ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಕಾರಣಕ್ಕೆ ಆನ್ ಲೈನ್ ನಲ್ಲೇ ಪಾಠ ಪ್ರವಚನ ಮಾಡಲಾಗುತ್ತಿದೆ. ಕಳೆದೊಂದು ವಾರದ ಈಚೆಗೆ ಪದವಿ- ಸ್ನಾತಕೋತ್ತರ ಪದವಿ ಕಾಲೇಜುಗಳು ಆರಂಭಗೊಂಡಿವೆ. ಆದರೆ ವೈದ್ಯಕೀಯ ಕಾಲೇಜುಗಳು ಇನ್ನು ಆರಂಭವೇ ಆಗಿಲ್ಲ. ಈ ಮಧ್ಯೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯವು ತರಾತುರಿಯಲ್ಲಿ ಜನವರಿ 19 ರಿಂದ ಎಲ್ಲಾ ವೈದ್ಯಕೀಯ ಪರೀಕ್ಷೆಯನ್ನ ನಡೆಸುವ ಕುರಿತು ತಿಳಿಸಿದೆ.
ಇದರಿಂದ ಆತಂಕಕ್ಕೆ ಒಳಗಾಗಿರುವ ವೈದ್ಯಕೀಯ ವಿದ್ಯಾರ್ಥಿಗಳು, ಕಾಲೇಜು ಆರಂಭವಾಗಿಲ್ಲ, ಈ ಮಧ್ಯೆ ಆನ್ ಲೈನ್ ನಲ್ಲಿ ಕ್ಲಾಸ್ ನಡಿತಿದೆ. ಆನ್ ಲೈನ್ ಕ್ಲಾಸ್ ನಲ್ಲೇ ಸಿಲಬಸ್ ಕಂಪ್ಲೀಟ್ ಆಗಿಲ್ಲ. ಹೀಗಿರುವಾಗ ಆಫ್ ಲೈನ್ ಎಕ್ಸಾಂ ಹೇಗೆ ಮಾಡ್ತೀರಾ? ಅಂತ ಪ್ರಶ್ನೆ ಮಾಡಿದ್ದಾರೆ. ಆರು ತಿಂಗಳಿನಿಂದ ಆನ್ ಲೈನ್ ಕ್ಲಾಸಸ್ ಮಾಡ್ತಿದ್ದಾರೆ. ಆದರೆ ಯಾವ ವಿಷ್ಯವೂ ಪೂರ್ಣವಾಗದೇ ಪರೀಕ್ಷೆ ನಡೆಸುವ ಕೆಲಸ ಮಾಡುತ್ತಿರುವುದು ಎಷ್ಟು ಸರಿ ಅಂತ ಪ್ರಶ್ನೆ ಮಾಡಿದ್ದಾರೆ.
ಆನ್ ಲೈನ್ ಪಾಠ ಮಾಡಿ ಆಫ್ ಲೈನ್ ಎಕ್ಸಾಂ ಯಾಕೆ, ಕಾಲೇಜಿನವ್ರು ಆಫ್ ಲೈನ್ ಎಕ್ಸಾಂ ಮಾಡಲಿ ಅಂತ ತಿಳಿಸಿದ್ದಾರೆ. ಬೇರೆ ರಾಜ್ಯಗಳಲ್ಲಿ ಆನ್ ಲೈನ್ ಪರೀಕ್ಷೆ ನಡೆಯುತ್ತಿದೆ, ನಮ್ಮಲ್ಲಿ ಯಾಕಿಲ್ಲ ಅಂತ ಕೇಳ್ತಿದ್ದಾರೆೇ. ಕೋವಿಡ್ ಪಾಸಿಟಿವ್ ಬಂದರೆ ಏನು ಮಾಡೋದು ಅಂತ ಆತಂಕ ಹೊರಹಾಕಿದ್ದಾರೆ.
ಇನ್ನು ಪರೀಕ್ಷೆ ನಡೆಸುವುದು ಬೇಡ ಅಂತಿಲ್ಲ. ಬದಲಿಗೆ ಪರೀಕ್ಷೆ ಮುಂದೂಡುವಂತೆ ರಾಜೀವ್ ಗಾಂಧಿ ವಿವಿಯ ವಿಸಿಗೆ ಮನವಿ ಮಾಡಲಾಗಿದೆ ಅಂತ ಎಐಡಿಎಸ್ಒ ಸಂಚಾಲಕಿ ಸಿತಾರಾ ಹೇಳಿದ್ದಾರೆ. ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ತರಾತುರಿ ನಿರ್ಧಾರದಿಂದ ಆತಂಕಕ್ಕೆ ಒಳಗಾಗಿದ್ದಾರೆ. ಹೀಗಾಗಿ ಇಂದು ನಮ್ಮ ತಂಡವೂ RGUHS ವಿಸಿ ಸಚ್ಚಿದಾನಂದ ಅವರಿಗೆ ಮೆಮೊರಂಡಮ್ ಸಲ್ಲಿಸಲಾಗಿದೆ ಅಂತ ತಿಳಿಸಿದರು.
ಡಿಸೆಂಬರ್ 1 ರಿಂದ ಮೆಡಿಕಲ್ ಕಾಲೇಜು ಆರಂಭವಾಗ್ತಿದೆ. ಒಂದೇ ತಿಂಗಳಲ್ಲಿ ಪರೀಕ್ಷೆ ಸಿದ್ಧತೆ ಮಾಡಿಕೊಳ್ಳಬೇಕು ಅಂದರೆ ಕಷ್ಟವಾಗುತ್ತೆ. ಪ್ರಾಕ್ಟಿಕಲ್ ಕ್ಲಾಸ್ ಬಹಳ ಮುಖ್ಯವಾಗಿದ್ದು, ಪರೀಕ್ಷೆ ಮುಂದೂಡಲು ಮನವಿ ಮಾಡಿದ್ದಾರೆ.