಮೆ ನೀಡಿದ್ದರಿಂದ ಅನಗತ್ಯವಾಗಿ ಒಂದು ಉಪಚುನಾವಣೆ ಬಂದಿದೆ ಎಂದು ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು ನೀಡಿದ ರಾಜೀನಾಮೆಯಿಂದ ಉಪಚುನಾವಣೆ ಬಂದಿದೆ: ಖರ್ಗೆ ಕಿಡಿ

ಬೆಂಗಳೂರಿನ ಲಗ್ಗೆರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಆರ್​ಆರ್ ನಗರ ಉಪಚುನಾವಣೆ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಐದು ವರ್ಷಕ್ಕೆ ಒಮ್ಮೆ ಸಹಜವಾಗಿ ಬರುವಂತಹ ಚುನಾವಣೆ ಇದಲ್ಲ. ಬಿಜೆಪಿ ಸರ್ಕಾರ ತರಬೇಕು ಎಂದು ಹೇಳಿ ಅನಗತ್ಯವಾಗಿ ಜನರ ಮೇಲೆ ತೆರಿಗೆ ಬಾರ ಹೊರಿಸಿದೆ. 2018 ರಲ್ಲಿ ಇಂದಿನ ಬಿಜೆಪಿ ಅಭ್ಯರ್ಥಿಯನ್ನು ಅಂದು ಕಾಂಗ್ರೆಸ್​​​ಗೆ ಮತ ನೀಡಿ ಗೆಲ್ಲಿಸಿದ್ದೀರಿ.

ಆದರೆ ಅವರು ರಾಜೀನಾಮೆ ನೀಡಿದ್ದರಿಂದ ಕಳೆದ 15 ತಿಂಗಳು ನೀವು ಜನಪ್ರತಿನಿಧಿಗಳು ಇಲ್ಲದೇ ಕಳೆದಿದ್ದೀರಿ. ಅವರು ರಾಜೀನಾಮೆ ನೀಡಿದ್ದು, ನಿಮಗೋಸ್ಕರ ಅಥವಾ ದೇಶಕ್ಕೋಸ್ಕರವಾ?. ನಾಲ್ಕು ಜನರಿಗೆ ಸಹಕಾರ ಆಗಲಿ ಅನ್ನುವ ಕಾರಣಕ್ಕೂ ಅವರು ರಾಜೀನಾಮೆ ನೀಡಿಲ್ಲ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಕಾರಣಕ್ಕೆ ಅವರು ರಾಜೀನಾಮೆ ನೀಡಿದ್ದಾರೆ. ರಾಜಕೀಯ ಲಾಭ ಮಾಡಿಕೊಳ್ಳುವ ಕಾರಣಕ್ಕೆ ಈ ಕಾರ್ಯವನ್ನು ಈ ಭಾಗದಲ್ಲಿ ಶಾಸಕರಾಗಿದ್ದ ಮುನಿರತ್ನ ಮಾಡಿದ್ದಾರೆ. ಇಂಥವರಿಗೆ ನೀವು ಯಾವ ಕಾರಣಕ್ಕೆ ಮತ್ತೊಮ್ಮೆ ಮತ ಕೊಡಬೇಕು ಎಂಬುದನ್ನು ತಿಳಿಸಿ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಈ ರಾಜ್ಯದ ಸರ್ಕಾರ ಕೊರೊನಾ ನಿಯಂತ್ರಿಸುವಲ್ಲಿ ವಿಫಲವಾಗಿದೆ. ಜನ ಸಾಯುತ್ತಿದ್ದರೆ ಅವರ ಹೆಣದ ಮೇಲೆ ಅಧಿಕಾರ ನಡೆಸುವಂತಹ ಸರ್ಕಾರ ಇದ್ದರೆ ಅದು ಬಿಜೆಪಿ. ಬಡವರ ವಿರೋಧಿ ಜನವಿರೋಧಿ ಬಿಜೆಪಿ ಸರ್ಕಾರಕ್ಕೆ ಬುಡ ಸಮೇತ ಕಿತ್ತು ಹಾಕುವ ಸಮಯ ಬಂದಿದೆ. ರಾಜರಾಜೇಶ್ವರಿ ನಗರ ಹಾಗೂ ಶಿರಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆದ್ದರೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬುಡಸಮೇತ ಕಿತ್ತು ಹೋಗಲಿದೆ ಎಂದು ಭವಿಷ್ಯ ನುಡಿದರು.

ABOUT THE AUTHOR

...view details