ಕರ್ನಾಟಕ

karnataka

ETV Bharat / state

ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಶೀಘ್ರ ರಾಮನಗರಕ್ಕೆ ಸ್ಥಳಾಂತರ: ಸಚಿವ ಶರಣಪ್ರಕಾಶ್ ಪಾಟೀಲ್ - etv bharat kannada

ಬೆಂಗಳೂರಿನಲ್ಲಿರುವ ನೆಪ್ರೋಯೂರಾಲಜಿ ಸಂಸ್ಥೆಯಲ್ಲಿ ಬಿಪಿಎಲ್ ಪಡಿತರ ಚೀಟಿದಾರರಿಗೆ ಉಚಿತ ಚಿಕಿತ್ಸೆ ಸಿಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

rajiv-gandhi-health-university-to-be-shifted-to-ramnagar-says-minister-sharanprakash-patil
ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯವನ್ನು ಶೀಘ್ರ ರಾಮನಗರಕ್ಕೆ ಸ್ಥಳಾಂತರ: ಸಚಿವ ಶರಣಪ್ರಕಾಶ್ ಪಾಟೀಲ್

By ETV Bharat Karnataka Team

Published : Aug 21, 2023, 6:26 PM IST

ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯವನ್ನು ಶೀಘ್ರ ರಾಮನಗರಕ್ಕೆ ಸ್ಥಳಾಂತರ ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು. ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಮನಗರದಲ್ಲಿ ವಿಶ್ವವಿದ್ಯಾಲಯದ ಆಡಳಿತ ಕಚೇರಿ ಪ್ರಾರಂಭವಾಗಿದೆ. 200 ಎಕರೆ ಜಮೀನು ಲಭ್ಯವಿದ್ದು, ಇನ್ನು 15 ಎಕರೆ ಸ್ವಾಧೀನದ ವಿಚಾರ ನ್ಯಾಯಾಲಯದಲ್ಲಿದೆ. ರಾಮನಗರ ಜಿಲ್ಲೆ ವೈದ್ಯಕೀಯ ಕಾಲೇಜ್ ​ಅನ್ನು ಕನಕಪುರ ತಾಲೂಕಿನಲ್ಲಿ ಮಾಡಲು ತೀರ್ಮಾನಿಸಲಾಗಿದೆ. ಜಿಲ್ಲಾ ಕೇಂದ್ರದಿಂದ 20 ಕಿ.ಲೋ.ಮೀ ಅಂತರದಲ್ಲಿ ಕಾಲೇಜ್ ಸ್ಥಾಪನೆಯಾಗಲಿದೆ ಎಂದು ಹೇಳೀದರು.

ಕೇಂದ್ರಕ್ಕೆ ನಿಯೋಗ: ರಾಯಚೂರಿನಲ್ಲಿ ಏಮ್ಸ್ ಸಂಸ್ಥೆ ಸ್ಥಾಪನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ನಾಳೆ ರಾಜ್ಯದ ನಿಯೋಗ ಕೇಂದ್ರ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಲಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿರುವ ನೆಪ್ರೋಯೂರಾಲಜಿ ಸಂಸ್ಥೆಯಲ್ಲಿ ಬಿಪಿಎಲ್ ಪಡಿತರ ಚೀಟಿದಾರರಿಗೆ ಉಚಿತ ಚಿಕಿತ್ಸೆ ಸಿಗುತ್ತದೆ. ಡಿಎನ್​ಎ ಸೇರಿದಂತೆ ಕೆಲವೊಂದು ಪರೀಕ್ಷೆಗಳಿಗೆ ವೆಚ್ಚವನ್ನು ಭರಿಸಬೇಕಾಗುತ್ತದೆ ಎಂದರು.

ಇದನ್ನೂ ಓದಿ:ವೈಜ್ಞಾನಿಕ ಮನೋಭಾವದ ಪದವೀಧರರನ್ನು ಸಜ್ಜುಗೊಳಿಸಿ: ಉಪಕುಲಪತಿಗಳಿಗೆ ಸಿಎಂ ಸಿದ್ದರಾಮಯ್ಯ ಸಲಹೆ

ಕಳೆದ ವರ್ಷ 43 ಮಂದಿಗೆ ಕಿಡ್ನಿ ಟ್ರಾನ್ಸ್ ಪ್ಲಾಂಟೇಷನ್ ಮಾಡಲಾಗಿದ್ದು, ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ 26 ಮಂದಿಗೆ ಕಿಡ್ನಿ ಮರು ಜೋಡಣೆ ಮಾಡಲಾಗಿದೆ ಎಂದು ವಿವರಿಸಿದರು. ಐಎನ್​ಯನಲ್ಲಿ ಹೊಸ ಕಟ್ಟಡದ ಅವಶ್ಯಕತೆ ಇದೆ. ಐದು ವರ್ಷ ಆದರೂ ಮುಗಿದಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗಿದೆ. ನಾಲ್ಕು ತಿಂಗಳು ಅವರಿಗೆ ಸಮಯ ಕೊಡಲಾಗಿದೆ. ಹೆಚ್ಚಿನ ಸೌಲಭ್ಯ ಅಳವಡಿಕೆಗೆ ಹೇಳಲಾಗಿದೆ ಎಂದು ತಿಳಿಸಿದರು.

ಹಾಸನ ಹಿಮ್ಸ್​​ಗೆ ರವಿಕುಮಾರ್ ಮರು ನೇಮಕ ವಿಚಾರಕ್ಕೆ ಪ್ರತಿಕ್ರಿಯಿಸಿ, ಈಗಾಗಲೇ ರಿಸೈನ್ ಮಾಡಿದ್ದಾರೆ. ಮತ್ತೆ ನೇಮಕದ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಆಗಿಲ್ಲ. ಒಂದು ಬಾರಿ ಆಗಿರುವವರನ್ನು ಮತ್ತೆ ತೆಗೆದುಕೊಳ್ಳಲು ಬರಲ್ಲ. ಅವರು ಮತ್ತೆ ನೇಮಕ ಆಗುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ:SC-ST ವಿದ್ಯಾರ್ಥಿಗಳ ಲ್ಯಾಪ್​ಟಾಪ್​ಗೆ ₹230 ಕೋಟಿ ಒದಗಿಸಲು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ABOUT THE AUTHOR

...view details