ಕರ್ನಾಟಕ

karnataka

Shocking: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿಗೆ!?

By

Published : Sep 20, 2021, 12:41 PM IST

Updated : Sep 20, 2021, 12:46 PM IST

ಕಾಂಗ್ರೆಸ್​ನವರೇ ನಮ್ಮ ಪಕ್ಷಕ್ಕೆ ಬರ್ತೀವಿ ಅಂತಿದ್ದಾರೆ. ನಾವೇ ಬೇಡ ಅನ್ನುತ್ತಿದ್ದೇವೆ. ಸಿದ್ದರಾಮಯ್ಯರನ್ನು ಶೀಘ್ರವೇ ಬಿಜೆಪಿ​ಗೆ ಕರೆ ತರುತ್ತೇವೆ ಎಂದು ಶಾಸಕ ರಾಜುಗೌಡ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್​​ನವರೇ ನಮ್ಮ ಪಕ್ಷಕ್ಕೆ ಬರುತ್ತೇವೆಂದು ಹೇಳುತ್ತಿದ್ದಾರೆ. ಇದ್ದೋರಿಗೇ ಅವಕಾಶ ಸಿಗುತ್ತಿಲ್ಲ, ಅದಕ್ಕೆ ನಾವೇ ಬೇಡ ಅಂತಿದ್ದೇವೆ ಎಂದು ಸುರಪುರ ಶಾಸಕ ರಾಜುಗೌಡ ಹೇಳಿದ್ದಾರೆ.

ಶಾಸಕರಾದ ರಾಜುಗೌಡ, ಎಂ.ಪಿ.ಕುಮಾರಸ್ವಾಮಿ ಪ್ರತಿಕ್ರಿಯೆ

‘ಸಿದ್ದರಾಮಯ್ಯರನ್ನು ಬಿಜೆಪಿಗೆ ಕರೆತರುವೆ’

ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಯಾರೂ ಕಾಂಗ್ರೆಸ್​ಗೆ ಹೋಗಲ್ಲ. ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ. ನಾನೇ ಸಿದ್ದರಾಮಯ್ಯ ಅವರನ್ನು ಬಿಜೆಪಿಗೆ ಕರೆತರುವುದಕ್ಕೆ ಪ್ರಯತ್ನ ಮಾಡುತ್ತೇನೆ. ಅದರಲ್ಲಿ ಯಶಸ್ವಿ ಆಗುತ್ತೇನೆ ಎನ್ನುವ ವಿಶ್ವಾಸವಿದೆ ಎಂದರು.

‘ಕೆಲಸ ಮಾಡಿ ಅಂತಾ ಹೇಳಿದ್ದಾರಷ್ಟೇ’

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಪ್ರತಿಪಕ್ಷದವರನ್ನು ನಿರ್ಲಕ್ಷ್ಯ ಮಾಡಬೇಡಿ. ಎದುರಾಳಿ ಯಾರೇ ಇದ್ದರೂ ಮೈಮರೆಯಬೇಡಿ ಎಂದು ಸಲಹೆ ನೀಡಿದ್ದಾರೆ ಎಂದರು. ಇದೇ ವೇಳೆ ನರೇಂದ್ರ ಮೋದಿಯವರ ಹೆಸರಲ್ಲಿ ಚುನಾವಣೆ ಗೆಲ್ಲುವುದಕ್ಕಿಂತ ನಮ್ಮ ಸಾಮರ್ಥ್ಯದಿಂದಲೇ ಜಯ ಸಾಧಿಸೋಣ ಎಂಬ ಬಿಎಸ್​ವೈ ಕರೆ ಕುರಿತು ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಆ ರೀತಿ‌ ಹೇಳಿಲ್ಲ. ಮೋದಿ ಹೆಸರು ಅಂತಾನೇ ಇರಬೇಡಿ. ನೀವು ಕೆಲಸ ಮಾಡಿ ಅಂತಾ ಹೇಳಿದ್ದಾರಷ್ಟೇ ಎಂದು‌ ಸಮಜಾಯಿಷಿ ನೀಡಿದರು.

‘ನಾನು ಮೂಲ ಬಿಜೆಪಿಗ’

ಬಳಿಕ ಮಾತನಾಡಿದ ಶಾಸಕ ಎಂ.ಪಿ. ಕುಮಾರಸ್ವಾಮಿ ನಾನು ಕಾಂಗ್ರೆಸ್​​ಗೆ ಹೋಗಲ್ಲ, ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ. ನಮ್ಮ ಪಕ್ಷದಲ್ಲಿ ನಮಗಾಗದವರೇ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದರು.

ಇದನ್ನೂ ಓದಿ: ಬಿಜೆಪಿ ಶಾಸಕರನ್ನು ಡಿಕೆಶಿ ಸೆಳೆಯುವುದರಲ್ಲಿ ಯಾವುದೇ ಅರ್ಥ ಇಲ್ಲ, ಇಲ್ಲಿಂದ ಯಾರೂ ಹೋಗಲ್ಲ: ಬಿಎಸ್​​ವೈ ಟಾಂಗ್​

ನನ್ನನ್ನು ಡಿ.ಕೆ. ಶಿವಕುಮಾರ್ ಸಂಪರ್ಕಿಸಿಲ್ಲ. ನನಗೆ ಬಿಜೆಪಿಯಲ್ಲಿ ಯಾವುದೇ ಬೇಜಾರಿಲ್ಲ. ನಾನು ಮೂಲ ಬಿಜೆಪಿಗ. ಪದೇ ಪದೇ ನಮ್ಮ ಹೆಸರನ್ನು ಯಾಕೆ ತರುತ್ತಿದ್ದಾರೋ ಗೊತ್ತಿಲ್ಲ. ಕಾಂಗ್ರೆಸ್​​ಗೆ ಹೋಗುವ ಅನಿವಾರ್ಯತೆ ಇಲ್ಲ. ಬಿಜೆಪಿ ನನ್ನನ್ನು ಗೌರವದಿಂದ ನಡೆಸಿಕೊಂಡಿದೆ ಎಂದು ಶಾಸಕ ರಾಜುಗೌಡ ಸ್ಪಷ್ಟಪಡಿಸಿದರು.

Last Updated : Sep 20, 2021, 12:46 PM IST

ABOUT THE AUTHOR

...view details