ಕರ್ನಾಟಕ

karnataka

ETV Bharat / state

ರಾಜ್ಯಸಭೆ ಅಭ್ಯರ್ಥಿಗಳ ಕುರಿತು ಸಂಜೆ ಹೈಕಮಾಂಡ್ ನಿರ್ಧಾರ: ಸಿಎಂ ಬೊಮ್ಮಾಯಿ

ರಾಜ್ಯಸಭೆ ಅಭ್ಯರ್ಥಿಗಳ ಆಯ್ಕೆ ಕುರಿತು ನಮ್ಮ ರಾಷ್ಟ್ರೀಯ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ. ಇಬ್ಬರು ಅಭ್ಯರ್ಥಿಗಳ ಆಯ್ಕೆಗೆ ಬೇಕಾದ ಅಗತ್ಯ ಮತಗಳು ನಮ್ಮಲ್ಲಿದ್ದು, ಹೆಚ್ಚುವರಿ ಮತಗಳು ಉಳಿಯಲಿವೆ. ಯಾವುದೇ ಪಕ್ಷಕ್ಕೂ ನಾಲ್ಕನೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಬೇಕಾದ ಮತಗಳಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

rajya-sabha-candidates-decided-by-the-bjp-high-command-says-bommai
ರಾಜ್ಯಸಭೆ ಅಭ್ಯರ್ಥಿಗಳ ಕುರಿತು ಸಂಜೆ ಹೈಕಮಾಂಡ್ ನಿರ್ಧಾರ: ಸಿಎಂ ಬೊಮ್ಮಾಯಿ

By

Published : May 29, 2022, 12:32 PM IST

Updated : May 29, 2022, 2:01 PM IST

ಬೆಂಗಳೂರು: ರಾಜ್ಯಸಭೆ ಅಭ್ಯರ್ಥಿ ಆಯ್ಕೆ ಬಗ್ಗೆ ನಮ್ಮ ರಾಷ್ಟ್ರೀಯ ನಾಯಕರು ಸಂಜೆಯೊಳಗೆ ತೀರ್ಮಾನ ಮಾಡಲಿದ್ದು, ಮೂರನೇ ಅಭ್ಯರ್ಥಿಯ ಬಗ್ಗೆಯೂ ತೀರ್ಮಾನವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಆರ್.ಟಿ.ನಗರ ನಿವಾಸದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸಭೆ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆದಿದೆ. ನಮಗೆ ಇಬ್ಬರ ಆಯ್ಕೆಗೆ ಅಗತ್ಯ ಮತಗಳಿದ್ದು ಹೆಚ್ಚುವರಿ ಮತಗಳು ಉಳಿಯಲಿವೆ, ಯಾರಿಗೂ ನಾಲ್ಕನೇ ಸ್ಥಾನದ ಅಭ್ಯರ್ಥಿ ಆಯ್ಕೆಗೆ ಬೇಕಾದ ಮತಗಳಿಲ್ಲ, ಹಾಗಾಗಿ ನಾವು ಕೂಡ ಮೂರನೇ ಅಭ್ಯರ್ಥಿ ಆಯ್ಕೆ ಕುರಿತು ಚರ್ಚಿಸಿದ್ದೇವೆ, ಈ ಬಗ್ಗೆ ಹೈಕಮಾಂಡ್ ಸಂಜೆ ನಿರ್ಧಾರ ಪ್ರಕಟಿಸಲಿದೆ ಎಂದು ಹೇಳಿದರು.

ರಾಜ್ಯಸಭೆ ಅಭ್ಯರ್ಥಿಗಳ ಕುರಿತು ಸಂಜೆ ಹೈಕಮಾಂಡ್ ನಿರ್ಧಾರಲಿದೆ ಎಂದ ಸಿಎಂ

ಇನ್ನು ಕುವೆಂಪು ಅವರನ್ನು ಅವಹೇಳನ ಮಾಡಿರುವ ಕುರಿತು ನಿರ್ಮಲಾನಂದ ಶ್ರೀಗಳ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಇಂದು ಶಿಕ್ಷಣ ಸಚಿವರ ಸಭೆ ಕರೆದಿದ್ದು, ಅವರೊಂದಿಗೆ ಮಾತುಕತೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ತಿಳಿಸಿದರು.

ಇದನ್ನೂ ಓದಿ :ಮೈಸೂರು: 509 ಅಂಕ ಬಂದರೂ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

Last Updated : May 29, 2022, 2:01 PM IST

ABOUT THE AUTHOR

...view details