ಕರ್ನಾಟಕ

karnataka

ETV Bharat / state

ಸಿಎಂ ಬೊಮ್ಮಾಯಿ ಭೇಟಿಯಾದ ರಾಜ್ ಕುಟುಂಬ..ರಾಜ್​ಕುಮಾರ್ ಸಮಾಧಿ ಅಭಿವೃದ್ಧಿಗೆ ಸಿಎಂ ಸ್ಪಂದನೆ - puneeth Rajkumar Samadhi Development

ಸಿಎಂ ಬೊಮ್ಮಾಯಿ ಭೇಟಿಯಾದ ರಾಜ್ ಕುಟುಂಬ ಡಾ. ರಾಜ್​ಕುಮಾರ್ ಸಮಾಧಿ, ಪುನೀತ್ ರಾಜ್‍ಕುಮಾರ್ ಸಮಾಧಿ ಮತ್ತು ಪಾರ್ವತಮ್ಮ ರಾಜ್‍ಕುಮಾರ್ ಸಮಾಧಿ ಸ್ಥಳವನ್ನು ಅಭಿವೃದ್ಧಿಪಡಿಸುವ ಕುರಿತು ಚರ್ಚೆ ನಡೆಸಿದರು.

Rajkumar family met CM Bommai
ಸಿಎಂ ಬೊಮ್ಮಾಯಿ ಭೇಟಿಯಾದ ರಾಜ್ ಕುಟುಂಬ

By

Published : Aug 17, 2022, 1:37 PM IST

ಬೆಂಗಳೂರು: ನಗರದ ಹೊರ ವರ್ತುಲ ರಸ್ತೆಯಲ್ಲಿರುವ ಡಾ ರಾಜ್​ಕುಮಾರ್ ಸಮಾಧಿ ಪ್ರದೇಶದ ಅಭಿವೃದ್ಧಿ ಕುರಿತ ಪ್ರಸ್ತಾಪಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಸಮ್ಮತಿ ನೀಡಿದ್ದು, ಯೋಜನಾ ಅಂದಾಜು ವೆಚ್ಚ ಕುರಿತು ವರದಿ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿದ್ದಾರೆ.

ಸಿಎಂ ಬೊಮ್ಮಾಯಿ ಭೇಟಿಯಾದ ರಾಜ್ ಕುಟುಂಬ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಇಂದು ಚಿತ್ರ ನಟ ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್ ಸೇರಿದಂತೆ ರಾಜ್​​ಕುಮಾರ್ ಕುಟುಂಬದ ಸದಸ್ಯರು ರೇಸ್ ಕೋರ್ಸ್ ನಿವಾಸದಲ್ಲಿ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ವರನಟ ಡಾ ರಾಜಕುಮಾರ್ ಸಮಾಧಿ ಅಭಿವೃದ್ಧಿಗೆ ಸಂಬಂಧಪಟ್ಟಂತೆ ರಾಘವೇಂದ್ರ ರಾಜಕುಮಾರ್ ಅವರು ಸಿಎಂ ಜೊತೆ ಚರ್ಚೆ ನಡೆಸಿದರು. ಇದಕ್ಕೆ ಸಂಬಂಧಪಟ್ಟಂತೆ ರಾಜ್ ಕುಟುಂಬದಿಂದ ಸಿದ್ಧಪಡಿಸಲಾಗಿರುವ ಯೋಜನೆಯ ಪಿಪಿಟಿಯನ್ನು ಸಿಎಂ ಬೊಮ್ಮಾಯಿ ಅವರು ವೀಕ್ಷಣೆ ಮಾಡಿದರು.

ಸಿಎಂ ಬೊಮ್ಮಾಯಿ ಭೇಟಿಯಾದ ರಾಜ್ ಕುಟುಂಬ

ರಾಜ್​ಕುಮಾರ್ ಸಮಾಧಿ ಅಭಿವೃದ್ಧಿ, ಪುನೀತ್ ರಾಜ್‍ಕುಮಾರ್ ಸಮಾಧಿ ಅಭಿವೃದ್ಧಿ ಮತ್ತು ಪಾರ್ವತಮ್ಮ ರಾಜ್‍ಕುಮಾರ್ ಸಮಾಧಿ ಅಭಿವೃದ್ಧಿ ಅಗತ್ಯತೆ ಬಗ್ಗೆ ಸಿಎಂಗೆ ಮನವರಿಕೆ ಮಾಡಿಕೊಟ್ಟರು.

ಇದನ್ನೂ ಓದಿ:Exclusive: ಮಕ್ಕಳ ಮಾನಸಿಕ ಒತ್ತಡ ಮತ್ತು ಜಂಕ್​ ಫುಡ್ ಸೇವನೆಗಿದೆ ನಂಟು

ರಾಜ್ ಕುಟುಂಬದಿಂದ ಸಿದ್ಧಪಡಿಸಿದ ಪಿಪಿಟಿ ವೀಕ್ಷಣೆ ಮಾಡಿದ ನಂತರ ಯೋಜನೆ ಅಂದಾಜು ಮೊತ್ತದ ವರದಿ ಸಿದ್ಧಪಡಿಸುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಿದರು. ಯೋಜನೆಯ ರೂಪುರೇಷೆ ತಯಾರದ ಬಳಿಕ ಮತ್ತೊಂದು ಸುತ್ತಿನೆ ಸಭೆ ಮಾಡೋಣ ಎಂದು ರಾಜ್ ಕುಟುಂಬಕ್ಕೆ ಸಿಎಂ ಬೊಮ್ಮಾಯಿ‌ ಭರವಸೆ ನೀಡಿ, ರಾಜ್ ಸಮಾಧಿ ಪ್ರದೇಶದ ಅಭಿವೃದ್ಧಿಗೆ ಸಕಾರಾತ್ಮಕ ಸ್ಪಂದನೆ ನೀಡಿದರು.

ABOUT THE AUTHOR

...view details