ಬೆಂಗಳೂರು : ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಿ ಎಸ್ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸುವ ಹಿನ್ನೆಲೆ ರಾಜಭವನಕ್ಕೆ ವಿಶೇಷ ಕಳೆ ಬಂದಿದೆ. ಸಂಜೆ 4 ಗಂಟೆಯಿಂದಲೇ ಬಿಎಸ್ವೈ ಅಭಿಮಾನಿಗಳು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಆಗಮಿಸುತ್ತಿದ್ದು, ರಾಜಭವನ ಮಾರ್ಗ ಕೇಸರಿ ಮಯವಾಗಿದೆ.
ನೂತನ ಸಿಎಂ ಸ್ವಾಗತಕ್ಕೆ ಸಜ್ಜಾದ ರಾಜಭವನ... ಎಲ್ಲೆಲ್ಲೂ ಕೇಸರಿಮಯ - Kannada news paper
ಕೇವಲ ಹದಿನೈದು ನಿಮಿಷದ ಕಾರ್ಯಕ್ರಮಕ್ಕೆ ಎರಡು ಗಂಟೆಯ ಮುಂಚಿತವಾಗಿ ಅಭಿಮಾನಿಗಳು ಆಗಮಿಸುತ್ತಿರುವುದು ಕಂಡು ಬರುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನಸೆಳೆಯುತ್ತಿದ್ದು, ರಾಜಭವನ ಕೆಸರಿಮಯವಾಗಿದೆ.
ಬಿಎಸ್ವೈ ಪ್ರಮಾಣವಚನ ಕಾರ್ಯಕ್ರಮಕ್ಕೆ ಈಗಾಗಲೇ ಸಕಲ ಸಿದ್ಧತೆ ಕೈಗೊಂಡಿದ್ದು, ಕನಿಷ್ಠ ನಾಲ್ಕು ಸಾವಿರ ಜನರು ರಾಜಭವನ ಪ್ರವೇಶಿಸುವ ಸಾಧ್ಯತೆಗಳಿದೆ. ಇನ್ನೂ ಮುಖ್ಯರಸ್ತೆಯಲ್ಲಿ ಬೃಹತ್ ಎಲ್ಇಡಿ ಪರದೆಯನ್ನು ಅಳವಡಿಸಲಾಗಿದ್ದು ಬಿಎಸ್ವೈ ಅಭಿಮಾನಿಗಳ ವೀಕ್ಷಣೆಗೆ ವಿಶೇಷ ಅವಕಾಶ ಮಾಡಿಕೊಡಲಾಗಿದೆ.
ಸಂಜೆ ಮುಖ್ಯಮಂತ್ರಿಯಾಗಿ ಬಿಎಸ್ವೈ ಮಾತ್ರ ಪ್ರಮಾಣವಚನ ಸ್ವೀಕರಿಸುತ್ತಿದ್ದು ಯಾವುದೇ ಸಚಿವರಿಂದು ಪ್ರಮಾಣವಚನ ಸ್ವೀಕರಿಸುತ್ತಿಲ್ಲ, ಕೇವಲ ಹದಿನೈದು ನಿಮಿಷದ ಕಾರ್ಯಕ್ರಮಕ್ಕೆ ಎರಡು ಗಂಟೆಯ ಮುಂಚಿತವಾಗಿ ಅಭಿಮಾನಿಗಳು ಆಗಮಿಸುತ್ತಿರುವುದು ಕಂಡು ಬರುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನಸೆಳೆಯುತ್ತಿದ್ದು, ರಾಜಭವನ ಕೇಸರಿಮಯವಾಗಿದೆ.